ಬೆಂಗಳೂರು: ಶಿಕ್ಷಣ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಆರ್. ಸೀತಾರಾಂ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿದರು.
ಎಂ.ಆರ್. ಸೀತಾರಾಂ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಮತ್ತಿಕೆರೆ ಆರ್.ಮಂಜುನಾಥ್, ಶಿವಣ್ಣ, ರಾಜೇಂದ್ರ, ಶಫಿ, ಸುರೇಶ್ ಮತ್ತಿತರರು ಸನ್ಮಾನಿಸಿದರು.
ಹಿಂದುಳಿದ ವರ್ಗಗಳ ಸಮುದಾಯದಿಂದ ಮುಂದಿನ ತಿಂಗಳು ಎಂ.ಆರ್. ಸೀತಾರಾಂ ಅವರನ್ನು ಅಭಿನಂದಿಸುವುದಾಗಿ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
Facebook
Twitter
LinkedIn
Email
Print
WhatsApp
Telegram