ನಾರಿ ನಾರಿಯರ ನಡುವೆ ಮುರಾರಿ

ಆಚಾರ್ಯ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದ ಡೆಲ್ ಕಂಪನಿಯ ಲ್ಯಾಪ್‌ಟ್ಯಾಪ್. ಲ್ಯಾಪ್‌ಟ್ಯಾಪ್ ಅನ್ನು ಬಳಸುವುದು ಸರಿಯಾಗಿ ಗೊತ್ತಿರಲಿಲ್ಲ. ಆದರೂ ಕಂಪ್ಯೂಟರ್ ಆಪರೇಟ್ ಮಾಡಲು ಬರದಿದ್ದರೆ ಒಬ್ಬ ಉತ್ತಮ ಉದ್ಯಮಿ ಆಗಲು ಸಾಧ್ಯವೇ ಇಲ್ಲ. ಪ್ಯಾಕ್ ಬಿಚ್ಚಿ ನೋಡಿದ ಆಚಾರ್ಯ. ಎರಡು ಮೂರು ವೈರ್‌ಗಳು ಪ್ಲಗ್‌ಗಳು ಇದ್ದವು. ತನಗೆ ಪರಿಚಯವಿರುವ ಒಬ್ಬ ಕಂಪ್ಯೂಟರ್ ಆಪರೇಟರ್ ಬಳಿ ಹೋಗಿ ಸ್ವಲ್ಪ ಸ್ವಲ್ಪ ಲ್ಯಾಪ್ ಟ್ಯಾಪ್ ಬಳಸುವುದನ್ನು ಕಲಿಯಬೇಕು ಈ ಹತ್ತು ದಿನಗಳಲ್ಲಿ ಆದ ಖರ್ಚು ಎಷ್ಟು ಅಂತ ಲೆಕ್ಕ ನೋಡಿದ ಅವನು. ಸುಮಾರು ಒಂದೂವರೆ ಲಕ್ಷ ಖರ್ಚಾಗಿದೆ. ಅವನ ಬಳಿ ಇರುವುದು ಸುಮಾರು ಐದು ಲಕ್ಷ ರೂಪಾಯಿಗಳು. ಅವನಿಗೆ ಬೇಕಾಗಿರುವುದು ೫೦೦ ಕೋಟಿಗೂ ಅಧಿಕ ಮೊತ್ತ. ಆದರೂ ಅಧೀರನಾಗಲಿಲ್ಲ ಅವನು. ಭಯಪಡುವ ಹಂತ ಮೀರಿ ತುಂಬಾ ದಿನಗಳಾಗಿವೆ. ಎರಡು ಸಲ ಮೊಬೈಲ್ ರಿಂಗಾಗಿದ್ದನ್ನು ಗಮನಿಸಲಿಲ್ಲ ಅವನು. ಮೂರನೆ ಸಲ ರಿಂಗಾದಾಗ ಮೊಬೈಲನ್ನು ಕೈಗೆ ತೆಗೆದುಕೊಂಡ. ಕಾಲ್ ಬರುತ್ತಿರುವುದು ಪ್ರಣೀತಳಿಂದ. ಎರಡು ದಿನಗಳಿಂದ ಅವಳ ಕಾಲ್ ರಿಸೀವ್ ಮಾಡಿಕೊಳ್ಳಲೇ ಇಲ್ಲ. ಮೊದಲೇ ಅವಳು ಅಬ್‌ನಾರ್ಮಲ್ ಹುಡುಗಿ. ತಲೆಕೆಟ್ಟು ಮೇಲುಕೋಟೆಗೆ ಬಂದರೂ ಬರ್ತಾಳೆ. ಆದ್ದರಿಂದ ಕಾಲ್ ರಿಸೀವ್ ಮಾಡೋದೆ ಉತ್ತಮ ಅಂದುಕೊಂಡ ಅವನು. ಹಲೋ ಎಂದ ಆಚಾರ್ಯ. ಈಜ್ ಇಟ್ ಆಚಾರ್ಯ? ಇಟೀಜ್ ಫ್ರಂ ಅಪೋಲೋ ಹಾಸ್ಪಿಟಲ್, ಮೈಸೂರು. ಅವನ ಎದೆ ಝಲ್ಲೆಂದಿತು. ಯಸ್. ಆಚಾರ್ಯ ಸ್ಪೀಕಿಂಗ್. ಪ್ರಣೀತ ಎಂಬುವರಿಗೆ ಆಕ್ಸಿಡೆಂಟ್ ಆಗಿದೆ. ನಿಮ್ಮನ್ನು ನೋಡಲು ಬಯಸುತ್ತಿದ್ದಾಳೆ. ಎಂದಳು ಆಸ್ಪತ್ರೆಯ ನರ್ಸ್ಏ ನನ್ನೂ ಯೋಚನೆ ಮಾಡಲಿಲ್ಲ ಆಚಾ ರ್ಯ. ಬೈಕ್ ತೆಗೆದುಕೊಂಡು ಸ್ಟಾರ್ಟ್ ಮಾಡಿದ. ತುಂಬಾ ವೇಗವಾಗಿ ಮೈಸೂರಿನ ಕಡೆ ನುಗ್ಗಿತು ಬೈಕ್. ಮೈಸೂರಿನ ಸರಸ್ವತಿ ಪುರಂನಲ್ಲಿದೆ ಅತ್ಯಾಧುನಿಕ ಸವಲತ್ತುಗಳುಳ್ಳ ಅಪೋಲೋ ಅಸ್ಪತ್ರೆ. ಗಣ್ಯರು ಮಾತ್ರ ಅಲ್ಲಿಗೆ ಬರುತ್ತಾರೆ. ಸಹಜವಾಗಿಯೇ ಶುಲ್ಕವೂ ಹೆಚ್ಚಾಗಿರುತ್ತದೆ. ಅಪೋಲೋ ಆಸ್ಪತ್ರೆಯ ಆವರಣದಲ್ಲಿ ಬೈಕ್ ನಿಲ್ಲಿಸಿದ ಆಚಾರ್ಯ. ಬೇಗ ಬೇಗ ರಿಸೆಪ್ಷನಿಸ್ಟ್ ಬಳಿ ಹೋದ. ಪ್ರಣೀತ ಡಾಟರ್ ಆಫ್ ಅಚ್ಯುತಾನಂದ, ಎಕ್ಸ್ ಎಂ.ಎಲ್.ಎ. ಅಂದ ಆತುರಾತುರವಾಗಿ. ಅರ್ಧ ನಿಮಿಷ, ಸಾರ್. ಎಂದು ಹೇಳಿ ಕಂಪ್ಯೂಟರ್‌ನಲ್ಲಿ ಚೆಕ್ ಮಾಡಿ ಹೇಳಿದಳು ರಿಸಪ್ಷನಿಸ್ಟ್. ಸಾರ್, ಸೆಕೆಂಡ್ ಫ್ಲೋರ್, ಸೆಷಲ್ ವಾರ್ಡ್ ನಂಬರ್ ೨೦೬. ಓಡಿದ ಆಚಾರ್ಯ. ಲಿಫ್ಟ್ ಬಗ್ಗೆ ಸಹಾ ಯೋಚನೆ ಮಾಡಲಿಲ್ಲ. ಮೆಟ್ಟಿಲುಗಳ ಮೂಲಕವೇ ಹೋದ. ಕೇವಲ ಎರಡು ನಿಮಿಷಗಳಲ್ಲೇ ರೂಂ ನಂಬರ್ ೨೦೬ ಕ್ಕೆ ಸೇರಿಕೊಂಡ. ರೂಂ ಮುಂಭಾಗದಲ್ಲಿದ್ದರು ಅಚ್ಯುತಾನಂದ. ಡೋಂಟ್ ವರಿ. ಷಿ ಈಜ್ ಆಲ್‌ರೈಟ್. ಎನ್ನುತ್ತಿದ್ದರು ಡಾಕ್ಟರ್.


