ಬೆಂಗಳೂರು: ವೈಮಾನಿಕ ತರಬೇತಿ ಶಾಲೆಗಾಗಿ ಸರ್ಕಾರದ ವತಿಯಿಂದ ಮೀಸಲಿಟ್ಟಿರುವ 214 ಎಕರೆ ಜಾಗವನ್ನು ಯಾವುದೇ ಖಾಸಗಿ ಕಂಪನಿ ಹಾಗೂ ಅಕ್ಕಪಕ್ಕದ ನಿವಾಸಿಗಳು ಒತ್ತುವರಿ ಮಾಡದಂತೆ ಕಟ್ಟೆಚ್ಚರ ವಹಿಸಿ ಹಾಗೂ ಏರ್ ಕ್ರಾಫ್ಟ್ ಗೆ ಸಂಬಂದಿಸಿದ ಎಲ್ಲಾ ನ್ಯೂನ್ಯತೆಗಳನ್ನು ಕೂಡಲೇ ಸರಿಪಡಿಸಿ ತರಬೇತುದಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಬೆಂಗಳೂರು ನಗರದ ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ ಭೇಟಿ ನೀಡಿದ ಸಚಿವ ಬಿ. ನಾಗೇಂದ್ರರವರು ಅಲ್ಲಿನ 5 ಏರ್ ಕ್ರಾಫ್ಟ್ ಹಾಗೂ ರನ್ ವೇ ಗುಣಮಟ್ಟ ಪರಿಶೀಲನೆ ಮಾಡಿ ದುರಸ್ತಿಯಾಗಿರುವ ಏರ್ ಕ್ರಾಫ್ಟ್ ಗಳನ್ನು ಕೂಡಲೇ ಸರಿಪಡಿಸಿ ಒಟ್ಟು 6 ಏರ್ ಕ್ರಾಫ್ಟ್ ಗಳ ಹಾರಾಟಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಿಬೇಕು, ಹೆಲಿಟೂರಿಸಂ ಅಭಿವೃದ್ಧಿ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಹೆಲಿಲಾಂಜ್ ನಿರ್ಮಾಣದ ಕಾಮಗಾರಿ ವೀಕ್ಷಿಸಿ ಖಾಸಗಿ ಸಹಭಾಗೀತ್ವದಲ್ಲಿ ಮೈಸೂರು, ಕೂರ್ಗು, ಚಿಕ್ಕಮಂಗಳೂರು ಪ್ರವಾಸಿತಾಣಗಳಿಗೆ ತೆರಳುವ ಮತ್ತು ಆಗಮಿಸುವ ಅತಿಥಿಗಳಿಗೆ ಸೂಕ್ತ ವ್ಯವಸ್ಥೆಯನ್ನು ನೀಡಬೇಕು ಮತ್ತು ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ವತಿಯಿಂದ ಬಿಲ್ಡರ್ಸ್ ಗೆ ಅನುಕೂಲವಾಗುವಂತೆ ಕಲರ್ ಕೋಟಿಂಗ್ ಸರ್ವೇ ಮಾಡಿಸಿ ಒಂದು ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಿ ಅನುಮೋದನೆ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಿ ಎಂದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಿಳಿಸಿದರು
ಇನ್ನು ಇದೇ ವೇಳೆ ಸಚಿವರಿಗೆ ಅಲ್ಲಿನ ಸಿ. ಎಫ್ ಐ & ಎ ಎಫ್ ಐ ಪೈಲೆಟ್ ಗಳು ತಮ್ಮ ತರಬೇತಿಯ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ನಂತರ ಸಚಿವರ ಭೇಟಿಯ ಸವಿ ನೆನಪಿಗಾಗಿ ಎಲ್ಲಾ ಸಿಬ್ಬಂದಿಗಳು ಸಚಿವರೊಂದಿಗೆ ಗುಂಪು ಭಾವಚಿತ್ರ ತೆಗೆಸಿಕೊಂಡರು.
ಈ ಸಂಧರ್ಭದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್. ಎನ್ , ಆಯುಕ್ತರಾದ ಶಶಿಕುಮಾರ್, ಉಪನಿರ್ದೇಶಕರಾದ ಜಿತೇಂದ್ರ ಶೆಟ್ಟಿ, ಇನ್ನಿತರರು ಉಪಸ್ಥಿತರಿದ್ದರು.