ಫೈನಲ್ ಮ್ಯಾಚ್ ಗೆದ್ದ ಭಾರತದ ಪುಟ್ಬಾಲ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಸಚಿವ ಬಿ. ನಾಗೇಂದ್ರ

ಬೆಂಗಳೂರು : ಭಾರತ & ಕುವೈಟ್ ಮಧ್ಯೆ ನಡೆದ ಪುಟ್ಬಾಲ್ ಫೈನಲ್ ಪಂದ್ಯಾವಳಿಯಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಭಾರತ ದೇಶದ ಕ್ರೀಡಾ ಪ್ರತಿಭೆಯನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದ ಭಾರತದ ಪುಟ್ಬಾಲ್ ಕ್ರೀಡಾಪಟುಗಳಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಅಭಿನಂದನೆ ಸಲ್ಲಿಸಿದರು.

 

 

ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಕಳೆದ ಜೂನ್ 21 ರಿಂದ ಆರಂಭವಾಗಿದ್ದ ಸಾಫ್ ಚಾಂಪಿಯನ್ ಶಿಪ್ 2023 ಪುಟ್ಬಾಲ್ ಪಂದ್ಯಾವಳಿಯಲ್ಲಿ ಸತತ 4 ಭಾರಿ ವಿಜೇತರಾಗಿದ್ದ ಭಾರತ ತಂಡದ ಕ್ರೀಡಾಪಟುಗಳು ಇಂದು ಫೈನಲ್ ಪಂದ್ಯ ಭಾರಿ ಅಗ್ಗ ಜಗ್ಗಾಟ ಮಧ್ಯೆ ಗೆದ್ದಿದ್ದು ಬಹಳ ಅದ್ಬುತವಾಗಿತ್ತು.

ಇನ್ನು ರಾಜಕೀಯ ಒತ್ತಡದ ಮಧ್ಯೆಯೂ ಕೂಡ ಭಾರತ ದೇಶದ ಕ್ರೀಡಾಭಿಮಾನಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವುಕುಮಾರ್ ರವರು ಕೂಡ ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯಾವಳಿಯನ್ನು ವೀಕ್ಷಿಸಿ ಕ್ರೀಡಾಪಟುಗಳಿಗೆ ಉತ್ಸಾಹ ತುಂಬಿದರು.

 

 

5 ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಿದ ವಿವಿಧ ದೇಶದ ಪ್ರತಿಭೆಗಳಿಗೆ ಹಾಗೂ ಫೈನಲ್ ಮ್ಯಾಚ್ ಗೆದ್ದ ತಂಡಕ್ಕೆ ಬಹುಮಾನ ನೀಡಿ ಭಾರತ ತಂಡದ ಎಲ್ಲಾ ಕ್ರೀಡಾಪಟುಗಳಿಗೆ ಪದಕ ನೀಡುವ ಮೂಲಕ ಅಭಿನಂದಿಸಿದರು.

90 ನಿಮಿಷಕಾಲ ನಡೆದ ಪಂದ್ಯಾವಳಿಯಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದರು, ನಂತರ 2 ಸಾರಿ ರಿ 15ನಿಮಿಷಗಳ ಸಮಯಾವಕಾಶ ನೀಡಿದರು ಅಲ್ಲಿ ಕೂಡ ಸಮ ಅಂಕ ಸಾಧಿಸಿ ಕೊನೆಗೆ 5 ಗೋಲ್ ಅವಕಾಶದಲ್ಲಿ ಎರಡು ತಂಡ ಸಮಬಲ ಸಾಧಿಸಿ ಕೊನೆಯ ಒಂದು ಅವಕಾಶದಲ್ಲಿ ಕುವೈಟ್ ವಿರುದ್ಧ ಭಾರತ ರೋಚಕ ಜಯ ಸಾಧಿಸಿತು..

 

 

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಒಲಂಪಿಕ್ ಅಸೋಶೇಷನ್ ಅಧ್ಯಕ್ಷರಾದ ಕೆ. ಗೋವಿಂದರಾಜು, ಪುಟ್ಬಾಲ್ ಅಸೋಶೇಷನ್ ಅಧ್ಯಕ್ಷರು ಹಾಗೂ ಶಾಂತಿ ನಗರದ ಶಾಸಕರಾದ ಹ್ಯಾರಿಸ್ ರವರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top