ಆದರೂ ಅಚ್ಯುತಾನಂದರವರ ಕಣ್ಣು ಗಳಲ್ಲಿ ನೀರಿತ್ತು. ನಮಸ್ತೆ, ಸಾರ್. ಎಂದು ಆಚಾರ್ಯ ಹೇಳಿದಾಗ, ಕಣ್ಣೀರು ಒರೆಸಿಕೊಂಡು, ಒಳಗೆ ಹೋಗು ಆಚಾರ್ಯ. ಎಂದರು ಅಚ್ಯುತಾನಂದ. ಅದು ಸ್ಪೆಷಲ್ ವಾರ್ಡ್ ಆಗಿದ್ದರಿಂದ ಒಳಗೆ ಕೇವಲ ಒಬ್ಬ ನರ್ಸ್ ಮಾತ್ರ ಇದ್ದಳು. ಮಂಚದ ಮೇಲೆ ಮಲಗಿದ್ದಳು ಪ್ರಣೀತ. ಮೊಬೈಲ್‌ನಲ್ಲಿ ಏನೋ ಗೇಮ್ ಆಡುತ್ತಿದ್ದಳು. ಬಲಗೈಗೆ ಮಾತ್ರ ಸ್ವಲ್ಪ ಬ್ಯಾಂಡೇಜ್ ಹಾಕಲಾಗಿತ್ತು. ಅಷ್ಟು ಬಿಟ್ಟರೇ ಅವಳಿಗೆ ಯಾವ ಸಮಸ್ಯೆ ಇದ್ದಂತೆ ಕಾಣಲಿಲ್ಲ. ಸ್ವಲ್ಪ ಸಮಾಧಾನವಾಯಿತು ಆಚಾರ್ಯನಿಗೆ. ಆಚಾರ್ಯ ಬಂದ ಕೂಡಲೇ ಹೊರಗೆ ಎದ್ದು ಹೋದಳು ನರ್ಸ್. ಪ್ರಣೀತ, ಮೇಜರ್ ಪ್ರಾಬ್ಲಂಸ್ ಏನೂ ಇಲ್ಲಾ ತಾನೇ? ಎಂದ ಮಂಚದ ಮೇಲೆ ಕುಳಿತುಕೊಂಡು. ಅವಳ ಹಣೆ ಮೇಲೆ ಕೈ ಇಟ್ಟು ನೋಡಿದ. ಜ್ವರ ಆಗಲೀ, ತಲೆ ನೋವಾಗಲೀ ಇಲ್ಲ ಎಂಬುದು ಗೊತ್ತಾಯಿತು ಅವನಿಗೆ. ಆಚಾರ್ಯ, ಕೈಗೆ ಬ್ಯಾಂಡೇಜ್ ಹಾಕಿದ್ದಾರೆ. ಅಂತ ಅಳಲು ಆರಂಭಿಸಿದಳು ಅವಳು. ಕೈ ಫ್ರಾಕ್ಚರ್ ಆಗಿದೆಯಾ? ಇಲ್ಲ.ನಿಟ್ಟುಸಿರು ಬಿಟ್ಟ ಅವನು. ಇಷ್ಟಕ್ಕೂ ಸಮಸ್ಯೆ ಏನೂ ಇಲ್ಲ. ಅವಳು ತುಂಬಾ ಮುದ್ದಾಗಿ ಬೆಳೆದಿದ್ದು, ಪ್ರಥಮ ಬಾರಿಗೆ ಆಸ್ಪತ್ರೆಗೆ ಬಂದು ಬ್ಯಾಂಡೇಜ್ ಹಾಕಿಸಿಕೊಂಡಿದ್ದು ಅವಳ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ಅಷ್ಟೇ ಸಮಸ್ಯೆ. ಹೇಗಾಯಿತು? ನಾನು ಸ್ಕೂಟಿ ಓಡಿಸುತ್ತಿದ್ದೆ ನಿನ್ನನ್ನು ನೆನೆಸಿಕೊಳ್ಳುತ್ತಾ. ಫ್ರಂಟ್ ವೀಲ್ ಒಂದು ಚಿಕ್ಕ ಕಲ್ಲಿನ ಮೇಲೆ ಹತ್ತಿತು. ಬಿದ್ದು ಬಿಟ್ಟೆ. ಕೈಗೆ ರಕ್ತವೋ ರಕ್ತ. ಯಾರೋ ನನಗೆ ಪರಿಚಯ ಇರೋರು ನನ್ನನ್ನು ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಬಂದರು ಒಂದು ಆಟೋದಲ್ಲಿ. ಅಷ್ಟರಲ್ಲಿ ಅಪ್ಪಾಜಿ ಅಲ್ಲಿಗೆ ಬಂದಿದ್ದರು. ಸರಿ ಬಿಡು. ಎಲ್ಲಾ ಸರಿ ಹೋಗುತ್ತೆ. ನೀನ್ಯಾಕೆ ಎರಡು ದಿನಗಳಿಂದ ಫೋನ್ ರಿಸೀವ್ ಮಾಡಲಿಲ್ಲ. ಮುಗ್ಧಳಂತೆ ಕೇಳುತ್ತಿದ್ದರೆ, ತುಂಬಾ ನೋವಾಯಿತು ಆಚಾರ್ಯನಿಗೆ. ಸ್ವಲ್ಪ ಕೆಲಸ ಇತ್ತು. ಅವನ ಕೈ ಹಿಡಿದುಕೊಂಡು ಜೋರಾಗಿ ಅಳಲು ಶುರು ಮಾಡಿದಳು ಪ್ರಣೀತ. ಪ್ರಣೀತಾ, ಚಿಕ್ಕ ಮಕ್ಕಳ ಥರಾ ಆಡಬೇಡ, ಈಗೇನೂ ಆಗಿಲ್ಲ. ನಾನು ಅಳುತ್ತಿ ರುವುದು ಗಾಯದ ಬಗ್ಗೆ ಅಲ್ಲ. ಮತ್ತೆ? ನೀನು ಎರಡು ದಿನ ಫೋನ್ರಿ ಸೀವ್ ಮಾಡಲಿಲ್ಲ ಅದಕ್ಕೆ. ಹೋಗಲಿ ಬಿಡು. ಇನ್ಮುಂದೆ ದಿನಾ ಫೋನ್ ಮಾಡ್ತೀನಿ. ಆಚಾ ರ್ಯ, ನಿನ ಗೊಂದು ವಿಷಯ ಹೇಳಲಾ? ನನ್ನ
ಫೇಸ್ ಬುಕ್ ಅಕೌಂಟ್ ಕ್ಲೋಜ್ ಮಾಡಿ ದ್ದೇನೆ. ನನಗೆ ಲವ್ ಪ್ರಪೋ ಜಲ್ಸ್ ಮಾಡುವವರ ಎಲ್ಲಾ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದೇನೆ. ನನಗೆ ನೀನು ಬೇಕು. ಆಚಾರ್ಯ. ಐ ಲವ್ ಯೂ. ಐ ಲವ್ ಯೂ. ತಲೆ ತುಂಬಾ ಭಾರವಾಯಿತು ಆಚಾರ್ಯನಿಗೆ. ಕಣ್ಣುಗಳನ್ನು ಮುಚ್ಚಿಕೊಂಡ. ಏನೂ ಮಾತನಾಡಲಿಲ್ಲ. ಯಾಕೆ? ಏನೂ ಮಾತನಾಡುತ್ತಿಲ್ಲ? ಎಂದಳು ಪ್ರಣೀತ. ತಕ್ಷಣ ಎಚ್ಚೆತ್ತುಕೊಂಡ ಅವನು. ಏನೂ ಹೇಳದಿದ್ದರೂ ಮತ್ತೇ ಏನಾದರೂ ಅನಾಹುತ ಆಗುವ ಸಂಭವವೇ ಹೆಚ್ಚು. ಐ ಟೂ ಲವ್ ಯೂ, ಪ್ರಣೀತ. ಎಂದ. ಶ್ಯೂರ್? ಎಂದು ಕೇಳಿದಳು ಅವಳು. ಅನು ಮಾನ ಯಾಕೆ?