ಷಂಡತನ ಪ್ರದರ್ಶನ ಮಾಡುತ್ತಿರುವ ಎಂ.ಇ.ಎಸ್ ನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧ ಮಾಡಿ ಹಾಲುಮತದ ವತಿಯಿಂದ ಸರಕಾರಕ್ಕೆ ಆಗ್ರಹ

ಕುಷ್ಟಗಿ:- ಸ್ವಾತಂತ್ರ್ಯ ಹೋರಾಟಗಾರ, ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಭಗ್ನಗೊಳಿ ದೇಶದೂಹ್ರಿ ಕೆಲಸ ಮಾಡಿ ಗೂಂಡಾವರ್ತನೆ ತೋರುತ್ತೀರುವ ಎಂಇಎಸ್ ಪುಂಡರನ್ನು ಬೆಳಗಾವಿಯಿಂದ ಗಡಿ ಪಾರು ಮಾಡಿ ಗುಂಡಾ ಕಾಯ್ದೆಯಡಿ ಬಂಧಿಸಿ ಶಿಸ್ತು‌ ಕ್ರಮ ಕೈಗೊಳ್ಳಬೇಕು ಎಂದು ಕುಷ್ಟಗಿ ತಾಲೂಕು ಹಾಲುಮತ ಸಮಾಜ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಸರಕಾರಕ್ಕೆ ಆಗ್ರಹಿಸಿದರು. ನಂತರ ಇಲ್ಲಿನ ಕನಕದಾಸ ವೃತ್ತದಿಂದ ಬೃಹತ್ ಪ್ರತಿಭಟನೆ ಮಾಡಿ ಎಂಇಎಸ್ ಪುಂಡರ ವಿರುದ್ಧ ಘೋಷಣೆ ಕೂಗುತ್ತಾ ಪಟ್ಟಣದ ವಿವಿಧ ವೃತ್ತಗಳಲ್ಲಿ ಸಂಚರಿಸಿ ಮೆರವಣಿಗೆ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿ ಉಪ ತಹಶೀಲ್ದಾರರಾದ ಮುರಳೀಧರ ಇವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ನಂತರ ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ್ ಮಾತನಾಡಿ ರಾಜ್ಯದಲ್ಲಿ ವಾಸ ಮಾಡುತ್ತಿರುವ, ಕರ್ನಾಟಕ ಸರ್ಕಾರದ ಜನನ ಪ್ರಮಾಣ ಪತ್ರ, ಮನೆ ಹೊಲ, ಆಸ್ತಿ, ಇತ್ಯಾದಿಗಳ ದಾಖಲೆಗಳು, ರೇಷನ್ ಕಾರ್ಡ್, ಆಧಾರ ಕಾರ್ಡ್, ಓಟರ್ ಐಡಿ, ಡ್ರೈವಿಂಗ್ ಲೈಸನ್ಸ್ ರದ್ಧುಗೊಳಿಸಿ ಗಡಿ ಪಾರು ಮಾಡಬೇಕು ಎಂದು ಹೇಳಿದರು. ಇನೋರ್ವ ನಗರದ ಘಟಕದ ಹಾಲುಮತ‌ ಸಮಾಜದ ಅಧ್ಯಕ್ಷ ಕಲ್ಲೇಶ ತಾಳದ್ ಮಾತನಾಡಿ ಮರಣ ಪ್ರಮಾಣ ಪತ್ರ ಮುಂತಾದ ದಾಖಲೆಗಳಲ್ಲಿ ಕನ್ನಡ ಭಾಷೆ ಬಳಕೆಯಾಗಿರುತ್ತದೆ. ಅವುಗಳನ್ನು ಬಳಸದೇ ವಾಪಸ್ ಮಾಡಿ, ಕರ್ನಾಟಕ ರಾಜ್ಯದ ನೆಲ, ಜಲ, ಸವಲತ್ತುಗಳನ್ನು ಬಳಸಿಕೊಂಡು, ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿರುವ, ನಾಡದ್ರೋಹಿ ಎಂ. ಇ. ಎಸ್. ನವರು ಪದೇ ಪದೇ ಅಶಾಂತಿಯನ್ನು ಉಂಟು ಮಾಡುತ್ತಿದ್ದಾರೆ ಇಂತಹ ಪುಂಡರನ್ನು‌ ಬಂಧಿಸಿ ಎಂದರು.

ಹಾಲುಮತ ಸಮಾಜದ ಹಿರಿಯ‌ ವಕೀಲರಾದ ಪಕೀರಪ್ಪ ಚಳಗೇರಿ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಬ್ರಿಟಿಷನ ಸಿಂಹ ಸ್ವಪ್ನ ಹುತಾತ್ಮ, ಕಾಂತ್ರಿವೀರ ಸಂಗೋಳ್ಳಿ ರಾಯಣ್ಣನ ಮೂರ್ತಿಯನ್ನು ದ್ವಂಸಗೊಳಿಸಿದ್ದು ಖಂಡನೀಯವಾಗಿದೆ ಎಂದರು. ಹಾಲುಮತ ಸಮಾಜದ ಹಿರಿಯ ಮುಖಂಡ ಹೊಳಿಯಪ್ಪ ಕುರಿ ಮಾತನಾಡಿ ಎಂಇಎಸ್ ನವರು ಕರ್ನಾಟಕ ಸರ್ಕಾರದ ಮರಾಠ ಅಭಿವೃದ್ಧಿ ನಿಗಮ, ಮೀಸಲಾತಿ ಸೌಲಭ್ಯಗಳನ್ನು ಬಳಸಿಕೊಂಡು, ಕನ್ನಡದ ಅ‌ನ್ನವನ್ನು ತಿಂದು ದ್ರೋಹ ಮಾಡುತ್ತಿರುವ ಮರಾಠ ಸಮುದಾಯದ ಕೆಲವು ಕಿಡಿಗೇಡಿಗಳ ಕೃತ್ಯಗಳಿಂದಾಗಿ ಕನ್ನಡಿಗರ ಮತ್ತು ಮರಾಠಿ ಭಾಷಿಕರ ನಡುವೆ ಸೌಹಾರ್ದ ಕದಡುತ್ತಿದಾರೆ ಇಂತವರಿಗೆ ಕರ್ನಾಕದಲ್ಲಿ ಜಾಗವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೈದ್ರಾಬಾದ್-ಕರ್ನಾಟಕ ಯುವ ಶಕ್ತಿ ಸಂಘಟನೆ, ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವಾರು ಕನ್ನಡ ಪರ ಸಂಘಟನೆಗಳು‌ ಸಾತ್ ನೀಡಿದರು. ಈ ಸಂದರ್ಭದಲ್ಲಿ ಸಂಗಪ್ಪ ಪಂಚಮ್, ಚಂದ್ರಕಾಂತ ವಡಗೇರಿ, ಶರಣಪ್ಪ ಚೂರಿ, ಕೊಳ್ಳಪ್ಪ ಬೂದ್, ಶರಣಪ್ಪ ಕತ್ತಿ, ಯಮನೂರ ಸಂಗಂಟಿ, ಹನಮೇಶ ಚೌಡ್ಕಿ, ಯಮನೂರ ಕೋಮಾರ್, ಮಂಜುನಾಥ ತಳಗೇರಿ, ವಿಠ್ಠಪ್ಪ ಚಳಗೇರಿ, ಮಂಜುನಾಥ ನಾಲಗಾರ, ತೊಂಡೆಪ್ಪ ಚೂರಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top