ನೂತನ ಮೇಯರ್, ಉಪ ಮೇಯರ್ ಅಧಿಕಾರ ಸ್ವೀಕಾರ

ಬಳ್ಳಾರಿ:  ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾಗಿರುವ ಡಿ.ತ್ರಿವೇಣಿ ಹಾಗೂ ಉಪ-ಮಹಾಪೌರರಾದ ಬಿ.ಜಾನಕಿ ಅವರು ಇಂದು ವಿದ್ಯುಕ್ತವಾಗಿ ಪದಗ್ರಹಣ ಮಾಡಿ ಅಧಿಕಾರ ವಹಿಸಿಕೊಂಡಿದ್ದಾರೆ.

 

ಬಳ್ಳಾರಿ ಮಹಾನಗರ ಪಾಲಿಕೆಯ ಎರಡನೇ ಅವಧಿಯ ಮಹಾಪೌರರಾಗಿ ತ್ರಿವೇಣಿಯವರು ಹಾಗೂ ಉಪ-ಮಹಾಪೌರರಾಗಿ ಬಿ.ಜಾನಕಿಯವರು, ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದುದನ್ನು ಇಲ್ಲಿ ಸ್ಮರಿಸಬಹುದು. 

ಬಳ್ಳಾರಿ ಪಾಲಿಕೆಯ ನೂತನ ಮೇಯರ್-ಉಪ ಮೇಯರ್‌ಗಳಾಗಿ ಇವರು ಆಯ್ಕೆಗೊಂಡಿದ್ದರೂ, ಅದರ ಬೆನ್ನ ಹಿಂದೆಯೇ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ, ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ, ವಿದ್ಯುಕ್ತವಾಗಿ ಅಧಿಕಾರ ವಹಿಸಿಕೊಂಡಿರಲಿಲ್ಲ.

 

ಇದೀಗ ಚುನಾವಣೆ ಮುಗಿದು, ನೀತಿ ಸಂಹಿತೆಯೂ ಕೊನೆಗೊಂಡು, ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ನೂತನ ಕ್ಯಾಬಿನೆಟ್ ಸಚಿವರಾಗಿ, ಯುವಜನ ಸಬಲೀಕರಣ, ಕ್ರೀಡಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದು, ಬಳ್ಳಾರಿ ನಗರದ ನೂತನ ಶಾಸಕ ರಾಗಿ ಯುವ ನಾಯಕ ನಾರಾ ಭರತ್ ರೆಡ್ಡಿಯವರು ಆಯ್ಕೆಯಾಗಿದ್ದು, ಇವರಿಬ್ಬರ ಮತ್ತು ರಾಜ್ಯಸಭಾ ಸದಸ್ಯರೂ ಆಗಿರುವ ಎಐಸಿಸಿ ಧುರೀಣ ಡಾ||ಸೈಯದ್ ನಾಸಿರ್ ಹುಸೇನ್ ಅವರ ಸಮ್ಮುಖದಲ್ಲಿ ಇಂದು ಸರಳವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಬಳ್ಳಾರಿ ನಗರದ ಜನತೆಗೆ ಮೂಲಭೂತ ನಾಗರೀಕ ಸೌಲಭ್ಯಗಳನ್ನು ಕಲ್ಪಿಸಲು , ನಗರದ ಸಮಗ್ರ-ಸರ್ವಾಂಗೀಣ ಅಭಿ ವೃದ್ಧಿಗೆ ಶಕ್ತಿಮೀರಿ ಶ್ರಮಿಸುವುದಾಗಿ ನೂತನ ಮೇಯರ್-ಉಪ ಮೇಯರ್ ತಿಳಿಸಿದ್ದಾರೆ.

 

ಈ ಸಂದರ್ಭದಲ್ಲಿ ಕಾಂಗ್ರೆಸ್ ಧುರೀಣರು ಗಳಾದ ಮುಂಡ್ರಿಗಿ ನಾಗರಾಜ್, ಡಿ.ಸೂರಿ, ಬೋಯಪಾಟಿ ವಿಷ್ಣುವರ್ಧನ್, ವೆಂಕಟೇಶ್‌ಹೆಗಡೆ, ಪಾಲಿಕೆಯ ಸದಸ್ಯರು ಗಳಾದ ಪಿ.ಗಾದೆಪ್ಪ, ಮಿಂಚು ಶ್ರೀನಿವಾಸ್, ಮುಲ್ಲಂಗಿ ನಂದೀಶ್, ಪೇರಂ ವಿವೇಕ್ (ವಿಕ್ಕಿ), ಮಾಜಿ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯುಡು, ಪಾಲಿಕೆ ಆಯುಕ್ತ ಎಸ್.ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top