ಆನ್ ಲೈನ್ ಕಮಿಷನ್ ಆಸೆಗೆ ಬಿದ್ದು 1.13 ಲಕ್ಷ ಕಳೆದುಕೊಂಡ ಯುವಕ..!

ದಾವಣಗೆರೆ: ಪಾರ್ಟ್ ಟೈಂ ಜಾಬ್ ಮೂಲಕ ಕಮಿಷನ್ ರೂಪದಲ್ಲಿ ಹಣ ನೀಡುವುದಾಗಿ ಮೊಬೈಲ್ ಗೆ ಬಂದ ಮೆಸೇಜ್ ನಂಬಿದ 18 ವರ್ಷದ ಯುವಕನೊಬ್ಬ 1.13 ಲಕ್ಷ ಕಳೆದುಕೊಂಡ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.

ಆಂಜನೇಯ ಬಡಾವಣೆಯ 18 ವರ್ಷದ ಅರ್ಜುನ್ ಹಣ ಕಳೆದುಕೊಂಡ ವಿದ್ಯಾರ್ಥಿಯಾಗಿದ್ಧಾನೆ. ಯುವಕನ ಮೊಬೈಲ್ ಗೆ ಪಾರ್ಟ್ ಟೈಂ, ಫುಲ್ ಟೈಂ ಜಾಬ್ ಮಾಡಿ ಪ್ರತಿದಿನ ಸಾವಿರಾರು ರೂಪಾಯಿ ಕಮಿಷನ್ ಪಡೆಯಬಹುದು ಎಂದು ಮೆಸೇಜ್ ಬಂದಿದೆ. ಈ ಮೆಸೇಜ್ ಬಂಬಿದ ಯುವಕ ಹಂತ ಹಂತವಾಗಿ ಹಣವನ್ನು ಕಂಪನಿಯವರು ಹೇಳಿದಂತೆ ಹಾಕುತ್ತಾ ಹೋಗಿದ್ದಾನೆ. ಮೊದ ಮೊದಲು ಹೇಳಿದಂತೆ ಕಮಿಷನ್ ಬಂದಿದೆ.ಇದನ್ನು ನಂಬಿದ ಯುವಕ ವಿವಿಧ ಹಂತದಲ್ಲಿ ಒಟ್ಟು 1.13.531 ರೂಪಾಯಿ ಹಣವನ್ನು ಪಾವತಿ ಮಾಡಿದ್ದಾನೆ. ಆಗ ನಿಮ್ಮ ಹಣ ವಾಪಸ್ ನೀಡಬೇಕೆಂದರೆ ತೆರಿಗೆಯಾಗಿ 20 ಸಾವಿರ ಕಟ್ಟುವಂತೆ ಕಂಪನಿಯಿಂದ ಮೆಸೇಜ್ ಬಂದಿದೆ. ಈ ವಿಚಾರವನ್ನು ಯುವಕ ಮನೆಯಲ್ಲಿ ಹೇಳಿದ್ದಾನೆ. ಆಗ ಇದೊಂದು ಆನ್ ಲೈನ್ ವಂಚನೆ ಎಂದು ಗೊತ್ತಾಗಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top