ಶಿವಮೊಗ್ಗ: ರಾಜ್ಯದಲ್ಲಿ ಸಾಕಷ್ಟು ಕಡೆ ನೆರೆ-ಪ್ರವಾಹದಿಂದಾಗಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ಜನರ ಕಷ್ಟಕ್ಕೆ ನೆರವಾಗಬೇಕಾದ ವಿರೋಧ ಪಕ್ಷಗಳು, ಅಧಿಕಾರದ ಹಪಾಹಪಿಯಿಂದ ರಾಜ್ಯಪಾಲರ ಮೂಲಕ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿರುವುದು ಬಿಜೆಪಿ-ಜೆಡಿಎಸ್ ಅಧಿಕಾರದ ದುರಾಸೆಗೆ ಸಾಕ್ಷಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಹೇಳಿದರು.ಭದ್ರಾವತಿ ತಾಲೂಕಿನ ಬಿಆರ್ ಪಿ ಜಲಾಶಯಕ್ಕೆ ಭೇಟಿ ನೀಡಿದ್ದ ಸಂಧರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಬಿಜೆಪಿ- ಜೆಡಿಎಸ್ ರಾಜ್ಯ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿ ಮಳೆ ವಾಡಿಕೆಗಿಂತ ಹೆಚ್ಚಾಗಿ ಜನ ಕಷ್ಟದಲ್ಲಿದ್ದಾರೆ. ಜನ ಕಷ್ಟದಲ್ಲಿರುವಾಗ ಇದೆಲ್ಲಾ ಬಿಜೆಪಿ ಯವರಿಗೆ ಬೇಕಾ?ಬಿಜೆಪಿ ಯವರಿಗೆ ಜನರ ಮೇಲೆ ಸ್ವಲ್ಪನೂ ಕಾಳಜಿ ಇಲ್ಲ. ರಾಜಕೀಯಕ್ಕೂ ಸಮಯ ಸಂದರ್ಭ ಇರುವುದಿಲ್ಲವೇ? ಅವರಿಗೆ ಬರೀ ರಾಜಕೀಯ ದಾಹ ಎಂದು ಸಚಿವರು ಹೇಳಿದರು.
ಜನ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿರುವುದನ್ನ ಸಹಿಸಿದ ಇವರು, ಏನಾದ್ರು ಮಾಡಿ ಸರ್ಕಾರ ಉರುಳಿಸಬೇಕು ಎಂದು ಈ ರಾಜಕೀಯ ಪ್ರಹಸನ ನಡೆಸಿದ್ದಾರೆ. ಬಿಜೆಪಿಯವರಿಗೆ ಅಧಿಕಾರದಿಂದ ಹೊರಗೆ ಇರೋಕೆ ಆಗೋಲ್ಲ. ಮೀನನ್ನ ನೀರಿನಿಂದ ಹೊರಗೆ ಬಿಟ್ಟ ಹಾಗೇ ಆಗಿದೆ ಬಿಜೆಪಿ ಸ್ಥಿತಿ ಎಂದು ಕೃಷ್ಣ ಬೈರೆಗೌಡ ಹೇಳಿದರು.ಏನಾದ್ರು ಮಾಡಿ ಅಧಿಕಾರ ಬೇಕು ಬಿಜೆಪಿ ಜೆಡಿಎಸ್ ನವರಿಗೆ, ಸರ್ಕಾರ ಕೆಡವುದೇ ಅವರೇ ಗುರಿ.ಇಡಿ ಆಯ್ತು ಇದೀಗ ರಾಜ್ಯಪಾಲರನ್ನ ದುರುಪಯೋಗ ಮಾಡಿಕೊಂಡಿದ್ದಾರೆ. ಸರ್ಕಾರವನ್ನ ಬುಡಮೇಲು ಮಾಡೋಕೆ ಪ್ರಯತ್ನ ಮಾಡ್ತಾ ಇದ್ದಾರೆ. ಸರ್ಕಾರ ಬೀಳಿಸೋಕೆ ಪಿತೂರಿ ಮಾಡ್ತಾ ಇದ್ದಾರೆ.