ಯಾಕೆಂದರೆ, ಐ ಟೂ ಲವ್ ಯೂ ಎನ್ನಬೇಕಾದರೆ ಅಪ್ಪಿಕೊಂಡು ಮುತ್ತಿಡಬೇಕಲ್ಲಾ? ಎಂದಳು ಗೊಂಬೆಯಂತೆ. ನಿನಗೆ ಯಾರು ಹೇಳಿ ದರು?ನಾನು ತುಂಬಾ ಸಿನಿಮಾಗ ಳನ್ನು ನೋಡಿದ್ದೇನೆ. ಎಲ್ಲಾ ಸಂದರ್ಭ ಗಳಲ್ಲಿ ಯೂ ಅದೇ ರೀತಿ ಆಗ ಬೇ ಕೆಂಬ ನಿಂi ಮ ಏನೂ ಇಲ್ಲ. ನಾನು ಕಷ್ಟಪಡು ತ್ತಿರುವುದು ನಿನಗೋಸ್ಕರವೇ. ನೀನು ನನ್ನನ್ನು ನಂಬಬಹುದು. ಸ್ವಲ್ಪ ಸೀರಿ ಯಸ್ಸಾಗಿ ಅಂದ ಅವ ನು. ಓ. ಕೆ.ಅಷ್ಟು ಸೀರಿಯಸ್ ಬೇಡ, ನಂಬುತ್ತಿದ್ದೇನೆ. ಆಯ್ತಾ? ಎಂದಳು ಪ್ರಸನ್ನಳಾಗಿ. ಅವಳ ಅಂದ ಚೆಂದಗಳಿಗೆ ತಾನು ಮಾರುಹೋಗಿ, ಹುಡುಗಾಟದಿಂದ ಆರಂಭವಾದ ಅವಳ ಪರಿಚಯ ಈಗ ಪ್ರೇಮ ಬಂಧನದವರೆಗೂ ಬಂದಿದೆ. ಹಾಗು ಅವಳ ತಂದೆಯ ಪ್ರೀತಿ ಅವಳನ್ನು ಜೀವನದ ಸತ್ಯಗಳಿಂದ ದೂರ ಮಾಡಿದೆ.


’ಅದೇನೇ ಇದ್ದರೂ ಅವಳು ತನ್ನನ್ನು ಪ್ರೀತಿಸುತ್ತಿದ್ದಾಳೆ.’ ಯೋಚಿಸಿದ ಆಚಾ ರ್ಯ.ಏನ್ ಯೋಚನೆ ಮಾಡ್ತಿದ್ದೀರಿ? ಅವನಿಗೆ ಮತ್ತಷ್ಟು ಹತ್ತಿರವಾಗುತ್ತಾ ಕೇಳಿದಳು ಪ್ರಣೀತ. ಪುಣ್ಯಕ್ಕೆ ಅದು ಆಸ್ಪತ್ರೆ. ಒಂದು ವೇಳೆ ಮನೆ ಆಗಿದ್ದರೆ ತುಂಬಾ ಕಷ್ಟವಾಗುತ್ತಿತ್ತು. ಪ್ರಣೀತಾ, ನಾನೊಂದು ಇಂಡಸ್ಟ್ರೀ ಪ್ರಾರಂಭಿಸಬೇಕೆಂದುಕೊಂಡಿದ್ದೇನೆ.ರಿಯಲೀ, ತುಂಬಾ ಸಂತೋಷ. ಡ್ಯಾಡಿ ಬಳಿ ಮಾತನಾಡಿ ನಿನಗೆಷ್ಟು ಹಣ ಬೇಕಾದರೂ ಕೊಡಿಸ್ತೀನಿ. ಅಂತ ಹೇಳಿ, ಡ್ಯಾಡಿ. ಎಂದು ಜೋರಾಗಿ ಕೂಗಿದಳು ಪ್ರಣೀತ. ಗಾಬರಿಯಿಂದ ಒಳಗೆ ಬಂದರು ಅಚ್ಯುತಾನಂದ. ಏನಮ್ಮಾ? ಡ್ಯಾಡಿ, ಆಚಾರ್ಯ ಒಂದು ಬಿಜಿನೆಸ್ ಸ್ಟಾರ್ಟ್ ಮಾಡ್ತಿದ್ದಾರೆ. ಅವರಿಗೆ ಹಣದ ವ್ಯವಸ್ಥೆ ಮಾಡಿ. ಎಂದಳು ಪ್ರಣೀತ.
