LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
International News

ಥೈಲೆಂಡ್ ಗ್ಲೋಬಲ್ ಯೋಗ ಫೆಸ್ಟಿವಲ್–2026ರಲ್ಲಿ ಬಳ್ಳಾರಿ ಜಿಲ್ಲೆಯ ಯೋಗ ಶಿಕ್ಷಕ ಎಸ್ ಆರ್ ಕೆ ಯೋಗ ಕೇಂದ್ರದ,ಎ. ರಾಘವೇಂದ್ರ ಅವರಿಗೆ 'ಯೋಗ ವಾಹಕ' ಪ್ರಶಸ್ತಿ

ಬಳ್ಳಾರಿ: ಭಾರತ–ಥೈಲೆಂಡ್ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಥೈಲೆಂಡ್‌ನಲ್ಲಿ ಆಯೋಜಿಸಲಾದ ಭಾರತ–ಥೈಲೆಂಡ್ ಗ್ಲೋಬಲ್ ಯೋಗ ಫೆಸ್ಟಿವಲ್–2026ರಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕುರೇಕುಪ್ಪ ಗ್ರಾಮದ ಯೋಗ ಶಿಕ್ಷಕ ಹಾಗೂ ವಿಶ್ವ ಯೋಗಿ ಪುರಸ್ಕೃತ ಎ. ರಾಘವೇಂದ್ರ ಅವರಿಗೆ ಪ್ರತಿಷ್ಠಿತ 'ಯೋಗ ವಾಹಕ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಅಂತರರಾಷ್ಟ್ರೀಯ ಯೋಗ ಮಹೋತ್ಸವವನ್ನು ಇಂಡಿಯಾ–ಥೈ ಚೇಂಬರ್ ಆಫ್ ಕಾಮರ್ಸ್, ಥೈಲೆಂಡ್, ಗ್ಲೋಬಲ್ ಯೋಗ ಟೀಮ್, ಬೆಂಗಳೂರು, ಡಾ. ದೇವರಾಜ್ ಗುರುಜಿ, ಯೋಗಾಚಾರ್ಯ ಎಸ್.ಎಸ್. ಹಿರೇಮಠ ಗುರುಜಿ, ಹಾಗೂ ಶಿವಾನಂದ ಯೋಗ ಕಾಲೇಜು, ಗದಗ ಅವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಥೈಲೆಂಡ್‌ನ ಖ್ಯಾತ ನಟಿ ಮಿಸ್ ಒನಾಸಸಿಪಾಟ್ ಮಾಮೀಕೆಟ್ರಾಟ್ (Miss Onasasipat Mameeketrat) ಅವರು ಎ. ರಾಘವೇಂದ್ರ ಅವರಿಗೆ 'ಯೋಗ ವಾಹಕ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಎ. ರಾಘವೇಂದ್ರ ಅವರು, ಈ ಗೌರವ ಪಡೆಯಲು ಯೋಗಾಚಾರ್ಯ ಎಸ್.ಎಸ್. ಹಿರೇಮಠ ಗುರುಜಿ, ಕೆ. ರಮೇಶ್ ಗುರುಜಿ, ಕೆ. ಚಿಂಬರರಾವ್, ಹರಗಿನದೋಣಿ ಸರ್ಕಾರಿ ಶಾಲೆಯ ಶಿಕ್ಷಕಿ ವನಜಾಕ್ಷಿ ಮ್ಯಾಡಂ, ಯೋಗ ಶಿಕ್ಷಕಿ ಸೌಮ್ಯ, ಹಾಗೂ ಎಸ್‌ಆರ್‌ಕೆ ಯೋಗ ಕೇಂದ್ರದ ಎಲ್ಲಾ ಯೋಗ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಮಕ್ಕಳ ಪ್ರೋತ್ಸಾಹ, ಸಹಕಾರ ಮತ್ತು ಆಶೀರ್ವಾದವೇ ಪ್ರಮುಖ ಕಾರಣವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗದಗದ ಯೋಗಾಚಾರ್ಯ ಎಸ್.ಎಸ್. ಹಿರೇಮಠ ಗುರುಜಿ, ಸುನೀಲ್ ಹಿರೇಮಠ, ಬೆಳಗಾವಿಯ ಸಂಗಮೇಶ್, ದಾವಣಗೆರೆಯ ಗಂಗಾಂಬಿಕಾ, ಹಾಗೂ ಕೊಪ್ಪಳ ಜಿಲ್ಲೆಯ ಮರಿಸ್ವಾಮಿ ಕೆ. ಅವರಿಗೂ 'ಯೋಗ ವಾಹಕ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ದೇವರಾಜ್ ಗುರುಜಿ ಹಾಗೂ ಯೋಗಾಚಾರ್ಯ ಎಸ್.ಎಸ್. ಹಿರೇಮಠ ಗುರುಜಿ, "Local to Global – Global to Local" ಪರಿಕಲ್ಪನೆಯಡಿ ಯೋಗವನ್ನು ಪ್ರತಿಯೊಂದು ಹಳ್ಳಿ, ಪಟ್ಟಣ ಹಾಗೂ ನಗರದಿಂದ ವಿಶ್ವದ ಪ್ರತಿಯೊಂದು ದೇಶಕ್ಕೂ ತಲುಪಿಸುವ ಸಂಕಲ್ಪ ಹೊಂದಿದ್ದು, ಇಂತಹ ಅಂತರರಾಷ್ಟ್ರೀಯ ಯೋಗ ಉತ್ಸವಗಳನ್ನು ಪ್ರತಿವರ್ಷ ಆಯೋಜಿಸುವ ಮೂಲಕ ಕರ್ನಾಟಕ ಮತ್ತು ಭಾರತದ ಗ್ರಾಮೀಣ ಭಾಗಗಳ ಯೋಗ ಪ್ರತಿಭೆಗಳನ್ನು ಜಾಗತಿಕ ವೇದಿಕೆಗೆ ಪರಿಚಯಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಥೈಲೆಂಡ್‌ನ ಯೋಗ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ಸಮೂಹ ಯೋಗ ಪ್ರದರ್ಶನ ನೀಡಿ ನೆರೆದವರ ಮೆಚ್ಚುಗೆಗೆ ಪಾತ್ರರಾದರು.

