ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗಾವಕಾಶ ಕೋಶ ಸ್ನಾತಕೋತ್ತರ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಸ್ನಾತಕೊತ್ತರ ವಿದ್ಯಾರ್ಥಿಗಳಿಗಾಗಿ ನೆಟ್ ಮತ್ತು ಕೆ ಸೆಟ್ ಪರೀಕ್ಷಾ ತರಬೇತಿ ಕಾರ್ಯಗಾರವನ್ನು ಸೆ.06ರಂದು ಕಾಲೇಜಿನ ವಾಣಿಜ್ಯಶಾಸ್ತ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯೋಗಾವಕಾಶ ಕೋಶದ ಸಂಚಾರಕರಾದ ಪ್ರೊ ವೆಂಕಟೇಶ್ ಬಾಬು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊಳಕಾಲ್ಮುರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ವೀ ಕಿಂಗ್ಡಂ ಯೂಟ್ಯೂಬ್ ಚಾನೆಲ್ ಖ್ಯಾತಿಯ ಪ್ರೊ ವಿಶ್ವ ರಾಜ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಎರಡನೇ ಗೋಷ್ಠಿಯಲ್ಲಿ ಖ್ಯಾತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿದಾರರಾದ ಪಾರ್ಶ್ವನಾಥ್ ಪಾಲ್ಬಾವಿ ರವರು ಮೆಂಟಲ್ ಎಬಿಲಿಟಿ ಕುರಿತು ತರಬೇತಿ ನೀಡುವರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ನಗರದ ವಿನ್ನರ್ಸ್ ಕೆರಿಯರ್ ಅಕಾಡೆಮಿಯ ನಿರ್ದೇಶಕರಾದ ಡಾ. ಶಿವರಾಜ್ ಕಬ್ಬೂರವರು ಆಗಮಿಸಿ ಸಮಾರೋಪ ನುಡಿಗಳನ್ನು ಆಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹಾಗೂ ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಮತ್ತು ಅವುಗಳ ತಯಾರಿ ಕುರಿತು ಮಾಹಿತಿ ನೀಡುವವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ ದಾದಾಪೀರ್ ಬಿ ಸಿ ರವರು ವಹಿಸುವರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗಗಳ ಸಂಚಾಲಕರಾದ ಪ್ರೊ ಮಂಜುನಾಥ್ ಜಯಂ ಪ್ರೊ ಶಿವಕುಮಾರ್ ಕಂಪ್ಲಿ ಕರಬಸಪ್ಪ ನಂದಿಹಳ್ಳಿ ಪ್ರೊ ಸುನೀತಾ ಕೆ ಬಿ ಹಾಗೂ ನಟರಾಜ್ ಡಿ ಆರ್ ಮತ್ತು ಕಾಲೇಜಿನ ಪತ್ರಾಂಕಿತ ವ್ಯವಸ್ಥೆಪಾಕರಾದ ಶ್ರೀಮತಿ ಗೀತಾದೇವಿ ಮತ್ತು ಉದ್ಯೋಗವಕಾಶ ಕೋಶದ ಸಂಚಾಲಕರಾದ ರಾಜ್ ಮೋಹನ್ ಎನ್ ಆರ್ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ಬಿ ಸಿ ತಹಸಿಲ್ದಾರ್ ರವರು ಭಾಗವಹಿಸುವರು