ಟಿವಿಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಎರಡು ಕ್ಷೇತ್ರಗಳಿಂದ ನಟ ದಳಪತಿ ವಿಜಯ್ ಸ್ಪರ್ಧೆ

Kannada Nadu
ಟಿವಿಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಎರಡು ಕ್ಷೇತ್ರಗಳಿಂದ ನಟ ದಳಪತಿ ವಿಜಯ್ ಸ್ಪರ್ಧೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಕಣ ಈಗ ಅಧಿಕೃತವಾಗಿ ಕಳೆಗಟ್ಟಿದೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಮತ್ತು ನಟ ದಳಪತಿ ವಿಜಯ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ರಾಜಕೀಯ ವಿರೋಧಿಗಳಿಗೆ ಪ್ರಬಲ ಸಂದೇಶ ರವಾನಿಸಿದ್ದಾರೆ.
ಸ್ವತಃ ವಿಜಯ್ ಅವರು ಈ ಬಾರಿ ಭದ್ರಕೋಟೆ ಎನ್ನಲಾದ ಎರಡು ಪ್ರಮುಖ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.
ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧೆ
ಪಕ್ಷದ ಸಾರಥಿ ವಿಜಯ್ ಅವರು ಚೆನ್ನೈನ ಪೆರಂಬೂರ್ ಮತ್ತು ಮಧ್ಯ ತಮಿಳುನಾಡಿನ ಪ್ರಮುಖ ನಗರವಾದ ತಿರುಚಿ ಈಸ್ಟ್ ಕ್ಷೇತ್ರಗಳಿಂದ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಈ ಎರಡು ಕ್ಷೇತ್ರಗಳನ್ನು ಆಯ್ದುಕೊಳ್ಳುವ ಮೂಲಕ ಅವರು ಉತ್ತರ ಮತ್ತು ಮಧ್ಯ ತಮಿಳುನಾಡಿನ ಮತದಾರರ ಮೇಲೆ ಏಕಕಾಲಕ್ಕೆ ಪ್ರಭಾವ ಬೀರಲು ಮುಂದಾಗಿದ್ದಾರೆ.
ರಾಜಕೀಯ ಪಾದಾರ್ಪಣೆಯ ಮೊದಲ ಚುನಾವಣೆಯಲ್ಲೇ ಎರಡು ಕಡೆ ಸ್ಪರ್ಧಿಸುವ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಅವರು ಪ್ರದರ್ಶಿಸಿದ್ದಾರೆ.
ವಿಜಯ್ ಅವರು ತಮ್ಮ ಆಪ್ತ ಬಳಗ ಹಾಗೂ ಬಲಿಷ್ಠ ಅಭ್ಯರ್ಥಿಗಳನ್ನು ವಿವಿಧ ಕ್ಷೇತ್ರಗಳಿಗೆ ನಿಯೋಜಿಸಿದ್ದಾರೆ. ಪ್ರಮುಖವಾಗಿ ಟಿ. ನಗರ ಕ್ಷೇತ್ರಕ್ಕೆ ಎನ್.ಆನಂದ್, ಮೈಲಾಪುರ್ ಕ್ಷೇತ್ರಕ್ಕೆ ಪಿ. ವೆಂಕಟರಮಣನ್, ಮತ್ತು ವಿಲ್ಲಿವಾಕ್ಕಂ ಕ್ಷೇತ್ರಕ್ಕೆ ಆದವ್ ಅರ್ಜುನ ಅವರನ್ನು ಕಣಕ್ಕಿಳಿಸಲಾಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";