ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ವಿದ್ಯುತ್ ಕಂಬ ಜಖಂ

ಮರಿಯಮ್ಮನಹಳ್ಳಿ : ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿ೫೦ರ ಬಳಿ ಇರುವ ರಾಮದೇವ್ ಡಾಬಾ ಪಕ್ಕದಲ್ಲಿ ಬರುವ ಬಿಎಂಎಂ ಕಾರ್ಖಾನೆಯ ವಾಹನ ಪಾರ್ಕಿಂಗ್ ಸ್ಥಳದಲ್ಲಿದ್ದ ವಿದ್ಯುತ್ ಕಂಬಕ್ಕೆ ಭಾರಿ ಗಾತ್ರದ ಲಾರಿಯು ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಸಂಪೂರ್ಣವಾಗಿ ಮುರಿದ ಘಟನೆ ಜರುಗಿದೆ.

ಈ ಘಟನೆ ನಡೆದ ಸ್ಥಳದಲ್ಲಿಯೇ ಪಂಚರ್ ಶಾಪ್ ಹಾಗೂ ಹೋಟೆಲ್‌ಗಳು ಹಾಗೂ ಬಹಳ ಲಾರಿಗಳು ಇದ್ದು ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ. ಪಟ್ಟಣದ ವಿದ್ಯುತ್ ಮುಖ್ಯ ಕೇಂದ್ರದಿಂದ ಡಣಾಪುರ, ಹನುಮನಹಳ್ಳಿ ಮತ್ತು ಗಾಳೆಮ್ಮನಗುಡಿ ಗ್ರಾಮಗಳಿಗೆ ಸರಬರಾಜು ಮಾಡುವ ೧೧ ಕೆವಿ ಎಚ್.ಟಿ ವಿದ್ಯುತ್ ಲೈನ್ ಕಂಬ ಇದಾಗಿದೆ. ಇದನ್ನು ಹೊರತು ಪಡಿಸಿಯೂ ಹಲವು ಮಾರ್ಗದ ವಿದ್ಯುತ್ ಕಂಬಗಳು ಈ ಸ್ಥಳದಲ್ಲಿ ಹಾದು ಹೋಗಿದ್ದು ಸಂಬಂಧಿಸಿದ ಜೆಸ್ಕಾಂ ಅಧಿಕಾರಿಗಳು ಸುರಕ್ಷತೆಯನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಕಳಕಳಿ.

Leave a Comment

Your email address will not be published. Required fields are marked *

Translate »
Scroll to Top