ಗಣಿ ಅಕ್ರಮ ತಡೆಗೆ ವೇ ಬ್ರಿಡ್ಜ್ ನಿರ್ಮಾಣಕ್ಕೆ ಕ್ರಮ

ಚಾಮರಾಜನಗರ: ಫೆಬ್ರವರಿ.05 : ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಹಾಗೂ ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ ಹಾಲಪ್ಪ ಬಸಪ್ಪ ಅವರು  ಚಾಮರಾಜನಗರದ ಜಿಲ್ಲಾ ಪಂಚಾಯತ್  ಸಭಾಂಗಣದಲ್ಲಿ ಇಂದು ಗಣಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.                  ಎತ್ತಿನ ಗಾಡಿಗಳಲ್ಲಿ ಮರಳು ಸಾಗಿಸುವವರಿಗೆ ಪೊಲೀಸರು ತೊಂದರೆ ಕೊಡಬಾರದು. ಗ್ರಾಮೀಣ ಪ್ರದೇಶದಲ್ಲಿ ವಸತಿ ಇತ್ಯಾದಿ ಕಾಮಗಾರಿಗಳಿಗೆ ಸಣ್ಣ ಪ್ರಮಾಣದಲ್ಲಿ ಮರಳು ಸಾಗಣೆಗೆ ಜಿಲ್ಲಾಡಳಿತ ಅನುಮತಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.                                               

 ಗಣಿಗಾರಿಕೆ ನಡೆಯುವ ಸ್ಥಳದಲ್ಲಿ   ಕಡ್ಡಾಯವಾಗಿ ಒಂದು ವೇ ಬ್ರಿಡ್ಜ್ ನಿರ್ಮಾಣ ಮಾಡಬೇಕು. ಬರುವ ಏಪ್ರಿಲ್ ಒಳಗಾಗಿ  ವೇ ಬ್ರಿಡ್ಜ್ ನಿರ್ಮಾಣವಾಗಬೇಕು. ಹಾಗಾದಲ್ಲಿ ಅಕ್ರಮ ಗಣಿ ಸಾಗಾಣಿಕೆಯನ್ನು ತಡೆಯಬಹುದು. ಸರ್ಕಾರಕ್ಕೆ ಬರಬೇಕಾಗಿರುವ ರಾಯಲ್ಟಿ ಹಣವೂ ಯಾವುದೇ ಸೋರಿಕೆಯಾಗದೇ ಬರುತ್ತದೆ. ಚಾಮರಾಜನಗರ ಜಿಲ್ಲೆಯಲ್ಲಿ ಗಣಿ ತೆರಿಗೆ ವಸೂಲಾತಿ ತೀರಾ ಕನಿಷ್ಠ ಮಟ್ಟದಲ್ಲಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವರು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ರಾಜಧನ ಮತ್ತು ತೆರಿಗೆ ಸಂಗ್ರಹ  ಮಾಡಬೇಕು ಎಂದು ಸಚಿವ ಆಚಾರ ಹಾಲಪ್ಪ ಬಸಪ್ಪ ತಾಕೀತು ಮಾಡಿದರು.               

ಈ ಸಂದರ್ಭದಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಸಿ.ಎಸ್.ನಿರಂಜನಕುಮಾರ್, ಗಣಿ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದ ಹೊರಭಾಗದಲ್ಲಿ ವಿಕಲಚೇತನರಿಗೆ ವಿವಿಧ ಸವಲತ್ತುಗಳನ್ನು ಸಚಿವರು ವಿತರಣೆ ಮಾಡಿದರು.                                                                                 

Leave a Comment

Your email address will not be published. Required fields are marked *

Translate »
Scroll to Top