ಕೊಪ್ಪಳ,: ಸರ್ಕಾರ ಪ್ರಥಮ ಬಾರಿಗೆ ಒನಕೆ ಓಬವ್ವ ಜಯಂತಿ ಆಚರಣೆಗೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಸಂಘಟನೆಗಳು ಸೇರಿ ಮಹಾನ್ ಹೋರಾಟಗಾರ್ತಿ ನಾಡಿನ ಹೆಮ್ಮೆಯ ದಿಟ್ಟ ಮಹಿಳೆ ಒನಕೆ ಓಬವ್ವ ರವರ ಜನ್ಮದಿನಾಚರಣೆ ಆಚರಿಸಲಾಯಿತು.
ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೇಗಾರ ಅವರು ಒನಕ್ಕೆ ಓಬವ್ವ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿ, ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿ, ಜಯಂತಿ ಆಚರಣೆಯನ್ನು ಸರ್ಕಾರ ಘೋಷಿಸಿರುವುದು ಸ್ವಾಗತಾರ್ಹವಾಗಿದೆ. ಪ್ರತಿವರ್ಷ ಅದ್ಧೂರಿಯಾಗಿ ಆಚರಣೆ ಮಾಡಿ ಅವರ ಆದರ್ಶ ಮುಂದಿನ ಯುವ ಪೀಳಿಗೆಗೆ ಅವರ ಪರಿಚಯಿಸುವ ಕೆಲಸ ಆಗಬೇಕಾಗಿದೆ ಎಂದರು.
ಈ ವೇಳೆ ಸಮಾಜದ ಹಿರಿಯರಾದ ಜಿ.ಎಂ. ಬೆಲ್ಲದ, ಮುತ್ತುರಾಜ ಕುಷ್ಟಗಿ, ಕನಕಮೂರ್ತಿ, ಗವಿಸಿದ್ಧಪ್ಪ ಚಲವಾದಿ, ಜಗದೀಶ ಚಲವಾದಿ, ಸಿದ್ದರಾಮ ಹೊಸಮನಿ, ಯಲ್ಲಪ್ಪ ಬಳಗಾನೂರು, ರಮೇಶ ಬೆಲ್ಲದ, ಡಿ.ಕೆ. ಬೆಲ್ಲದ, ಗವಿಸಿದ್ದಪ್ಪ ಬೆಲ್ಲದ, ಸಂಜೀವಪ್ಪ ಹಾವಿನಾಳ, ಮಹಾಂತೇಶ ಚಾಕ್ರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.