ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಕಾಲೇಜು ವಿದ್ಯರ‍್ಥಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ವಿರುದ್ದ ಯಾರೂ ವಕಾಲತ್ತು ವಹಿಸಬಾರದು ಎಂದು ಅಖಿಲ ಭಾರತ ವೀರಶೈವ ಮಾಹಸಭಾದಿಂದ ವಕೀಲರ ಸಂಘಕ್ಕೆ ಮನವಿ ಸಲ್ಲಿಸಿದ್ದಾರೆ. ಜೊತೆಗೆ ಫಯಾಜ್ಗೆ ಮರಣ ದಂಡನೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ವಿವರ: ಪ್ರತಿಷ್ಠಿತ ಕೆಎಲ್ಇ ಸಂಸ್ಥೆ ಬಿವಿಬಿ ಕ್ಯಾಂಪಸ್ನಲ್ಲಿ ಎಂಸಿಎ ಮೊದಲ ರ‍್ಷದ ವಿದ್ಯರ‍್ಥಿನಿಯನ್ನು, ಕಾಲೇಜಿನ ಮಾಜಿ ವಿದ್ಯರ‍್ಥಿ ಫಯಾಜ್ ಎನ್ನುವ ಯುವಕ ಮನಬಂದಂತೆ ಚಾಕು ಇರಿದು ರ‍್ಬರವಾಗಿ ಹತ್ಯೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ ನೇಹಾಳನ್ನು ಆಸ್ಪತ್ರೆ ಸಾಗಿಸುವ ಮರ‍್ಗ ಮಧ್ಯೆ ಕೊನೆಯುಸಿರು ಎಳೆದಿದ್ದಾಳೆ. ಮೃತ ನೇಹಾ ಹಿರೇಮಠ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನ್ ಹಿರೇಮಠ ಮೊದಲ ಮಗಳು. ಕೊಲೆ ನಡೆದ ಸುದ್ದಿ ಕುಟುಂಬದ ಸದಸ್ಯರಿಗೆ ಬರಸಿಡಿಲಿನಂತೆ ಬಡಿದಪ್ಪಳಿಸಿದೆ. ಕೊಲೆ ಆರೋಪಿಯನ್ನು ಗುಂಡಿಟ್ಟು ಕೊಲ್ಲಿ, ಇಲ್ಲವೆ ಗಲ್ಲಿಗೇರಿಸಿ ಎಂದು ಆಗ್ರಹಿಸಿದ್ದಾರೆ.
ಮೃತ ನೇಹಾ ಬಿವಿಬಿಯಲ್ಲಿ ಪ್ರಥಮ ರ‍್ಷದ ಎಂಸಿಎ ಓದುತ್ತಿದ್ದಳು. ಕೊಲೆ ಮಾಡಿರುವ ಫಯಾಜ್ ಮತ್ತು ನೇಹಾ ಬಿಸಿಎ ಸಹಪಾಠಿಗಳಾಗಿದ್ದರು. ಫಯಾಜ್ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮನವಳ್ಳಿಯ ನಿವಾಸಿ. ಫಯಾಜ್ ತಂದೆ ಬಾಬಾ ಸಾಹೇಬ್, ತಾಯಿ ಮುಮತಾಜ್ ಇಬ್ಬರು ರ‍್ಕಾರಿ ಶಾಲೆಯ ಶಿಕ್ಷಕರು. ಬಿಸಿಎ ಕೊನೆಯ ರ‍್ಷದಲ್ಲಿ ಫಯಾಜ್ ಪೇಲ್ ಆಗಿದ್ದ. ಫಯಾಜ್ ಮೊದಲಿಂದಲೂ ನೇಹಾಳನ್ನು ಪ್ರೀತಿ ಮಾಡತ್ತಿದ್ದ. ಆದರೆ, ನೇಹಾ ಮಾತ್ರ ಫಯಾಜ್ ಪ್ರೀತಿ ಒಪ್ಪಿರಲಿಲ್ಲ. ಆದ್ರೂ ನೇಹಾ ಬೆನ್ನು ಬಿದ್ದ ಫಯಾಜ್ ಪ್ರೀತಿ ಮಾಡುವಂತೆ ಸತಾಯಿಸುತ್ತಿದ್ದ ಎನ್ನಲಾಗಿದೆ.