ಖಂಡಿತವಾಗಲು. ಎಷ್ಟು ಹಣ ಬೇಕಾಗುತ್ತದೆ ಆಚಾರ್ಯ? ಎಂದರು ಅಚ್ಯುತಾನಂದ. ಹಣದ ಅಗತ್ಯ ಇಲ್ಲ ಬಿಡಿ. ಸಾರ್ ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ಇಷ್ಟಕ್ಕೂ ಯಾವ ಇಂಡಸ್ಟ್ರೀ?ಔಷಧ ತಯಾರಿಕಾ ಕಂಪನಿ.ಐ.ಸಿ. ಹಳ್ಳಿಯಿಂದ ಡಿಲ್ಲಿಯವರೆಗೂ ವಿವಿಧ ಇಲಾಖೆಗಳ ಅನುಮತಿ ಬೇಕಾಗುತ್ತದೆ. ಆಟ ಆರಂಭಿಸೋದು ಸುಲಭ. ಆದರೆ ಗೆಲ್ಲೋದು ಸಾಧ್ಯವಿಲ್ಲ.ಸಾರ್ ಗೆದ್ದರೂ, ಸೋತರೂ ನನಗೆ ಹೋಗೋದು ಏನೂ ಇಲ್ಲ. ನಾವು ಬ್ರಾಹ್ಮಣರು. ಕರ್ಮ ಯೋಗಿಗಳು. ನನ್ನದೆಂಬುದು ಏನೂ ಇಲ್ಲ. ಆಟ ಆಡುತ್ತಿರುವುದು ನಾನಾದರೂ ಆಡಿಸು ತ್ತಿರುವುದು ಆ ಪರಮಾತ್ಮ. ಆಚಾರ್ಯ, ಅಷ್ಟೊಂದು ಆಳವಾಗಿ ನನ್ನ ಮಾತುಗಳನ್ನು ತೆಗೆದುಕೊಳ್ಳಬೇಕಿಲ್ಲ. ನಿನ್ನ ಬಿಜಿನೆಸ್‌ನಲ್ಲಿ ತುಂಬಾ ಕಷ್ಟಗಳಿರುತ್ತವೆ ಅಂದೆ ಅಷ್ಟೆ. ಇಷ್ಟಕ್ಕೂ ನಾನು ನಿನ್ನ ಶತೃ ಅಲ್ಲ. ನಿಮ್ಮ ಸಲಹೆಗಳಿಗೆ ಧನ್ಯವಾದಗಳು, ಸಾರ್. ಸೋಮವಾರ ನನ್ನ ಇಂಡಸ್ಟ್ರೀ ಭೂಮಿ ಪೂಜೆ ಇದೆ. ನೀವು ಬನ್ನಿ. ನಮ್ರತೆಯಿಂದಲೇ ಕರೆದ. ಸಾರಿ, ಅಂದು ನನಗೆ ಸ್ವಲ್ಪ ಕೆಲಸವಿದೆ. ಪ್ರಣೀತಳನ್ನು ಕಳುಹಿಸುತ್ತೇನೆ. ಆಯ್ತಾ? ಎಂದರು ಅಚ್ಯುತಾನಂದ. ನಿಜವಾದ ಗಾಬರಿ ಉಂಟಾಯಿತು ಆಚಾರ್ಯನಲ್ಲಿ.

Leave a Comment

Your email address will not be published. Required fields are marked *

Translate »
Scroll to Top