LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
International News

ಭೂಕಂಪನದ ಲಾಭ ಪಡೆದು ಜೈಲಿನಿಂದ ಪರಾರಿಯಾದ 216 ಕೈದಿಗಳು-ಪಾಕ್‌ ಕೈದಿಗಳು!

ಪಾಕಿಸ್ತಾನದಲ್ಲಿ ಭೂಕಂಪ ಸಂಭವಿಸಿದ್ದು ಪಾಕ್ ಕೈದಿಗಳು ಜೈಲಿನಿಂದ ಎಸ್ಕೇಪ್ !
ಕರಾಚಿಯ (Karachi) ಜಿಲ್ಲಾ ಜೈಲು ಮಾಲಿರ್ ನಲ್ಲಿ ಸೋಮವಾರ ಸರಣಿ ಭೂಕಂಪಗಳು (Earthquake) ನಡೆದಿದ್ದು, ಇದರಿಂದ 216 ಕೈದಿಗಳು ತಪ್ಪಿಸಿಕೊಂಡ ಘಟನೆ ನಡೆದಿದೆ. ಇಲ್ಲಿ 24 ಗಂಟೆಗಳಲ್ಲಿ 3.2 ಮತ್ತು 3.6 ಸೇರಿದಂತೆ ಮೂರು ಕಡಿಮೆ ತೀವ್ರತೆಯ ಭೂಕಂಪಗಳು ಸಂಭವಿಸಿದವು. ಇದರ ಕೇಂದ್ರಬಿಂದು ಲಂಧಿ ಫಾಲ್ಟ್ ಪ್ರದೇಶದಲ್ಲಿತ್ತು. ಭೂಕಂಪನದಿಂದಾಗಿ ಜೈಲಿನ ಗೋಡೆಗಳಲ್ಲಿ ಬಿರುಕು ಮೂಡಿದ್ದು, ಭಾಗಶಃ ಗೋಡೆ ಕುಸಿದಿದೆ. ಇದರಿಂದ ಖೈದಿಗಳು ಸುಲಭವಾಗಿ ಜೈಲಿನಿಂದ ಪರಾರಿಯಾಗಿದ್ದಾರೆ.

ಭೂಕಂಪನದಿಂದಾಗಿ ಪಾಕಿಸ್ತಾನದ ಜೈಲೊಂದರಲ್ಲಿದ್ದ 216 ಖೈದಿಗಳು ತಪ್ಪಿಸಿಕೊಂಡಿರುವ ಘಟನೆ ನಡೆದಿದೆ. ಇದು ಈಗ ಜೈಲುಗಳ ಭದ್ರತೆಯ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ. "ಬಚಾ ಜೈಲು" ಎಂದೇ ಕರೆಯಲ್ಪಡುವ ಕರಾಚಿಯ ಜಿಲ್ಲಾ ಜೈಲು ಮಾಲಿರ್ ನಲ್ಲಿ ಸೋಮವಾರ ಉಂಟಾದ ಸರಣಿ ಭೂಕಂಪನದಿಂದಾಗಿ 216 ಕೈದಿಗಳು ತಪ್ಪಿಸಿಕೊಂಡರು. ಇಲ್ಲಿ 24 ಗಂಟೆಗಳ ಒಳಗೆ 3.2 ಮತ್ತು 3.6 ಸೇರಿದಂತೆ ಮೂರು ಕಡಿಮೆ ತೀವ್ರತೆಯ ಭೂಕಂಪಗಳು ಸಂಭವಿಸಿದವು. ಇದರಿಂದ ಜೈಲಿನ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡು ಭಾಗಶಃ ಕುಸಿತವಾಯಿತು.

ಕರಾಚಿಯ ಜಿಲ್ಲಾ ಜೈಲು ಮಾಲಿರ್ ನಲ್ಲಿ ಸೋಮವಾರ ಸರಣಿ ಭೂಕಂಪಗಳು ನಡೆದಿದ್ದು, ಇದರಿಂದ 216 ಕೈದಿಗಳು ತಪ್ಪಿಸಿಕೊಂಡ ಘಟನೆ ನಡೆದಿದೆ. ಇಲ್ಲಿ 24 ಗಂಟೆಗಳಲ್ಲಿ 3.2 ಮತ್ತು 3.6 ಸೇರಿದಂತೆ ಮೂರು ಕಡಿಮೆ ತೀವ್ರತೆಯ ಭೂಕಂಪಗಳು ಸಂಭವಿಸಿದವು. ಇದರ ಕೇಂದ್ರಬಿಂದು ಲಂಧಿ ಫಾಲ್ಟ್ ಪ್ರದೇಶದಲ್ಲಿತ್ತು. ಭೂಕಂಪನದಿಂದಾಗಿ ಜೈಲಿನ ಗೋಡೆಗಳಲ್ಲಿ ಬಿರುಕು ಮೂಡಿದ್ದು, ಭಾಗಶಃ ಗೋಡೆ ಕುಸಿದಿದೆ. ಇದರಿಂದ ಖೈದಿಗಳು ಸುಲಭವಾಗಿ ಜೈಲಿನಿಂದ ಪರಾರಿಯಾಗಿದ್ದಾರೆ.
ಭೂಕಂಪನದಿಂದಾಗಿ ಜೈಲಿನ ಗೋಡೆ ಕುಸಿದಾಕ್ಷಣ ಕೈದಿಗಳು ಮುಖ್ಯ ದ್ವಾರದ ಮೂಲಕ ಓಡಿಹೋದರು. ಭೂಕಂಪದ ಸಮಯದಲ್ಲಿ ಸುರಕ್ಷತಾ ಕಾರಣಗಳಿಗಾಗಿ 600 ರಿಂದ 1,000 ಕ್ಕೂ ಹೆಚ್ಚು ಕೈದಿಗಳನ್ನು ಅವರ ಬ್ಯಾರಕ್‌ಗಳಿಂದ ಹೊರಗೆ ಸ್ಥಳಾಂತರಿಸಲಾಯಿತು. ಆದರೆ ಭೀತಿ ಹೆಚ್ಚಾದಂತೆ ಕೈದಿಗಳು ಭದ್ರತೆಯನ್ನು ಭೇದಿಸಿ ಹೊರಗೆ ಹೋದರು.

ಈ ಸಂದರ್ಭದಲ್ಲಿ ಕೆಲವರು ಜೈಲಿನ ಕಾವಲುಗಾರರ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಗುಂಡು ಹಾರಿಸಿದರು. ಇದರಿಂದ ಜೈಲಿನ ಒಳಗೆ ಮತ್ತು ಹೊರಗೆ ಭಾರೀ ಗುಂಡಿನ ಸದ್ದು ಕೇಳಿ ಬಂದಿದ್ದು, ಸುತ್ತಮುತ್ತಲಿನ ವಸತಿ ಪ್ರದೇಶಗಳಲ್ಲಿ ಭಯವನ್ನು ಉಂಟುಮಾಡಿದೆ. ಈ ವೇಳೆ ಒಬ್ಬ ಖೈದಿ ಸಾವನ್ನಪ್ಪಿದ್ದು, ಮೂವರು ಫ್ರಾಂಟಿಯರ್ ಕಾರ್ಪ್ಸ್ (ಎಫ್‌ಸಿ) ಸಿಬ್ಬಂದಿ ಮತ್ತು ಒಬ್ಬ ಜೈಲು ಸಿಬ್ಬಂದಿ ಗಾಯಗೊಂಡಿದ್ದಾರೆ.

ಘಟನೆ ಸಂಬಂಧ ಕೂಡಲೇ ತುರ್ತು ಕ್ರಮ ಕೈಗೊಂಡ ಪೊಲೀಸರು ಮತ್ತು ರೇಂಜರ್‌ಗಳು ಜೈಲಿನ ಸುತ್ತಲೂ ಸುತ್ತುವರಿದು ಉಳಿದ ಖೈದಿಗಳು ತಪ್ಪಿಸಿಕೊಳ್ಳದಂತೆ ತಡೆದರು. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವಾರು ಮಾರ್ಗಗಳನ್ನು ಮುಚ್ಚಲಾಯಿತು. ಹೆಚ್ಚಿನ ಖೈದಿಗಳು ಓಡಿಹೋಗದಂತೆ ತಡೆಯಲು ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಬಿಗಿ ಭದ್ರತೆಯನ್ನು ಕೈಗೊಂಡರು ಎಂದು ಎಸ್‌ಎಸ್‌ಪಿ ಮಾಲಿರ್ ಕಾಶಿಫ್ ಅಫ್ತಾಬ್ ಅಬ್ಬಾಸಿ ದೃಢಪಡಿಸಿದರು.

