LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
International News

10 ಬಿಲಿಯನ್ ಡಾಲರ್ ವ್ಯಾಪಾರಕ್ಕೆ ಮುನ್ನುಡಿ! ಬೆಂಗಳೂರು–ಲಿಮಾ 'ಸಿಸ್ಟರ್-ಸಿಟಿ' ಒಪ್ಪಂದಕ್ಕೆ ರಾಜ್ಯ ಸರ್ಕಾರ ಮುಂದು!

ಬೆಂಗಳೂರು, ಜೂ. 29: ಭಾರತ–ಪೆರು ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮಹತ್ವಾಕಾಂಕ್ಷಿ ಹೆಜ್ಜೆಯಾಗಿ, ಪೆರು ರಾಜಧಾನಿ ಲಿಮಾ ಮತ್ತು ಬೆಂಗಳೂರು ನಡುವೆ ಐತಿಹಾಸಿಕ 'ಸಿಸ್ಟರ್-ಸಿಟಿ' ಒಪ್ಪಂದ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಉತ್ಸುಕವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಪೆರು ಗಣರಾಜ್ಯದ 205ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಭಾರತ–ಪೆರು ನಡುವಿನ 63 ವರ್ಷಗಳ ರಾಜತಾಂತ್ರಿಕ ಬಾಂಧವ್ಯದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ರಾಜತಾಂತ್ರಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪೆರುವಿನ ಸ್ವಾತಂತ್ರ್ಯ ಹೋರಾಟಗಳ ನಡುವಿನ ಐತಿಹಾಸಿಕ ಸಾಮ್ಯತೆಯನ್ನು ಸ್ಮರಿಸಿದರು.

ಕರ್ನಾಟಕದ ಸಾಧನೆಗೆ ಮೆಚ್ಚುಗೆ

ರಾಜ್ಯವು ದೇಶದ ಐಟಿ ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಜೈವಿಕ ತಂತ್ರಜ್ಞಾನ ಉತ್ಪಾದನೆಯಲ್ಲಿ ಶೇ.40ಕ್ಕೂ ಹೆಚ್ಚು ಪಾಲು ಹೊಂದಿದ್ದು, ಈ ಕ್ಷೇತ್ರಗಳಲ್ಲಿ ರಾಷ್ಟ್ರದ ಮುಂಚೂಣಿಯಲ್ಲಿದೆ ಎಂದು ಪರಮೇಶ್ವರ್ ಹೇಳಿದರು. ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ರಾಜ್ಯದ ಹೂಡಿಕೆ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು.

10 ಬಿಲಿಯನ್ ಡಾಲರ್ ವ್ಯಾಪಾರದ ಗುರಿ

ಬೆಂಗಳೂರು–ಲಿಮಾ ನಡುವಿನ ಸಿಸ್ಟರ್-ಸಿಟಿ ಒಪ್ಪಂದದಿಂದ ವ್ಯಾಪಾರ, ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಹಾಗೂ ಸಾಂಸ್ಥಿಕ ಸಹಕಾರಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿದ್ದು, ಭವಿಷ್ಯದಲ್ಲಿ 10 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಸಾಧಿಸಲು ಇದು ಭದ್ರ ಅಡಿಪಾಯವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ರಾಜತಾಂತ್ರಿಕರ ಭಾಗಿ

ಕಾರ್ಯಕ್ರಮದಲ್ಲಿ ಪೆರು ರಾಯಭಾರಿ ಜೇವಿಯರ್ ಮ್ಯಾನುಯೆಲ್ ಪೌಲಿನಿಚ್ ವೆಲಾರ್ಡ್, ಪೆರುವಿನ ಗೌರವ ಕಾನ್ಸುಲ್ ವಿಕ್ರಮ್ ವಿಶ್ವನಾಥ್, ವಿವಿಧ ದೇಶಗಳ ರಾಜತಾಂತ್ರಿಕರು, ಉನ್ನತ ಅಧಿಕಾರಿಗಳು ಹಾಗೂ ಬೆಂಗಳೂರಿನ ಪ್ರಮುಖ ಉದ್ಯಮಿಗಳು ಭಾಗವಹಿಸಿದ್ದರು.

 

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ರಾಜ್ಯಪಾಲರಾಗಿ ಸುಧಾ ಯಾದವ್‌ ಅಧಿಕಾರ ಸ್ವೀಕಾರಪ್ರತಿ ಕುಟುಂಬಕ್ಕೆ ಒಂದೊಂದು ಸರ್ಕಾರಿ ಉದ್ಯೋಗ; ಹೆಚ್.ಡಿ.ಕುಮಾರಸ್ವಾಮಿ ಹೊಸ ಆಲೋಚನೆಬಳ್ಳಾರಿ: ಕುಡಿಯುವ ನೀರಿನ ಅಭಾವ ತಡೆಗೆ ಜಿಲ್ಲಾಡಳಿತ ಸನ್ನದ್ಧ; ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆಜಮೀರ್‌ ವಿಡಿಯೋ ಹರಿಬಿಟ್ಟಿರಬಹುದು? ಸಿದ್ದರಾಮಯ್ಯ ಆಪ್ತರಿಂದಲೇ ವ್ಯವಸ್ಥಿತ ಸಂಚು: ಎಚ್.ಡಿ. ಕುಮಾರ ಸ್ವಾಮಿರಾಜ್ಯದಲ್ಲಿ ಇನ್ನೂ ಬೇಸಿಗೆ ಆರಂಭವಾಗುವ ಮುನ್ನವೇ ವಿದ್ಯುತ್‌ ಕೊರತೆಯ ಆತಂಕಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ: ಸಿಎಂ ಡಿ ಕೆ ಶಿವಕುಮಾರ್ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು: ಹೆಚ್.ಡಿ. ಕುಮಾರಸ್ವಾಮಿ ಅವರ ಗಂಭೀರ ಆರೋಪರಾಜ್ಯದ 226 ತಾಲ್ಲೂಕುಗಳು ಬರಪೀಡಿತ; ₹60 ಸಾವಿರ ಕೋಟಿಗೂ ಅಧಿಕ ನಷ್ಟದ ಅಂದಾಜು : ಡಾ. ಜಿ. ಪರಮೇಶ್ವರ್ರಾಬಕೊವಿ ಹಾಲು ಒಕ್ಕೂಟದಲ್ಲಿ 16.5 ಕೋಟಿ ಅಕ್ರಮದ ಆರೋಪ, ದೂರು ದಾಖಲು