ಕೊಪ್ಪಳ,: ಶೋಷಣೆ ಮುಕ್ತ ಸಮಾಜದ ಪ್ರತಿಪಾದಕ ಪ್ರವಾದಿ ಮಹಮ್ಮದ್ ಪೈಗಂಬರ್ ನುಡಿಗಳೇ ಹೆಗ್ಗರುತುಗಳಾಗಿದ್ದವು. ಸಮತ್ವದ ಸಂದೇಶ ಸಾರಿದ ಪ್ರವಾದಿ ಪೈಗಂಬರ್ ಮಾನವ ಕಲ್ಯಾಣದ ಜ್ಯೋತಿಯನ್ನು ಬೆಳಗಿದ ಮಹಾಪುರುಷರು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.ಮಂಗಳವಾರ ಕೊಪ್ಪಳ ತಾಲೂಕಿನ ಹೊಸಪೇಟೆ ರಸ್ತೆಯ ಹೊಸಳ್ಳಿ ಗ್ರಾಮದ ಜಾಮಿಯಾ ಮಸ್ಜಿದ್ ಕಮೀಟಿ ವತಿಯಿಂದ ಹಮ್ಮಿಕೊಂಡ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೈಗಂಬರ್ ಜೀವನಗಾಥೆಯು ಪ್ರಸಕ್ತ ಕಾಲಕ್ಕೆ ನಿಜಕ್ಕೂ ಮಾದರಿ. ಅವರು ಸಮರ್ಥ ಆಡಳಿತಗಾರ, ವ್ಯಾಪಾರಿ, ಯೋಧರು, ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರಾಗಿದ್ದರು. ಇಸ್ಲಾಂನ ಪರಮೋಚ್ಛ ಧರ್ಮಗುರುವಾಗಿದ್ದ ಅವರ ಬೋಧನೆಗಳು ಇಸ್ಲಾಂ ಧರ್ಮಕ್ಕೆ ಸೀಮಿತವಲ್ಲ, ಇಡೀ ಮಾನವಕುಲಕ್ಕೆ ದಾರಿದೀಪಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ವಕೀಲ ಪೀರಾಹುಸೇನ ಹೊಸಳ್ಳಿ, ಡಾ.ಅಬ್ದುಲ್ರಜಾಕ ನಾಗೇನಹಳ್ಳಿ, ತಾಪಂ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ಎಪಿಎಂಸಿ. ಸದಸ್ಯ ಬಸವರಾಜ ಈಶ್ವರಗೌಡ್ರು, ಹೊಸಳ್ಳಿ ಗ್ರಾಪಂ ಅಧ್ಯಕ್ಷರಾದ ರಾಜಮ್ಮ ವೆಂಕಟೇಶ, ಸದಸ್ಯರಾದ ರಾಮಚಂದ್ರ ನಾಯಕ, ಲಕ್ಷ್ಮೀ ಗ್ಯಾನಪ್ಪ ಭಜಂತ್ರಿ, ರೇಣುಕಾ ಹುಲಿಯಪ್ಪ ಬೇವಿನಹಳ್ಳಿ, ಮಾರುತಿ ಬಗನಾಳ, ನಿಂಗನಗೌಡ ಬೇವೂರು, ಶರೀಫಸಾಬ ದೊಡ್ಡಮನಿ, ಗ್ರಾಮದ ಹಿರಿಯರಾದ ಡಾ.ಹಸನ್ಸಾಬ್ ಹೊಸಳ್ಳಿ, ಹನುಮಂತಪ್ಪ ಮೆಟ್ಟಿನ್, ಖಾಜಿ ಆಸೀಫ್ ಗುರುಗಳು, ಅಲ್ಲಿಸಾಬ ಕಣಗಿನಹಾಳ, ಹುಸೇನಪಾಷಾ ಖಾದ್ರಿ, ಖಾಜಾಸಾಬ ದೊಡ್ಡಮನಿ, ಅಬ್ದುಲ್ ವಾಯಿದ್, ಹನುಮಂತಪ್ಪ ಅಂಡಗಿ,
ಎಸ್.ಎಸ್.ಮುದ್ಲಾಪೂರ ಸೇರಿದಂತೆ ಅನೇಕ ಹೊಸಳ್ಳಿ ಗ್ರಾಮದ ಮುಸ್ಲಿಂ ಬಾಂದವರು ಪಾಲ್ಗೊಂಡಿದ್ದರು.