ಗಂಗಾವತಿಯಲ್ಲಿ ಸಾಮೂಹಿಕ ಶ್ರೀ ಲಕ್ಷ್ಮೀಪೂಜಾ ಹಾಗೂ ಧಾರ್ಮಿಕ ಸಭೆ

ಗಂಗಾವತಿ: ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಕೊಪ್ಪಳ, ಸಾಮೂಹಿಕ ಶ್ರೀ ಲಕ್ಷ್ಮಿ ಪೂಜಾ ಸಮಿತಿ ಕೂಕನಪಳ್ಳಿ ಹಾಗೂ ಪ್ರಗತಿಬಂಧು ಜ್ಞಾನ ವಿಕಾಸ ಸ್ವ-ಸಹಾಯಕ ಸಂಘಗಳ ಒಕ್ಕೂಟ ಕೂಕನಪಳ್ಳಿ, ಗ್ರಾಮ ಪಂಚಾಯಿತ ಕಲ್ಲತಾವರಗೇರಾ, ಶ್ರೀ ಬೆಟ್ಟದ ಲಿಂಗೇಶ್ವರ ಸೇವಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ  ಪರಮಪೂಜ್ಯ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರ ಹಾಗೂ ಡಾ. ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜಾ ಹಾಗೂ ಧಾರ್ಮಿಕ ಸಭಾ ಮತ್ತು ಒಕ್ಕೂಟ ಪದಗ್ರಹಣ ಕಾರ್ಯಕ್ರಮದಲ್ಲಿ  ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿಯವರು ಪಾಲ್ಗೊಂಡಿದ್ದರು.

          ಇಂದು ಲಕ್ಷ್ಮಿ ಅರುಣರವರೊಂದಿಗೆ ಗಂಗಾವತಿಯ ಕೂಕನಪಳ್ಳಿ ಗ್ರಾಮದ ಶ್ರೀ ಬೆಟ್ಟದ ಲಿಂಗೇಶ್ವರ ದೇವಸ್ಥಾನದ ಎದುರು ನಡೆದ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಮತ್ತು ಒಕ್ಕೂಟ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶ್ರೀ ಲಕ್ಷ್ಮಿ ತಾಯಿಗೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

 

ಸಮಿತಿ ವತಿಯಿಂದ ಸ್ವಾವಲಂಬಿಯಾಗಿ ಯಾರ ಮೇಲೂ ಅವಲಂಬಿತರಾಗದೆ ತಮ್ಮ ಜೀವನವನ್ನು ತಾವು ನಡೆಸುತ್ತಾ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅನೇಕ ಮಹಿಳೆಯರಿಗೆ ಚೆಕ್ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಜನಾರ್ದನರೆಡ್ಡಿಯವರು, ಈ ಹಿಂದೆ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ತಾಯಿ ಸುಷ್ಮಾ ಸ್ವರಾಜ್ ರವರು ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಯ ನಮ್ಮ ನಿವಾಸಕ್ಕೆ ಆಗಮಿಸಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತರುತ್ತಿದ್ದರು.

 

ಅದೇ ರೀತಿ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜಾ ಸಮಿತಿ ಎಂಬ ಹೆಸರಿಡುವ ಮೂಲಕ ಕೂಕನಪಳ್ಳಿ ಗ್ರಾಮದ ಮಹಿಳೆಯರು ನಮ್ಮ ಸಂಸ್ಕೃತಿಯನ್ನು ಮರೆಯದೆ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  ಈ ಹಿಂದೆ ಸಚಿವನಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅನೇಕ ಬಾರಿ ಭಾಗಿಯಾದ ವಿಷಯವನ್ನು ನೆನೆಸಿದರು.

ಸಮಸ್ತ ಗಂಗಾವತಿಯ ಮಹಿಳೆಯರಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಹಕಾರದೊಂದಿಗೆ ಮಹಿಳೆಯರಿಗಾಗಿ ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳನ್ನು ತರುವುದಲ್ಲದೆ, ಮುಂದಿನ ಮೂರು ತಿಂಗಳ ಒಳಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹೊಲಿಗೆ ಯಂತ್ರದ ತರಬೇತಿ ಕೇಂದ್ರವನ್ನು ಸ್ಥಾಪಿಸಿ ಮಹಿಳೆಯರಿಗೆ ಸ್ವಾವಲಂಬಿಯಾಗಿ, ಆರ್ಥಿಕವಾಗಿ ಬದುಕಲು ಅನುಕೂಲ ಮಾಡಿಕೊಡುವ ಭರವಸೆ ನೀಡಿದರು. 

ಸಮಿತಿಯ ವತಿಯಿಂದ ಲಕ್ಷ್ಮಿ ಅರುಣರವರಿಗೆ ಉಡಿ ತುಂಬಿದರು. ಆನಂತರ ಲಕ್ಷ್ಮಿ ಅರುಣರವರು ಸಮಿತಿಯ ಮಹಿಳೆಯರಿಗೆ ಉಡಿ ತುಂಬಿದರು. ತದನಂತರ ಗ್ರಾಮದ ದೇವರಾದ ಶ್ರೀ ಬೆಟ್ಟದಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಲಾಯಿತು. 

          ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ.ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕೊಪ್ಪಳ ಲೋಕಸಭಾ ಸಂಸದರಾದ ಕರಡಿ ಸಂಗಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಪ್ಪ ಮುಕ್ಕಣ್ಣ ನಾಯಕ, ಶ್ರೀ ಕ್ಷೇ.ಧ.ಗ್ರಾ.ಯೋ. ಕೊಪ್ಪಳ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ಅಮರೇಶ ನಿಂಗಪ್ಪ, ಒಮು ಮರಾಠೆ, ಸುಮಂಗಲ ಮಲ್ಲೇಶಪ್ಪ ಗುಮಗೇರಿ, ಅಂಬವ್ವ ಶ್ರೀಕಾಂತ, ಸಂಗಮೇಶ್ ಬಾದಲವಾಡಗಿ, ಮಲ್ಲೇಶಪ್ಪ, ಯಮನೂರು ಚೌಡಕಿ, ಮನೋಹರ ಗೌಡ, ಡಿಕೆ ಅಗೋಲಿ, ಬೆಟ್ಟಪ್ಪ ಬೆಣಕಲ್, ವೀರೇಶ್ ಬಲಕುಂದಿ, ಹುಸೇನ್ ಭಾಷ, ನಾಗರಾಜ್ ಚಳಗೇರಿ ಹಾಗೂ ಸಮಿತಿಯ ಮುಖಂಡರು ಕಾರ್ಯಕರ್ತರು, ಗ್ರಾಮಸ್ಥರು ಸಾವಿರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top