ಮೋದಿಯ 7 ವರ್ಷದ ಸಾಧನೆ ಕಾರ್ಯ ಯಶಸ್ವಿ

ಕುಷ್ಟಗಿ : ನಮ್ಮ ದೇಶದ ನೆಚ್ಚಿನ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯ 7 ವರ್ಷದ ಸರಕಾರದ ಯೋಜನೆಯ ಸಾಧನೆಯ ಚಿತ್ರ ಪಟಗಳ ಮೂಲಕ ರಾಜ್ಯಾದ್ಯಂತ ಸಾರ್ವಜನಿಕರಿಗೆ ತೋರಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಾಗೂ ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದರು. ನಂತರ ಇಲ್ಲಿನ ಬಸವೇಶ್ವರ ವೃತ್ತದಲ್ಲಿನ ಬಸವ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 7 ವರ್ಷದ ಸಾಧನೆ ಸರಕಾರದ ಚಿತ್ರ ಪಟಗಳನ್ನು ಸಾರ್ವಜನಿಕರಿಗೆ ಪ್ರದರ್ಶನಕ್ಕಾಗಿ ಚಿತ್ರ ಪಟಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮ ಪಂಚಾಯತ, ಪುರಸಭೆ ಸದಸ್ಯರಿಗೆ ಹಾಗೂ ಇತರೆ ಜನ ಪ್ರತಿನಿಧಿಗಳು ಎರಡು ದಿನ ಪ್ರದರ್ಶನ ಮಾಡಬಹುದಾಗಿದೆ.

ಆದರೆ ಇವತ್ತು ವಿರೋಧ ಪಕ್ಷದವರು ಆಡಳಿತ ಪಕ್ಷದ ಮೇಲೆ ಗೂಬೆ ಕುರಿಸುವಂತ ಕೆಲಸವನ್ನು ಮಾಡುತ್ತಿದೆ ಒಟ್ಟಾರೆ ನರೇಂದ್ರ ಮೋದಿ ‌ಎಂದರೆ ಕಾಂಗ್ರೆಸ್ ಪಕ್ಷದ ನಾಯಕರಿಗೆ ಹೆದರಿಕೆ ಯಾ‌ಗಿದೆ ಎಲ್ಲಿ ನಾವುಗಳು ಸಂಪೂರ್ಣವಾಗಿ ಈ ನರೇಂದ್ರ ಮೋದಿ ಅಲೆಯಿಂದ ಅಧಿಕಾರ ಕಳೆದುಕೊಳ್ಳುತ್ತೇವೆ ಎನ್ನುವ ಭಯ ಕಾಂಗ್ರೆಸ್ ನಾಯಕರಿಗೆ ಮನೆ ಮಾಡಿದೆ ಎಂದರು. ಆದರೆ ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿ ಮೇಲೆ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಾ ಹೊರಟಿದೆ ಅದಕ್ಕಾಗಿ ಇವತ್ತು ಬಿಜೆಪಿ ಪಕ್ಷ ರಾಜ್ಯಾದ್ಯಂತ ನರೇಂದ್ರ ಮೋದಿಯ 7 ವರ್ಷದ ಸಾಧನೆ ಬಗ್ಗೆ ಚಿತ್ರ ಪುಟಗಳ ಮೂಲಕ ಸಾರ್ವಜನಿಕರಿಗೆ ಮುಟ್ಟಲಿ ಎನ್ನುವ ದೃಷ್ಟಿಯಿಂದ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ರಾಜ್ಯಾದ್ಯಾಂತ ಚಿತ್ರ ಪ್ರದರ್ಶನ ಮಾಡಲು ಹೊರಟಿದೆ. ಆದರೆ ನಮ್ಮ ಬಿಜೆಪಿ ಪಕ್ಷದ ಸಂಸದ ಸಂಗಣ್ಣ ಕರಡಿಯವರು ಎರಡು ಬಾರಿ ಸಂಸದರಾದ ಮೇಲೆ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಅನೇಕ ಕೆಲಸ ಕಾರ್ಯಕ್ರಮವನ್ನು ಮಾಡಿದ್ದಾರೆ ಗದಗ-ವಾಡಿ ರೈಲ್ವೆ ಕಾಮಗಾರಿ ಇರಬಹುದು ನಮ್ಮ ಕುಷ್ಟಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ಸೇತುವೆ ಸೇರಿದಂತೆ ಇನ್ನು ಅನೇಕ ಜನಪರ ಕೆಲಸ ಮಾಡಿ ನರೇಂದ್ರ ಮೋದಿಯವರ ಸಾಧನೆ ಏನು ಅನ್ನುವದ‌ನ್ನ ತೋರಿಸಿಕೊಟ್ಟಿದ್ದಾರೆ.ಇದನ್ನು ವಿರೋಧಿ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಇನ್ನು ಕೃಷ್ಣಾ ಬಿ ಸ್ಕೀಂ ಯೋಜನೆ ಕಾಮಗಾರಿ ಪ್ರಗತಿಯಲ್ಲಿ ಇದೇ ನಮ್ಮ ಭಾಗದವರೆ ಮುಖ್ಯಮಂತ್ರಿಯಾಗಿದ್ದು ಕೃಷ್ಣಾ ಬಿ.ಸ್ಕೀಂ ಯೋಜನೆ ಕಾಮಗಾರಿಯನ್ನು ಸಂಪೂರ್ಣಗೊಳಿಸುತ್ತಾರೆ ಎಂಬ ನೆಂಬಿಕೆ ನಮಗೆ ಇದೇ ಆದರೆ ಆಲಮಟ್ಟಿ ಡ್ಯಾಂ ಎತ್ತರಕ್ಕೆ ಏರಿಕೆಯಾಗಬೇಕು ಈಗಾಗಲೇ ಸರಕಾರ ಅದಕ್ಕೆ ಹಣವನ್ನು ತೆಗೆದು ಇಡಲಾಗಿದೆ ಕೊಪ್ಪಳ ಏತ ನೀರಾವರಿಗಾಗಿ ನಮ್ಮ ಪ್ರಯತ್ನ ಸದಾ ಇದೇ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ಪುರಸಭೆ ಅಧ್ಯಕ್ಷ ಕೆ.ಗಂಗಾಧರಯ್ಯ ಹಿರೇಮಠ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕೆ.ಮಹೇಶ, ಪುರಸಭೆ ಸದಸ್ಯರಾದ ಜೆ.ಜೆ ಆಚಾರ್, ಮಾಹಾಂತೇಶ ಕಲಬಾವಿ, ಚಂದ್ರಕಾಂತ ವಡಗೇರಿ, ಉಮೇಶ ಯಾದವ್, ಶರಣಪ್ಪ ಚೂರಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top