ಬೆಂಗಳೂರು : ಮೈಸೂರು ಚಲೋ ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ. ಇದು ಭ್ರಷ್ಟಾಚಾರದ ವಿರುದ್ಧದ ದಂಡಯಾತ್ರೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಆರೂವರೆ ಕೋಟಿ ಕನ್ನಡಿಗರ ಜನಕ್ರೋಶಕ್ಕೆ ದನಿಗೂಡಿಸುವ ಪ್ರಜಾಯಾತ್ರೆ.ಅನೈತಿಕತೆಯ ವಿರುದ್ಧ ನೈತಿಕತೆಯ ಮೌನಯಾತ್ರೆ. ಅಧರ್ಮ ರಾಜಕಾರಣದ ವಿರುದ್ಧ ಧರ್ಮ ರಾಜಕಾರಣದ ಸಂಘರ್ಷ ಯಾತ್ರೆ. ಅಸತ್ಯದ ವಿರುದ್ಧ ಸತ್ಯದ ನ್ಯಾಯ ಯಾತ್ರೆ ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಅಕ್ರಮಗಳ ವಿರುದ್ಧ ಎನ್ ಡಿ ಎ ಮಿತ್ರ ಕೂಟ ನಡೆಸಿರುವ ಜನಾಂದೋಲನಕ್ಕೆ ನಾಳೆ, ಅಗಸ್ಟ್ 3ರಂದು ಚಾಲನೆ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಈಗಲೂ ಕಾಲ ಮಿಂಚಿಲ್ಲ. ತಮಗೆ ಕಿಂಚಿತ್ತಾದರೂ ನೈತಿಕತೆ, ಆತ್ಮಸಾಕ್ಷಿ, ಅಂತಃಕರಣ ಅನ್ನುವುದು ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಶೋಕ್ ಆಗ್ರಹಿಸಿದ್ದಾರೆ.
ಈಗ ಪ್ರಾಯಶ್ಚಿತ ಮಾಡಿಕೊಳ್ಳದಿದ್ದರೆ ಮುಂದೆ ಪಶ್ಚಾತ್ತಾಪಕ್ಕೂ ಅವಕಾಶ ಇರುವುದಿಲ್ಲ ಎಂದಿದ್ದಾರೆ.
Facebook
Twitter
LinkedIn
WhatsApp
Email
Print
Telegram