ಇದನ್ನು ತಿಳಿದ ನೇಹಾ ಮನೆಯವರು ಐದು ತಿಂಗಳ ಹಿಂದೆ ಕರೆದು ಬುದ್ದಿವಾದ ಹೇಳಿ ಕಳುಸಿದ್ದರು. ಫಯಾಜ್ ನ ಪೋಷಕರ ಗಮನಕ್ಕೂ ತಂದಿದ್ದರು. ಅಲ್ಲದೆ ನೇಹಾ ಸುರಕ್ಷತೆ ದೃಷ್ಟಿಯಿಂದ ಕಾಲೇಜಿಗೆ ಕುಟುಂಬಸ್ಥರೇ ಕಾರ್ ನಲ್ಲಿ ಫಿಕಪ್ ಡ್ರಾಪ್ ಮಾಡುತ್ತಿದ್ದರು. ಇದರಿಂದ ಸ್ವಲ್ಪ ದಿನ ಸೈಲೆಂಟ್ ಆಗಿದ್ದ ಫಯಾಜ್ ಗುರುವಾರ ಸಂಜೆ ೪.೪೫ ರ ವೇಳೆಗೆ ಬಿವಿಬಿ ಕ್ಯಾಂಪಸ್ ಗೆ ನುಗ್ಗಿ ನೇಹಾಳ ಹತ್ಯೆ ಮಾಡಿ ಪರಾರಿಯಾಗಲು ಯತ್ನಸಿದ್ದಾನೆ. ಪೊಲೀಸರು ಮತ್ತು ಸರ‍್ವಜನಿಕರು ಸಕಾಲದಲ್ಲಿ ಫಯಾಜ್ ನನ್ನನ್ನು ಹಿಡಿದ್ದಾರೆ.
ನೇಹಾ ಕೊಲೆ ಘಟನೆಯನ್ನು ಅಂಜುಮನ್ ಸಂಸ್ಥೆ ಸೇರಿ ವಿವಿಧ ಪಕ್ಷಗಳು ಖಂಡಿಸಿವೆ. ಫಯಾಜ್ನನ್ನ ನಮಗೆ ಕೊಡಿ. ಅವನ ರುಂಡ ಕತ್ತರಿಸಿ ಹುಬ್ಬಳ್ಳಿ ಬಾಗಿಲಿಗೆ ಕಟ್ಟುತ್ತೇವೆ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಆಗ್ರಹಿಸಿದ್ದಾರೆ. ಫಯಾಜ್ನನ್ನ ಎನ್ಕೌಂಟರ್ ಮಾಡಿ, ಇಲ್ಲವೆ ಗಲ್ಲು ಶಿಕ್ಷೆಗೆ ಗುರಿಪಡಿಸಿ. ಇಂತಹ ಮನಸ್ಥಿತಿ ಇದ್ದವರನ್ನು ಸುಮ್ಮನೇ ಬಿಡಬಾರದ. ಅಮಾಯಕ ನೇಹಾ ಇಂದು ಕೊಲೆಯಾಗಿದ್ದಾಳೆ. ಈ ರೀತಿಯ ಘಟನೆಗಳು ನಡೆಯಬಾರದೆಂದ್ರೆ ಕಟ್ಟುನಿಟ್ಟಿನ ಕಾನೂನು ಅಗತ್ಯ. ಅವನ ಮೇಲೆ ಉಗ್ರವಾದ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಒಟ್ಟಿನಲ್ಲಿ ಪಾಗಲ್ ಪ್ರೇಮಿಯ ಪೈಶಾಚಿಕ ಕೃತ್ಯಕ್ಕೆ ಬಾಳಿ ಬದುಕ ಬೇಕಿದ್ದ ಅಮಾಯಕ ಜೀವ ಬಲಿಯಾಗಿದೆ. ಇದ್ರ ಹಿಂದೆ ಲವ್ ಜಿಹಾದ್ ದುರುದ್ದೇಶ ಇತ್ತೆಂಬ ಆರೋಪವೂ ಕೇಳಿಬಂದಿದೆ. ಸದ್ಯಕ್ಕೆ ಪಾಗಲ್ ಪ್ರೇಮಿ ಬಂಧನವಾಗಿದ್ದು, ಪೊಲೀಸರು ವಿಚಾರಣೆ ನಡೆಸಿ ಜೈಲಿಗಟ್ಟಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
Can you be more specific about the content of your article? After reading it, I still have some doubts. Hope you can help me.