ಬೆಂಗಳೂರು: ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಗೆ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಆಗಿಲ್ಲ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ವಿಧಾನ ಸಭೆಯಲ್ಲಿ ಬಿಜೆಯ ವಿಜಯೇಂದ್ರ ಅವರ ಪ್ರೆಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಶಾಸಕರ ಕ್ಷೇತ್ರ ಗಳಿಗೆ ಮಾತ್ರ ಅನುದಾನ ನೀಡಲಾಗಿದೆ ಎಂಬುದು ಸುಳ್ಳು. ಬಿಜೆಪಿಯ 29 ಹಾಗೂ ಜೆಡಿಎಸ್ ನ 8 ಶಾಸಕರ ಕ್ಷೇತ್ರಕ್ಕೂ ಅನುದಾನ ನೀಡಲಾಗಿದೆ. ಪ್ರತಿಪಕ್ಷ ನಾಯಕ ಅಶೋಕ್ ಅವರ ಕ್ಷೇತ್ರಕ್ಕೂ 5 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಅಂಕಿ ಸಂಖ್ಯೆ ಸಮೇತ ತಿಳಿಸಿದರು.
ಅಲ್ಪಸಂಖ್ಯಾತರರಿಗೆ ಸರ್ಕಾರ ಸಾವಿರಾರು ಕೋಟಿ ರೂ. ನೀಡಿದೆ ಎಂಬ ವಿಜಯೇಂದ್ರ ಅವರ ಮಾತಿಗೆ ಸಿಟ್ಟಿಗೆದ್ದ ಜಮೀರ್ ಅಹಮದ್ ಖಾನ್ ಅವರು, ಸಾವಿರಾರು ಕೋಟಿ ರೂ. ಕೊಟ್ಟಿಲ್ಲ. ರಾಜ್ಯದ ಬಜೆಟ್ ಗಾತ್ರ 3.71 ಲಕ್ಷ ಕೋಟಿ ರೂ. ಅದರಲ್ಲಿ ಶೇ.1 ರಷ್ಟು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಿಲ್ಲ. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಯವರ ಸೂಚನೆ ಮೇರೆಗೆ ಒಂದು ಸಾವಿರ ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಿದ್ದು ಹಂತ ಹಂತ ವಾಗಿ ಅನುಷ್ಠಾನ ಮಾಡಲಾಗುವುದು. ಇದುವರೆಗೂ ಬಿಡುಗಡೆ ಮಾಡಲಾಗಿರುವ ಮೊತ್ತ 162 ಕೋಟಿ ರೂ. ಮಾತ್ರ ಎಂದು ತಿಳಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಸಮುದಾಯದ 1.20 ಲಕ್ಷ ಜನಸಂಖ್ಯೆ ಇದ್ದು ನಮಗೆ ಅನುದಾನ ನೀಡಿಲ್ಲ ಎಂದಾಗ, ನೀವು ಮುಸಲ್ಮಾನರ ಮತ ನನಗೆ ಬೇಡ, ನನ್ನ ಬಳಿ ಅವರು ಬರುವುದು ಬೇಡ ಎಂದು ಹೇಳುತ್ತೀರಿ. ಅನುದಾನ ಬೇಕು ಎಂದು ಒಂದು ಪತ್ರವೂ ಕೊಟ್ಟಿಲ್ಲ, ಹೇಗೆ ಅನುದಾನ ಬಿಡುಗಡೆ ಮಾಡುವುದು. ನೀವು ಅಲ್ಪಸಂಖ್ಯಾತರ ಸಮುದಾಯದ ಪರವಾಗಿ ಬಂದು ಕೇಳಿದರೆ 10 ಕೋಟಿ ರೂ. ಅನುದಾನ ಕೊಡುತ್ತೇನೆ ಎಂದು ಹೇಳಿದರು.
Thanks for sharing. I read many of your blog posts, cool, your blog is very good.