ಹೊಸಪೇಟೆ (ವಿಜಯನಗರ): ಜಿಲ್ಲೆಯ ನಾನಾ ಭಾಗಗಳಲ್ಲಿ ಸರಣಿ ಕಳ್ಳತನ ನಡೆಸಿ ಸಾರ್ವಜನಿಕರ ನಿದ್ದೆಗೆಡಿಸಿದ್ದ ಖದೀಮರ ಗ್ಯಾಂಗ್‌ಗೆ ವಿಜಯನಗರ ಜಿಲ್ಲಾ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಹೊಸಪೇಟೆ ಹಾಗೂ ಹರಪನಹಳ್ಳಿ ಉಪ-ವಿಭಾಗದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಬರೋಬ್ಬರಿ 27 ಲಕ್ಷ ರೂಪಾಯಿ ಮೌಲ್ಯದ ಕಳ್ಳತನದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು 6 ಜನ ಆರೋಪಿಗಳನ್ನು ಕಳ್ಳತನದ ನಗದು, ಚಿನ್ನ ಹಾಗೂ ಬೈಕ್‌ಗಳ ಸಮೇತ ಕಂಬಿ ಹಿಂದೆ ತಳ್ಳಲಾಗಿದೆ.
ಕಲ್ಯಾಣ ಮಂಟಪಗಳೇ ಇವರ ಟಾರ್ಗೆಟ್!
ಬಂಧಿತ ಆರೋಪಿಗಳು ಮದುವೆ ಹಾಗೂ ಶುಭ ಸಮಾರಂಭಗಳು ನಡೆಯುವ ಕಲ್ಯಾಣ ಮಂಟಪಗಳನ್ನೇ ತಮ್ಮ ಕಳ್ಳತನಕ್ಕೆ ಪ್ರಮುಖ ಅಡ್ಡಾವನ್ನಾಗಿಸಿಕೊಂಡಿದ್ದರು. ಹರಪನಹಳ್ಳಿ ಮತ್ತು ಚಿತ್ತವಾಡ್ಗಿಯ ಕಲ್ಯಾಣ ಮಂಟಪಗಳಲ್ಲಿ ಜನನಿಬಿಡ ಸಂದರ್ಭದ ಲಾಭ ಪಡೆದು ಸಾರ್ವಜನಿಕರ ಚಿನ್ನದ ಆಭರಣಗಳನ್ನು ದೋಚುತ್ತಿದ್ದರು. ಸದ್ಯ ಆರೋಪಿಗಳ ಬಂಧನದಿAದ ಮದುವೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು ಭೇದಿಸಿದಂತಾಗಿದೆ.
ಯಾವ ಠಾಣೆ ವ್ಯಾಪ್ತಿಯಲ್ಲಿ ಏನೇನು ಜಪ್ತಿ?
ವಿಜಯನಗರ ಜಿಲ್ಲೆಯ ಪೊಲೀಸರು ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ: ಈ ವ್ಯಾಪ್ತಿಯಲ್ಲಿ ಭರ್ಜರಿ ಬೇಟೆಯಾಡಿರುವ ಪೊಲೀಸರು, ಒಟ್ಟು 11 ಲಕ್ಷ ರೂಪಾಯಿ ಮೌಲ್ಯದ 6 ಬೈಕ್‌ಗಳು ಹಾಗೂ 33 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ತವಾಡ್ಗಿ ಪೊಲೀಸ್ ಠಾಣೆ: ಬೈಕ್ ಕಳ್ಳರ ಹೆಡೆಮುರಿ ಕಟ್ಟಿರುವ ಪೊಲೀಸರು, 4 ಲಕ್ಷದ 75 ಸಾವಿರ ರೂಪಾಯಿ ಮೌಲ್ಯದ ಒಟ್ಟು 9 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಹೂವಿನ ಹಡಗಲಿ ಪೊಲೀಸ್ ಠಾಣೆ: ಇಲ್ಲಿ ನಡೆದ ಕಾರ್ಯಾಚರಣೆಯಲ್ಲಿ 3 ಲಕ್ಷ ರೂಪಾಯಿ ಮೌಲ್ಯದ 52 ಗ್ರಾಂ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ.
ಹರಪನಹಳ್ಳಿ ಪೊಲೀಸ್ ಠಾಣೆ: ಈ ಠಾಣಾ ವ್ಯಾಪ್ತಿಯಲ್ಲಿ 2.80 ಲಕ್ಷ ರೂಪಾಯಿ ಮೌಲ್ಯದ 28 ಗ್ರಾಂ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರಿಗೆ ಎಸ್ಪಿಯಿಂದ ಶಹಬ್ಬಾಸ್ಗಿರಿ!
ಒಟ್ಟು 6 ಜನ ಆರೋಪಿಗಳನ್ನು ಬಂಧಿಸುವ ಮೂಲಕ ಜಿಲ್ಲೆಯ ಹಲವು ಪ್ರಮುಖ ಕಳ್ಳತನ ಪ್ರಕರಣಗಳ ರಹಸ್ಯವನ್ನು ಒಂದೇ ಬಾರಿಗೆ ಬೇಧಿಸಿದ ಪೊಲೀಸರ ದಕ್ಷ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಅತ್ಯುತ್ತಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಕಳ್ಳರ ಹೆಡೆಮುರಿ ಕಟ್ಟಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಾಹ್ನವಿ ಅವರು ಮುಕ್ತ ಕಂಠದಿAದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.