ಇದನ್ನೂ ಓದಿ: Pakistani TikToker: ಪಾಕಿಸ್ತಾನಿ ಟಿಕ್‌ಟಾಕ್‌ ಸ್ಟಾರ್‌ ಶೂಟೌಟ್‌; ಮರ್ಯಾದಾ ಹತ್ಯೆ ಶಂಕೆ

ಜೈಲಿನಿಂದ ತಪ್ಪಿಸಿಕೊಂಡ 216 ಕೈದಿಗಳಲ್ಲಿ 80 ಜನರನ್ನು ಕೆಲವೇ ಗಂಟೆಗಳಲ್ಲಿ ಮತ್ತೆ ಬಂಧಿಸಲಾಯಿತು. ಆದರೆ 135 ಮಂದಿ ತಲೆಮರೆಸಿಕೊಂಡಿದ್ದಾರೆ. ಕರಾಚಿಯ ದಟ್ಟವಾದ ನಗರದಲ್ಲಿ ವ್ಯಾಪಾರ ಚಟುವಟಿಕೆ ಬಿರುಸಾಗಿದ್ದು, ಇದರಿಂದ ತಪ್ಪಿಸಿಕೊಂಡಿರುವ ಖೈದಿಗಳ ಹುಡುಕಾಟ ಸವಾಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಲಿರ್ ಜೈಲಿನಲ್ಲಿ ಮಾದಕವಸ್ತು ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾಗಿರುವ ಹೆಚ್ಚಿನ ಖೈದಿಗಳನ್ನು ಇರಿಸಲಾಗಿದೆ. ಈ ಘಟನೆಯು ಪಾಕಿಸ್ತಾನದ ವಿಪತ್ತು ಸನ್ನದ್ಧತೆ ಮತ್ತು ಜೈಲು ಭದ್ರತಾ ವ್ಯವಸ್ಥೆಗಳಲ್ಲಿನ ವೈಫಲ್ಯಗಳನ್ನು ಎತ್ತಿ ತೋರಿಸಿದೆ.

ತಪ್ಪಿಸಿಕೊಂಡ ಖೈದಿಗಳನ್ನು ಪತ್ತೆ ಹಚ್ಚಲು ಮಾಲಿರ್‌ನಾದ್ಯಂತ ಮಸೀದಿಗಳಿಂದ ಘೋಷಣೆಗಳನ್ನು ಮಾಡಲಾಗಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ರಾಜ್ಯಪಾಲರಾಗಿ ಸುಧಾ ಯಾದವ್‌ ಅಧಿಕಾರ ಸ್ವೀಕಾರಪ್ರತಿ ಕುಟುಂಬಕ್ಕೆ ಒಂದೊಂದು ಸರ್ಕಾರಿ ಉದ್ಯೋಗ; ಹೆಚ್.ಡಿ.ಕುಮಾರಸ್ವಾಮಿ ಹೊಸ ಆಲೋಚನೆಬಳ್ಳಾರಿ: ಕುಡಿಯುವ ನೀರಿನ ಅಭಾವ ತಡೆಗೆ ಜಿಲ್ಲಾಡಳಿತ ಸನ್ನದ್ಧ; ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆಜಮೀರ್‌ ವಿಡಿಯೋ ಹರಿಬಿಟ್ಟಿರಬಹುದು? ಸಿದ್ದರಾಮಯ್ಯ ಆಪ್ತರಿಂದಲೇ ವ್ಯವಸ್ಥಿತ ಸಂಚು: ಎಚ್.ಡಿ. ಕುಮಾರ ಸ್ವಾಮಿರಾಜ್ಯದಲ್ಲಿ ಇನ್ನೂ ಬೇಸಿಗೆ ಆರಂಭವಾಗುವ ಮುನ್ನವೇ ವಿದ್ಯುತ್‌ ಕೊರತೆಯ ಆತಂಕಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ: ಸಿಎಂ ಡಿ ಕೆ ಶಿವಕುಮಾರ್ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು: ಹೆಚ್.ಡಿ. ಕುಮಾರಸ್ವಾಮಿ ಅವರ ಗಂಭೀರ ಆರೋಪರಾಜ್ಯದ 226 ತಾಲ್ಲೂಕುಗಳು ಬರಪೀಡಿತ; ₹60 ಸಾವಿರ ಕೋಟಿಗೂ ಅಧಿಕ ನಷ್ಟದ ಅಂದಾಜು : ಡಾ. ಜಿ. ಪರಮೇಶ್ವರ್ರಾಬಕೊವಿ ಹಾಲು ಒಕ್ಕೂಟದಲ್ಲಿ 16.5 ಕೋಟಿ ಅಕ್ರಮದ ಆರೋಪ, ದೂರು ದಾಖಲು