ಬಳ್ಳಾರಿ : ಬಳ್ಳಾರಿ ಮಹಾನಗರಪಾಲಿಕೆಯ ನೂತನ ಮಹಾಪೌರರಾಗಿ ಇತ್ತೀಚೆಗೆ ತಾನೇ ಚುನಾಯಿತರಾಗಿರುವ ಪಿ.ಗಾದೆಪ್ಪ ಅವರು ನ.24 ರಂದು ಸೋಮವಾರ ಬೆಳಿಗ್ಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸೋಮವಾರ ಬೆಳಿಗ್ಗೆ 9.45 ಗಂಟೆಗೆ ನಗರ ಪಾಲಿಕೆಯ ಮಹಾಪೌರರ ಕಛೇರಿಯಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೇಯರ್ ಪಿ.ಗಾದೆಪ್ಪನವರು ವಿಶೇಷ ಪೂಜೆ ಸಲ್ಲಿಸಿದ ನಂತರ, ವಿದ್ಯುಕ್ತವಾಗಿ ನೂತನ ಮಹಾಪೌರರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ನಗರ ಪಾಲಿಕೆಯ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಾಗೂ ವಿಪಕ್ಷಗಳ ಧುರೀಣರು ಪಾಲ್ಗೊಂಡು ನೂತನ ಮೇಯರ್ ಅವರಿಗೆ ಶುಭ ಹಾರೈಸಲಿದ್ದಾರೆ ಎಂದು ತಿಳಿಸಲಾಗಿದೆ.
ನ.24 ರಂದು ನೂತನ ಮೇಯರ್ ಪಿ.ಗಾದೆಪ್ಪ ಅಧಿಕಾರ ಸ್ವೀಕಾರ



