ಹಲವೆಡೆ ಓಮಿಕ್ರಾನ್ ಭೀತಿ

ಮಹಾರಾಷ್ಟ್ರ : ಥಾಣೆ ಜಿಲ್ಲೆಗೆ ನ.೧೪ರಂದು ಏಳು ಜನ ದಕ್ಷಿಣ ಆಫ್ರಿಕಾದಿಂದ ಬಂದಿದ್ದು ಅಧಿಕ ಅಪಾಯಕಾರಿ ಎನ್ನಲಾದ ಓಮಿಕ್ರಾನ್ ಹಲವೆಡೆ ಹೊರಹೊಮ್ಮಿರುವ ಬೆನ್ನಲ್ಲಿ ಇವರೆಲ್ಲರಿಗೂ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಆ ೭ ಮಂದಿಯಲ್ಲಿ ನಾಲ್ವರ ಪರೀಕ್ಷೆ ನೆಗೆಟಿವ್ ಬಂದಿದ್ದು, ಇನ್ನುಳಿದ ಮೂವರ ಪರೀಕ್ಷಾ ವರದಿಗಾಗಿ ಕಾಯಲಾಗಿದೆ ಎಂದು ಥಾಣೆ ಪೌರ ಸಂಸ್ಥೆಯ ಆರೋಗ್ಯ ಇಲಾಖೆಯ ಉಪ ಪಾಲಿಕೆ ಆಯುಕ್ತ ಮನೀಷ್ ಜೋಷಿ ಅವರು ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.ನೆರೆಯ ದೊಂಬಿವಿಲಿಗೆ ನವೆಂಬರ್ ೨೪ಕ್ಕೆ ದಕ್ಷಿಣ ಆಫ್ರಿಕಾದಿಂದ ಬಂದ ೩೨ ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನಾ ವೈರಸ್ ಪಾಸಿಟಿವ್ ಆಗಿತ್ತು. ಅವರನ್ನು ಈಗ ಕಲ್ಯಾಣ್-ದೊಂಬಿವಿಲಿ ನಗರಪಾಲಿಕೆಯ ಪೌರ ಕಟ್ಟಡದಲ್ಲಿ ಐಸೋಲೇಷನ್‌ನಲ್ಲಿರಿಸಿದ್ದು, ಅವರ ಮಾದರಿಗಳನ್ನು ಜಿನೋಮ್ ಸೀಕ್ವೇನ್ಸಿಂಗ್‌ಗೆ ಕಳುಹಿಸಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top