ಈ ಅಂತರರಾಷ್ಟ್ರೀಯ ಯೋಗ ಉತ್ಸವವು ಭಾರತ ಮತ್ತು ಥೈಲೆಂಡ್ ನಡುವಿನ ಯೋಗ, ಸಂಸ್ಕೃತಿ, ಆರೋಗ್ಯ ಮತ್ತು ಸ್ನೇಹ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದ್ದು, "ಯೋಗದಿಂದ ವಿಶ್ವಶಾಂತಿ – ಯೋಗದಿಂದ ವಿಶ್ವಬಂಧುತ್ವ" ಎಂಬ ಸಂದೇಶವನ್ನು ವಿಶ್ವದಾದ್ಯಂತ ಸಾರುವಲ್ಲಿ ಯಶಸ್ವಿಯಾಯಿತು.

 

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ರಾಜ್ಯಪಾಲರಾಗಿ ಸುಧಾ ಯಾದವ್‌ ಅಧಿಕಾರ ಸ್ವೀಕಾರಪ್ರತಿ ಕುಟುಂಬಕ್ಕೆ ಒಂದೊಂದು ಸರ್ಕಾರಿ ಉದ್ಯೋಗ; ಹೆಚ್.ಡಿ.ಕುಮಾರಸ್ವಾಮಿ ಹೊಸ ಆಲೋಚನೆಬಳ್ಳಾರಿ: ಕುಡಿಯುವ ನೀರಿನ ಅಭಾವ ತಡೆಗೆ ಜಿಲ್ಲಾಡಳಿತ ಸನ್ನದ್ಧ; ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆಜಮೀರ್‌ ವಿಡಿಯೋ ಹರಿಬಿಟ್ಟಿರಬಹುದು? ಸಿದ್ದರಾಮಯ್ಯ ಆಪ್ತರಿಂದಲೇ ವ್ಯವಸ್ಥಿತ ಸಂಚು: ಎಚ್.ಡಿ. ಕುಮಾರ ಸ್ವಾಮಿರಾಜ್ಯದಲ್ಲಿ ಇನ್ನೂ ಬೇಸಿಗೆ ಆರಂಭವಾಗುವ ಮುನ್ನವೇ ವಿದ್ಯುತ್‌ ಕೊರತೆಯ ಆತಂಕಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ: ಸಿಎಂ ಡಿ ಕೆ ಶಿವಕುಮಾರ್ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು: ಹೆಚ್.ಡಿ. ಕುಮಾರಸ್ವಾಮಿ ಅವರ ಗಂಭೀರ ಆರೋಪರಾಜ್ಯದ 226 ತಾಲ್ಲೂಕುಗಳು ಬರಪೀಡಿತ; ₹60 ಸಾವಿರ ಕೋಟಿಗೂ ಅಧಿಕ ನಷ್ಟದ ಅಂದಾಜು : ಡಾ. ಜಿ. ಪರಮೇಶ್ವರ್ರಾಬಕೊವಿ ಹಾಲು ಒಕ್ಕೂಟದಲ್ಲಿ 16.5 ಕೋಟಿ ಅಕ್ರಮದ ಆರೋಪ, ದೂರು ದಾಖಲು