ಕಂದಗಲ್ಲ ಪಿಕೆಪಿಎಸ್ ಸಂಘದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ

ಇಳಕಲ್ಲ : ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನೆಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರವನ್ನು ತನಿಖೆಗೆ ಒಳಪಡಿಸಿ ತಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಂಡು ನಮ್ಮೆಲ್ಲರಿಗೆ ನ್ಯಾಯ ಒದಗಿಸಿಕೊಡುವಂತೆ ಕೃಷಿ ಪತ್ತಿನ ಸಹಕಾರಿ ಸಂಘದ ಕೃಷಿ ಕಾರ್ಮಿಕರು ಮತ್ತು ಶೇರುದಾರರು ಬಾಗಲಕೋಟ ಜಿಲ್ಲಾ ಎಸ್‌ಪಿ ಲೋಕೇಶ ಜಗಲಾಸರ ಅವರಿಗೆ ಮನವಿ ಪತ್ರವನ್ನು ನೀಡಿ ಒತ್ತಾಯಿಸಿದರು. ೨೦೧೩-೧೪ ಪೂರ್ವದಲ್ಲಿ ಸಂಘವು ಯಾವದೇ ಭ್ರಷ್ಠಹಾರ ಮಾಡದೇ ಬಡಕೃಷಿಕರಿಗೆ ಹಾಗೂ ಠೇವಣಿದಾರರಿಗೆ ಯಾವದೇ ಅನ್ಯಾಯ ಮಾಡದೇ, ಒಳ್ಳೆಯ ಆಡಳಿತ ನೆಡೆಸಿ ಸಮರ್ಪಕ ಸೇವೆ ಸಲ್ಲಿಸುತ್ತಾ ಬಂದಿರುತ್ತದೆ. ಆದರೇ ೨೦೧೩-೧೪ ರಿಂದ ೨೦೨೦-೨೧ ನೇ ಸಾಲಿನಲ್ಲಿ ಕಂದಗಲ್ಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೃಷಿ ಕಾರ್ಮಿಕ ಶೇರುದಾರರ ಹಾಗೂಕೃಷಿಯೇತರ ಹೆಸರಿನಲ್ಲಿ ಸುಳ್ಳು ದಾಖಶೆ ಪ್ರಮಾಣ ಪತ್ರಗಳನ್ನು ಸೃಷ್ಠಸಿ ಜನ ಸಾಮಾನ್ಯರ ಹೆಸರಿನಲ್ಲಿ ಲಕ್ಷಾಂತರ ಹಣವನ್ನು ಕಬಳಿಸಿರುತ್ತಾರೆ.
ಕಂದಗಲ್ಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸನ್ ೨೦೧೩ -೧೪ ರ ಹಿಂದಿನ ಸೇವಾಡಳಿತವನ್ನು ಮೆಚ್ಚಿ ಕೋಟ್ಯಾಂತರ ಹಣವನ್ನು ಠೇವಣಿದಾರರು ಠೇವಣಿ ಇಟ್ಟಿರುತ್ತಾರೆ. ಆದರೇ ೨೦೧೩-೧೪ ರಿಂದ ೨೦೨೦-೨೧ ವರೆಗಿನ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಗಳು ಸಂಘದ ಠೇವಣಿದಾರರ ಹಣವನ್ನು ಕೂಡಾ ಹಾಗೂ ಠೇವಣಿದಾರರ ಹೆಸರಿನಲ್ಲಿ ಸುಳ್ಳು ದಾಖಲೆ ಪ್ರಮಾಣ ಪತ್ರಗಳನ್ನು ಸೃಷ್ಠಿ ಮಾಡಿ ಹಣವನ್ನು ದುರ್ಬಳಿಕೆ ಮಾಡಿಕೊಂಡಿದ್ದಾರೆ.


ಈ ವಿಷಯವು ೨೦೧೯-೨೧ ರ ಲೆಕ್ಕ ಪರಿಶೋಧನೆ ತಾತ್ಕಾಲಿಕ ವರದಿಯಲ್ಲಿ ಗೋಕಾಕದ ಲೆಕ್ಕ ಪರಿಶೋಧಕರಾದ ಸೈದಪ್ಪಾ ಬಿ ಗಡದಿ ಇವರ ವರದಿಯ ಪ್ರಕಾರ ಕೋಟ್ಯಾಂತರ ಹಣದ ದುರುಪಯೋಗ ಆಗಿರುವ ವಿಷಯ ಕಂಡು ಬಂದಿರುತ್ತದೆ. ಠೇವಣಿದಾರರು ಸಂಘದಲ್ಲಿ ನೆಡೆದಿರುವ ಹಣಕಾಸಿನ ದುರ್ಬಳಕೆಯನ್ನು ತಿಳಿದು, ಠೇವಣಿದಾರರು ತಮ್ಮ ಠೇವಣಿ ಸರ್ಟಿಫಿಕೆಟುಗಳನ್ನು ತಗೆದುಕೊಂಡು ಹೋಗಿ ಸಂಘದ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ನಮ್ಮ ಠೇವಣಿ ಹಣವನ್ನು ಮರು ಪಾವತಿ ಮಾಡಲು ಕೇಳಿದರು ಆದರೇ ಕಾರ್ಯದರ್ಶಿಯವರು ನಮ್ಮ ಸಂಘದಲ್ಲಿ ಹಣಕಾಸಿನ ತೊಂದರೆ ಇರುವ ಕಾರಣ ತಮಗೆ ಹಣ ಮರು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಶಂಕರಗೌಡ ಪಾಟೀಲ ಮಲ್ಲಿಕಾರ್ಜುನ ಗಡಿಯಣ್ಣನವರ, ವೀರೇಶ ಪಾಟೀಲ, ಹನಮಂತಗೌಡ ಪಾಟೀಲ, ರುದ್ರಮ್ಮ ಪಲ್ಲಿ, ರೇಣುಕಾ ಜಳಕಿ, ಮಲ್ಲವ್ವ ಕನಕೇರಿ, ಮತ್ತು ಕಂದಗಲ್ಲ , ಸೋಮಲಾಪೂರ, ಮರಟಗೇರಿ ಗ್ರಾಮದ ಠೇವಣಿದಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *

Translate »
Scroll to Top