ಪ್ರಧಾನಿ ನರೇಂದ್ರ ಮೋದಿಗೆ ಅಂಬಾನಿ, ಅದಾನಿ ಬಗ್ಗೆ ಉತ್ತರಿಸಲು ಸಾಧ್ಯವಿಲ್ಲ ಹೀಗಾಗಿಯೇ ಬಹಿರಂಗ ರ‍್ಚೆಗೆ ಬರುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ತಮ್ಮ ಆಪ್ತ ಉದ್ಯಮಿಗಳ ಬಗ್ಗೆ ಮತ್ತು ಚುನಾವಣಾ ಬಾಂಡ್ಗಳನ್ನು ಹೇಗೆ ದರ‍್ಬಳಕೆ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದ ಕಾರಣ ಮೋದಿ ಬರ್ತ್ತಿಲ್ಲ.
ಪ್ರಧಾನಿ ನರೇಂದ್ರ ಮೋದಿಗೆ ಅಂಬಾನಿ, ಅದಾನಿ ಬಗ್ಗೆ ಉತ್ತರಿಸಲು ಸಾಧ್ಯವಿಲ್ಲ ಹೀಗಾಗಿಯೇ ಬಹಿರಂಗ ರ‍್ಚೆಗೆ ಬರುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ತಮ್ಮ ಆಪ್ತ ಉದ್ಯಮಿಗಳ ಬಗ್ಗೆ ಮತ್ತು ಚುನಾವಣಾ ಬಾಂಡ್ಗಳನ್ನು ಹೇಗೆ ದರ‍್ಬಳಕೆ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದ ಕಾರಣ ಮೋದಿ ಚರ್ಚೆಗೆ ಬರುತ್ತಿಲ್ಲ.
ಕೆಲವು ದಿನಗಳ ಹಿಂದೆ ಮೋದಿ ತಾನು ಚಿಕ್ಕವನಿದ್ದಾಗ ಮುಸ್ಲಿಂ ಬಾಂಧವರು ಈದ್ ವೇಳೆ ಊಟ ಕಳುಹಿಸುತ್ತಿದ್ದರು ಎಂದು ಹೇಳುತ್ತಿದ್ದರು. ನೀವು ಸಸ್ಯಾಹಾರಿಗಳಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಾನು ಪ್ರಧಾನಿಯನ್ನು ರ‍್ಚೆಗೆ ಆಹ್ವಾನಿಸಿ ಒಂದು ವಾರವಾಗಿದೆ, ಇದುವರೆಗೂ ಅವರ ಕಡೆಯಿಂದ ಉತ್ತರ ಬಂದಿಲ್ಲ ಎಂದು ಹೇಳಿದರು. ಪ್ರಜಾಪ್ರಭುತ್ವದಲ್ಲಿ ರ‍್ಚೆ ಅಗತ್ಯವಾಗಿದ್ದು, ರಾಹುಲ್ ಗಾಂಧಿ ಜತೆ ರ‍್ಚೆ ನಡೆಸಬೇಕು ಎಂದು ನರೇಂದ್ರ ಮೋದಿಯವರಿಗೆ ಹಲವರು ಪತ್ರ ಬರೆದಿದ್ದಾರೆ. ನಾನು ಸಿದ್ಧ, ನರೇಂದ್ರ ಮೋದಿ ಅವರು ಎಲ್ಲಿ ಬೇಕಾದರೂ ನನ್ನೊಂದಿಗೆ ರ‍್ಚೆ ನಡೆಸಬಹುದು. ಆದರೆ ಅವರೇ ನನ್ನೊಂದಿಗೆ ರ‍್ಚಿಸಲು ಬರುತ್ತಿಲ್ಲ ಎಂದಿದ್ದಾರೆ.
ದೆಹಲಿಯ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ್ತು ನಾಲ್ಕು ಸ್ಥಾನಗಳಲ್ಲಿ ಎಎಪಿ ಅಭ್ಯರ್ಥಿಗಳಿಗೆ ಮತ ಹಾಕುವಂತೆ ನಾನು ಕಾಂಗ್ರೆಸ್ ಕಾರ್ಯಕರ್ತರನ್ನ ಕೋರುತ್ತೇನೆ, ಅದೇ ರಿತಿ ನಾಲ್ಕು ಸ್ಥಾನಗಳಲ್ಲಿ ತಮ್ಮ ಪಕ್ಷದ ನಾಯಕರಿಗೆ ಮತ್ತು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಎಎಪಿ ಕಾರ್ಯಕರ್ತರ‍್ತರ ಬಳಿ ಮನವಿ ಮಾಡುತ್ತೇನೆ ಎಂದರು.
ಸಣ್ಣ ಉದ್ಯಮಿಗಳಿಗೆ ಪ್ರಧಾನಿ ಮೋದಿ ಏನೂ ಮಾಡಿಲ್ಲ, ಆದರೆ ಅದಾನಿ, ಅಂಬಾನಿಯಂತಹ ಕೈಗಾರಿಕೋದ್ಯಮಿಗಳಿಗೆ 16 ಲಕ್ಷ ಕೋಟಿ ರೂ. ನೀಡಿದ್ದಾರೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ನಾವು ಜಿಎಸ್ಟಿಯನ್ನು ಸರಳೀಕರಿಸುತ್ತೇವೆ ನತ್ತು ದೊಡ್ಡ ಕೈಗಾರಿಕೋದ್ಯಮಿಗಳಿಗಿಂತ ಸಣ್ಣ ಉದ್ಯಮಿಗಳಿಗೆ ಸಹಾಯ ಮಾಡುತ್ತೇವೆ ಎಂದರು.