ಸರಕಾರಿ ಶಾಲೆಗೆ ಬೀಗ ಜಡಿದು ಗ್ರಾಮಸ್ಥರ ಅನಿರ್ಧಿಷ್ಟಾವಧಿ ಧರಣಿ

ರಾಯಚೂರು : ಜಿಲ್ಲೆಯ ಮಸ್ಕಿತಾಲೂಕಿನ ಉಸ್ಕಿಹಾಳ ಗ್ರಾಮದ ಗ್ರಾಮಸ್ಥರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಅನಿರ್ಧಿಷ್ಟಾವಧಿ ಧರಣಿ ನಡೆಸಿದರು. ಈ ಶಾಲೆಯು 73 ವಿದ್ಯಾರ್ಥಿಗಳನ್ನು ಹೊಂದಿದ್ದು, ಖಾಯಂ ಶಿಕ್ಷಕರ ಕೊರತೆ ಹಾಗೂ ಅಥಿತಿ ಶಿಕ್ಷಕರಂತೂ ಕೇಳಲೇ ಬೇಡಿ,ಇಲ್ಲಿ ಒಬ್ಬ ಶಿಕ್ಷಕರೇ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಭೋಧನೆ ಮಾಡುವರು. ಇಂದು ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮದ ಮುಖಂಡರ ಸಮ್ಮುಖದಲ್ಲೇ ಅನಿರ್ಧಿಷ್ಟ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು,, ಈ ಶಾಲೆಯಲ್ಲಿ ಒಟ್ಟು ಮೂರು ಶಿಕ್ಷಕರ ಹುದ್ದೆ ಖಾಲಿ ಇದ್ದು, ಖಾಯಂ ಶಿಕ್ಷಕರ ಹುದ್ದೆ ಎದ್ದುಕಾಣುತ್ತದೆ ಕಾಯಂ ಶಿಕ್ಷಕರು ನೇಮಕ ಆಗುವವರೆಗೆ ನಮ್ಮ ಹೋರಾಟ ನಿಲ್ಲದು ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಮಾರಲದಿನ್ನಿ ಸಿ ಆರ್ ಪಿ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ ಎಂದರರು ಆದರೂ ಪ್ರಯೋಜನವಾಗಿಲ್ಲ. ಈಗಲಾದರೂ ಶಿಕ್ಷಣ ಇಲಾಖೆಯು ಅಧಿಕಾರಿಗಳು ಕಾಯಂ ಶಿಕ್ಷಕರ ನೇಮಕ ಮಾಡದೇ ಹೋದರೆ ಹೋದರೆ ಮುಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ತರು ಉಗ್ರ ಹೋರಾಟವನ್ನೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆಗೆ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ನಮ್ಮ ಉಸ್ಕಿಹಾಳ ಗ್ರಾಮದ ಶಾಲೆ ಶುರು ಆದಾಗಿನಿಂದಲೂ ಒಬ್ಬೇ ಒಬ್ಬರು ಖಾಯಂ ಶಿಕ್ಷಕರ ನೇಮಕ ಮಾಡಲಾಗಿಲ್ಲ, ಹಾಗೂ ಅತಿಥಿ ಶಿಕ್ಷಕರ ನೇಮಕವಂತು ಕೇಳಲೇಬೇಡಿ, ಈ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ತಾಲೂಕ ಶಿಕ್ಷಣ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಮಾರುತಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಉಸ್ಕಿಹಾಳ, ಖಾಯಂ ಶಿಕ್ಷಕರ ನೇಮಕ ಮಾಡುವವರೆಗೆ ಒಬ್ಬ ಖಾಯಂ ಶಿಕ್ಷಕನಿಗೆ ನೀಡುವ ವೇತನದಲ್ಲಿಯಾದರು ಬಿಇಡಿ ಮತ್ತು ಡಿಇಡಿ ಮುಗಿಸಿದ ಪ್ರತಿಭಾವಂತ ಏಷ್ಟೋ ಯುವಕ ಯುವತಿಯರು ನಿರುದ್ಯೋಗಿಗಳಿದ್ದಾರೆ ಅಂತಹವರನ್ನು ಗುರುತಿಸಿ ಮೂರು ಜನ ಅತಿಥಿ ಶಿಕ್ಷಕರ ನೇಮಕ ಮಾಡಬಹುದಲ್ಲವೇ…? ಶಿಕ್ಷಣ ಇಲಾಖೆಯು ಹಣವನ್ನು ಉಳಿಸುವ ಜಾಣತನಕ್ಕಿಂತ ವಿದ್ಯಾರ್ಥಿಗಳ ಭವಿಷ್ಯವನ್ನು ಅರಿಯಬೇಕು. ರಮೇಶ ಗ್ರಾಮ ಪಂಚಾಯಿತಿ ಸದಸ್ಯರು ಉಸ್ಕಿಹಾಳ.

ವರದಿ -ಅಮರೇಶ್ ಪತ್ತಾರ್ ಮಸ್ಕಿ

Leave a Comment

Your email address will not be published. Required fields are marked *

Translate »
Scroll to Top