ಅಲ್ಲಿಪುರ ಕುಡಿಯುವ ನೀರಿನ ಕೆರೆಗೆ ಸಚಿವ ಬಿ.ನಾಗೇಂದ್ರ ಭೇಟಿ

ಬಳ್ಳಾರಿ: ಮುಂಗಾರು  ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಕುಡಿಯುವ ನೀರಿನ ಲಭ್ಯತೆ  ಕುರಿತಂತೆ ಅರಿಯಲು ಮಹಾನಗರ ಪಾಲಿಕೆ ಆಯುಕ್ತರು, ಮೇಯರ್ ಹಾಗೂ ಇತರೆ ಅಧಿಕಾರಿಗಳ ಜೊತೆ ಅಲ್ಲಿಪುರದ ಕುಡಿಯುವ ನೀರಿನ ಕೆರೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಯುವಜನ ಸಬಲೀಕರಣ, ಕ್ರೀಡಾ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಕುಡಿಯುವ ನೀರಿನ‌ ಲಭ್ಯತೆ ಕುರಿತು ಮಾಹಿತಿ ಪಡೆದರು.

ಕೆರೆ ವೀಕ್ಷಣೆ ನಂತರ ಮಾತನಾಡಿದ ಮಾನ್ಯ ಸಚಿವ ಬಿ.ನಾಗೇಂದ್ರ ಅವರು 7.5 ಮೀಟರ್ ಸಾಮರ್ಥ್ಯ ವಿದ್ದು ಪ್ರಸ್ತುತ 3,6 ಮೀಟರ್ ನೀರಿನ‌ ಸಮಗ್ರವಿದೆ. 5000 ಎಂಎಲ್ ಡಿ ನೀರಿದ್ದು ನಲವತ್ತೈದು ದಿನಗಳ ವರೆಗೆ ನಗರಕ್ಕೆ ನೀರು ಸರಬರಾಜು ಮಾಡಬಹುದಾಗಿದೆ. ಅಷ್ಟರಲ್ಲಿ ಮುಂಗಾರು ಅರಂಭವಾಗಲಿದ್ದು, ನೀರಿನ ಸಂಗ್ರಹ ಮಾಡಬಹುದು. ಇಲ್ಲವಾದಲ್ಲಿ ತುಂಗಭದ್ರ ಡ್ಯಾಂ ನಿಂದ ಕಾಲುವೆ ಮೂಲಕ ನೀರು ತರಲು ಅದಾಗಲೇ ವಿಶೇಷವಾಗಿ ಬೇಡಿಕೆ ಸಲ್ಲಿಸಲಾಗಿದ್ದು ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಸಚಿವ ಬಿ.ನಾಗೇಂದ್ರ ಅವರು ಹೇಳಿದರು.

Facebook
Twitter
LinkedIn
Pinterest
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top