ನನ್ನದೇ ಅಂತಿಮ ಎಂದು ಉದ್ಧಟತನದ ಮಾತುಗಳು ಪಿ.ಡಿ.ಓ ಉಷಾ ಅವರದು

ದೇವನಹಳ್ಳಿ: ಹಲವು ವಿಚಾರದಲ್ಲಿ ಪಿ.ಡಿ.ಓ ವಿರುದ್ಧ ಕೇಸ್ ಇದ್ದರೂ ಒಂದು ಬಾರಿ ಅಮಾನತ್ತಾಗಿದ್ದರೂ ಇದೇ ಪಂಚಾಯತಿಗೆ ನಿಯೋಜನೆ ಮಾಡಿದ್ದಾರೆ:ನಾನು ಕಲ್ಲಡ್ಕ ಪ್ರಭಾಕರ್ ಭಟ್ರು ಅವರ ಸೊಸೆ ನನ್ನನ್ನು ನೀವು ಏನೂ ಮಾಡಲು ಸಾಧ್ಯವಿಲ್ಲಾ ನೀವು ಕೇವಲ ಸದಸ್ಯರು ಅಷ್ಟೇ ನಾನು ಪಂಚಾಯತಿ ಅಭಿವೃದ್ಧಿ ಅಧಿಕಾರಿ ನನ್ನದೇ ಅಂತಿಮ ಎಂದು ಉದ್ಧಟತನದ ಮಾತುಗಳು ಪಿ.ಡಿ.ಓ ಉಷಾ ಅವರದು, ಇವರು ಒಂದು ಬಾರಿ ಅಮಾನತ್ತಾಗಿದ್ದರೂ ಕೇಸು ದಾಖಲಿಸಿದ್ದರೂ ಇದೇ ಪಂಚಾಯತಿಗೆ ಕರ್ತವ್ಯ ನಿಯೋಜಿಸಿದ್ದಾರೆ ಇಲ್ಲಿನ ಕಡತಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಆದರೂ ಈ ಪಂಚಾಯತಿ ಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇದಕ್ಕೆ ಸಚಿವರ ಮತ್ತು ಮೇಲಾಧಿಕಾರಿಗಳ ಸಹಕಾರ ಇದಕ್ಕೆ ಕಾರಣವಿರಬಹುದು ಎಂದು ಜಾಲಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ದೀಪ್ತಿ ವಿಜಯ್ ಕುಮಾರ್ ತೀವ್ರವಾಗಿ ಆರೋಪಿಸಿದರು.

ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ಜಾಲಿಗೆ ಗ್ರಾಮ ಪಂಚಾಯತಿ ಕಾರ್ಯಾಲಯ ಆವರಣದಲ್ಲಿ ಸಾರ್ವಜನಿಕರು ಮತ್ತು ಪಂಚಾಯತಿ ಚುನಾಯಿತ ಸದಸ್ಯರನ್ನೊಳಗೊಂಡು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿ ಮಾತನಾಡಿ, ನಾವು ಚುನಾಯಿತರಾಗಿ ಆಡಳಿತ ಮಂಡಳಿ ಬಂದಾಗಿನಿಂದ ಯಾರ ಮಾತಿಗೂ ಕಿಮ್ಮತ್ತು ಬೆಲೆ ಕೊಡದೇ ಸಾರ್ವಜನಿಕರಿಗೆ ಕೆಲಸವಾಗದೇ ಬಡವರು ಪ್ರತಿ ದಿನ ಪಂಚಾಯತಿ ಬಾಗಿಲಿಗೆ ಅಲೆದರೂ ಕೆಲಸವಾಗದೇ ಬೇಜವಾಬ್ದಾರಿ ವರ್ತನೆ ತೋರಿತ್ತಾ ಕರ್ತವ್ಯ ಲೋಪ ಎಸಗುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಒಂದೂ ಟಾಸ್ಕ್ ಫೋರ್ಸ್ ಸಭೆ ಮಾಡಿಲ್ಲಾ ಸತ್ತವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿಲ್ಲಾ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಲ್ಲಾ, ಕಚೇರಿ ನಿರ್ವಹಣೆಯಲ್ಲೂ ವಿಫಲರಾಗಿದ್ದಾರೆ, ಪಂಚಾಯತಿಗೆ ಸಂಬಂಧಪಟ್ಟ ಮಾಹಿತಿಯನ್ನು ಸಭೆಗಳಲ್ಲಿ ಕೇಳಿದರೆ ಒಂದೂ ಮಾಹಿತಿ ಹೇಳಲ್ಲಾ ಇದರ ವಿಚಾರವಾಗಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದೇವೆ ಕ್ರಮ ವಹಿಸುವುದಾಗಿ ತಿಳಿಸಿ ಒಂದು ತಂಡ ಕಳಿಸಿದ್ದರು ನಾವು ನಮ್ಮ ವರದಿಯನ್ನು ನೀಡಿದ್ದೇವೆ. ಅಕ್ರಮ ಖಾತೆಗಳನ್ನು ಮಾಡಿದ್ದಾರೆ ಮೇಲಾಧಿಕಾರಿಗಳು ಪಿ.ಡಿ.ಓ ವಿರುದ್ಧ ಕ್ರಮ ವಹಿಸುವ ಬದಲು ಮೇಲಿಂದ ಒತ್ತಡ ಇದೆ ಎನ್ನುವ ಸಬೂಬು ನೀಡುತ್ತಿದ್ದಾರೆ ಎಂದು ದೂರಿದರು.

ಜಾಲಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯಂ ಮಾತನಾಡಿ ಪಿ.ಇ.ಓ ರವರು ಕರ್ತವ್ಯದ ಹಾಜರಾತಿ ಪುಸ್ತಕವನ್ನು , ನಡಾವಳಿ ಪುಸ್ತಕವನ್ನು ನಿರ್ವಹಣೆ ಮಾಡಿಲ್ಲಾ ಮತ್ತು ಒಂದೇ ಟಿ.ಸಿ ಫಾರಂ ನ್ನು ಸ್ಥಳ ಬದಲಾವಣೆಗೆ ಮಾಡಲು ಮೂರು ಬಾರಿ ಬಿಲ್ ಮಾಡಿಸಿ 3ಲಕ್ಷ ಅಕ್ರಮವೆಸಗಿದ್ದಾರೆ, ಇದರ ಬಗ್ಗೆ ಪ್ರಶ್ನೆ ಮಾಡಿದರೆ ನನಗೆ ಈಶ್ವರಪ್ಪ ಗೊತ್ತು ಉನ್ನತ ಅಧಿಕಾರಿಗಳು ಗೊತ್ತು ಎಂದು ಧಮ್ಕಿ ಹಾಕುತ್ತಾರೆ ಇವರಿಗೆ ಯಾರು ಗೊತ್ತೋ ಅವರೇ ಬಂದು ಅಧಿಕಾರ ಮಾಡಲಿ ಹಾಗೂ ಇವರನ್ನು ವರ್ಗಾವಣೆ ಮಾಡದಿದ್ದರೆ ಎಲ್ಲಾ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ರಂದು ತಿಳಿಸಿದರು. ಜಾಲಿಗೆ ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಕುಮಾರ್ ಮಾತನಾಡಿ, ಪಿ.ಇ.ಓ ಉಷಾರವರು ಪಂಚಾಯತಿಗೆ ಬರುವ ಸಾರ್ವಜನಿಕರಿಗೆ ಚುನಾಯಿತ ಸದಸ್ಯರಿಗೆ ಸರಿಯಾಗಿ ಕೆಲಸ ಮಾಡದೇ ಉದ್ಧಟತನ ತೋರುತ್ತಿದ್ದರು ಆರ್.ಎಸ್.ಎಸ್ ಮುಖ್ಯಸ್ಥರು ನಮ್ಮವರು, ಏನೂ ಮಾಡಲು ಆಗಲ್ಲಾ ಎಂದು ದುರಹಂಕಾರವಾಗಿ ಮಾತನಾಡುತ್ತಾರೆ. ಬೆಟ್ಟೇನಹಳ್ಳಿ 73 ಬಿ ಗೋಮಾಳ ಜಾಗ ಪೋಡಿ ಆಗದೇ ಅದನ್ನೆಲ್ಲವನ್ನು ಇ.ಖಾತೆ ಮಾಡಿದ್ದಾರೆ , ಕಳೆದ 15 ವರ್ಷಗಳಿಂದ ತೆರಿಗೆ ವಸೂಲಿ ಮಾಡಿಲ್ಲಾ ಪಂಚಾಯತಿಗೆ ನಷ್ಟ ಮಾಡಿದ್ದಾರೆ ಇಂತಹ ಬೇಜವಾಬ್ದಾರಿ ಕೆಲಸಗಳು ಸಾಕಷ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಪಂಚಾಯತಿ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಹೊರ ಕಳಿಸಿ ಪಿ.ಡಿ.ಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇವರನ್ನು ಬೇರೆಡೆಗೆ ವರ್ಗಾಯಿಸಲು ಒತ್ತಾಯಿಸಿದರು.ಪ್ರತಿಭಟನೆ ವೇಳೆ ಜಾಲಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಗೋಪಿನಾಥ್, ರಾಧಮ್ಮ, ಭವ್ಯ, ಸುಬ್ರಹ್ಮಣ್ಯ, ವಿಜಯ ರಾಘವೇಂದ್ರ, ಆನಂದ್, ಮಂಜುಳಾ, ಶೋಭ, ಕೆಂಪರಾಜು, ಅಪ್ಪಯ್ಯ, ಸುಚಿತ್ರ, ಮುನಿಯಪ್ಪ, ಮುನಿರತ್ನಮ್ಮ, ಅಶ್ವಿನಿ, ಜಯಮ್ಮ, ಶಿವಲಿಂಗಮ್ಮ, ಆನಂದ್ ಕುಮಾರ್, ಲಕ್ಷ್ಮಮ್ಮ, ಸೌಮ್ಯ, ಪದ್ಮಾವತಿ ಹಾಗೂ ಸಾರ್ವಜನಿಕರು ಮುಖಂಡರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top