ಬೆಳಗಾವಿ,ಜನವರಿ,೧೯ : ಅರಣ್ಯ ಸಚಿವ ಉಮೇಶ್ ಕತ್ತಿ ಮಾಸ್ಕ್ ವಿಚಾರದಲ್ಲಿ ಉಡಾಫೆ ಉತ್ತರ ನೀಡಿದ್ದು,ಈಗ ಸಚಿವರ ಬೇಜವಬ್ದಾರಿ ಉತ್ತರಕ್ಕೆ ಸಾಮಾನ್ಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಬ ಜೊಲ್ಲೆ, ಸಚಿವ ಉಮೇಶ್ ಕತ್ತಿ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಭಾಗಿಯಾಗಿದ್ದು,ಸಚಿವರು ಸೇರಿದಂತೆ ಜನ ಪ್ರತಿನಿಧಿಗಳು ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಸಚಿವ ಉಮೇಶ್ ಕತ್ತಿ ಬೇಜವಬ್ದಾರಿ ಉತ್ತರ ನೀಡಿದ್ದಾರೆ.
ಮೋದಿಜೀ ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ, ಮಾಸ್ಕ್ ವಿಚಾರದಲ್ಲಿ ಯಾವುದೇ ನಿರ್ಬಂಧ ವಿಧಿಸಿಲ್ಲಾ. ಸ್ವಂತ ಜವಾಬ್ದಾರಿ ಹೊತ್ತು ಅವರೆ ಮಾಸ್ಕ್ ಹಾಕಿಕೊಳ್ಳಬೇಕು. ಮಾಸ್ಕ್ ಹಾಕೋದು ಬಿಡೋದು ಅದು ಅವರವರ ವಿಚಾರ. ಮಾಸ್ಕ್ ಹಾಕದೇ ಇರುವುದು ನನ್ನ ವೈಯಕ್ತಿಕ ವಿಚಾರ. ನಾನು ಮಾಸ್ಕ್ ಹಾಕಲ್ಲಾ. ನನಗೆ ಮಾಸ್ಕ್ ಹಾಕಬೇಕೆಂದು ಅನಿಸಿಲ್ಲಾ. ಅದಕ್ಕಾಗಿ ನಾನು ಮಾಸ್ಕ್ ಹಾಕಿಲ್ಲಾ ಏನು ತೊಂದರೆ ಇಲ್ಲಾ ಎಮದು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.