ಬೆಂಗಳೂರು: ರಾಜ್ಯಪಾಲರು ಮತ್ತು ಪ್ರತಿಪಕ್ಷಗಳ ಆಡಳಿತದ ರಾಜ್ಯ ಸರ್ಕಾರಗಳ ನಡುವಿನ ಘರ್ಷಣೆ ಹೆಚ್ಚುತ್ತಿದ್ದು, ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಸೋಮವಾರ ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಬೇಕು ಅಥವಾ ರಾಜಕೀಯದಲ್ಲಿಲ್ಲದ ವ್ಯಕ್ತಿಯನ್ನು ಒಮ್ಮತದಿಂದ ನೇಮಿಸಬೇಕು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ತೆಲಂಗಾಣದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಸಿಂಘ್ವಿ, ಸಂಸತ್ತಿನ ಉಭಯ ಸದನಗಳಲ್ಲಿ ಸಭಾಧ್ಯಕ್ಷರ ಮತ್ತು ಪ್ರತಿಪಕ್ಷಗಳ ನಡುವಿನ ಪುನರಾವರ್ತಿತ ಘರ್ಷಣೆಯನ್ನು ಉಲ್ಲೇಖಿಸಿದ್ದಾರೆ. ಸಭಾಧ್ಯಕ್ಷರು ಪಕ್ಷಪಾತಿಯಲ್ಲ ಎಂದು ಖಚಿತಪಡಿಸಿಕೊಳ್ಳಲು ಸುಧಾರಣೆ ತರಬೇಕು ಎಂದು ಕರೆ ನೀಡಿದ್ದಾರೆ.
ನಾಲ್ಕು ಬಾರಿ ಸಂಸದರಾಗಿರುವ ಸಿಂಘ್ವಿ, ಈ ಸರ್ಕಾರದ ಅತ್ಯಂತ ದೊಡ್ಡ ವೈಫಲ್ಯವೆಂದರೆ ಅದು ಪ್ರತಿ ಸಂಸ್ಥೆಯನ್ನು “ಅವಮಾನ, ಅಪಮೌಲ್ಯಗೊಳಿಸುತ್ತಿದೆ ಮತ್ತು ಕುಗ್ಗಿಸಿತ್ತಿದೆ”. ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡಿರುವ ಹಲವಾರು ನಿದರ್ಶನಗಳಿವೆ” ಎಂದಿದ್ದಾರೆ.
ರಾಜ್ಯಪಾಲರ ಹುದ್ದೆಯನ್ನು ರದ್ದುಪಡಿಸಬೇಕು ಅಥವಾ ಒಮ್ಮತದ ಮೂಲಕ ಈ ಕ್ಷುಲ್ಲಕ ರಾಜಕೀಯಕ್ಕೆ ಬಾರದ ವ್ಯಕ್ತಿಯನ್ನು ನೇಮಿಸಬೇಕು ಎಂದು ಸಿಂಘ್ವಿ ಪ್ರತಿಪಾದಿಸಿದ್ದಾರೆ.