ಇದಕ್ಕೂ ಮೊದಲು ವಾಲ್ಮೀಕಿ ಹಗರಣದಲ್ಲಿ ಅಧಿಕಾರಿ ಕಲ್ಲೇಶ್ ಮೇಲೆ ಒತ್ತಡ ಹೇರಿದ್ರು, ಸಿಎಂ ಹೆಸರು ಪ್ರಸ್ತಾಪ ಮಾಡಲು ಅಧಿಕಾರಿಗೆ ಇಡಿ ಅಧಿಕಾರಿ ಒತ್ತಡ ಹೇರಿದ್ದ, ಬಲವಂತವಾಗಿ ಸುಳ್ಳು ಹೇಳಿಕೆ ಕೊಡಿಸಲು ಇಡಿ ಅಧಿಕಾರಿಗಳು ಮುಂದಾಗಿದ್ರು.
ಆದರೆ ಅದೇ ಅಧಿಕಾರಿ ಇಡಿ ಅಧಿಕಾರಿ ವಿರುದ್ದ ಎಫ್ ಐ ಆರ್ ಮಾಡಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿಲುಕಿಸಲು ಯತ್ನ ಮಾಡಿದ್ರು ಆದರೆ ಅಧಿಕಾರಿ ಬಗ್ಗಲಿಲ್ಲ. ಈಗ ರಾಜ್ಯಪಾಲರನ್ನ ದುರುಪಯೋಗ ಮಾಡಿಕೊಳ್ಳೋಕೆ ಹೊರಟಿದ್ದಾರೆ ಎಂದು ಹೇಳಿದ ಸಚಿವರು, ಇದು ಮೊದಲೇನಲ್ಲ, ಸುಪ್ರೀಂ ಕೋರ್ಟ್ ನಲ್ಲಿ ಸಾಲು ಸಾಲು ಪ್ರಕರಣಗಳಿವೆ. ತಮಿಳುನಾಡು, ಜಾರ್ಖಂಡ್, ಕೇರಳ, ಪಂಜಾಬ್ ಸೇರಿದಂತೆ ಸಾಕಷ್ಟು ರಾಜ್ಯಪಾಲರ ಮೇಲೆ ಕೇಸ್ ಇವೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದರು.
ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ, ನಿರಾಣಿ ವಿರುದ್ಧ ರಾಜ್ಯಪಾಲರಿಗೆ ಎರಡು ವರ್ಷದ ಹಿಂದೆ ಮನವಿ ಮಾಡಲಾಗಿದೆಲೋಕಾಯುಕ್ತ ಅಧಿಕಾರಿಗಳು ಪತ್ರ ಬರೆದು ತನಿಖೆಗೆ ಅವಕಾಶ ಕೊಡಿ ಅಂತಾ ಕೇಳಿದ್ರು. ಆದರೆ ಅದಕ್ಕೆ ರಾಜ್ಯಪಾಲರು ಅವಕಾಶ ನೀಡಿಲ್ಲ. ಇದೀಗ ಯಾರೋ ಖಾಸಗಿ ವ್ಯಕ್ತಿ ಪತ್ರ ಬರೆದ್ರೆ, ಕೂಡಲೇ ನೋಟೀಸ್ ನೀಡಿದ್ದಾರೆ, ಇದು ಪ್ರಜಾಪ್ರಭುತ್ವ ವಿರುದ್ಧ ಕೈಗೊಂಡ ಕ್ರಮ. ಸಂವಿಧಾನ ದುರುಪಯೋಗ ಪಡಿಸುಕೊಳ್ಳುವ ಪ್ರಯತ್ನ. ಇದಕ್ಕೆಲ್ಲಾ ನಾವು ಬಗ್ಗುವುದಿಲ್ಲ, ಜಗ್ಗುವುದಿಲ್ಲ.ನಾವು ಸುಪ್ರೀಂ ಕೋರ್ಟ್ ಮೊರೆ ಹೋಗ್ತೀವಿ, ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ ಎಂದು ಸಚಿವ ಕೃಷ್ಣಬೈರೆಗೌಡ ಹೇಳಿದರು.