ಕೆ.ಸಿ. ಜನರಲ್ ಆಸ್ಪತ್ರೆಗೆ ವರ್ಷಪೂರ್ತಿ ಉಚಿತ ಊಟ ವಿತರಣೆಗೆ ನಿರ್ಧಾರ
ಬೆಂಗಳೂರು : ಲಯನ್ ಜಿಲ್ಲಾ 317ಎಫ್ ನ 2024-25 ನೇ ಸಾಲಿನ ಕ್ಯಾಬಿನೆಟ್ ಪದಾಧಿಕಾರಿಗಳ ಪ್ರಮಾಣವಚನ ಸಮಾರಂಭದಲ್ಲಿ ಕೆ.ಸಿ. ಜನರಲ್ ಆಸ್ಪತ್ರೆಗೆ ವರ್ಷಪೂರ್ತಿ ಉಚಿತ ಊಟ ವಿತರಣೆ ಸೇರಿದಂತೆ 40 ಕ್ಕೂ ಅಧಿಕ ಸೇವಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ಬೆಂಗಳೂರು ನಿಮಾನ್ಸ್ ಕನ್ನೆನ್ನನ್ ಹಾಲ್ ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಂತರಾಷ್ಟ್ರೀಯ ಲಯನ್ ಸಂಸ್ಥೆಯ ಮಾಜಿ ನಿರ್ದೇಶಕ ವಿ .ವಿಜಯಕುಮಾರ್ ರಾಜು, ಉಪರಾಜ್ಯಪಾಲ ಆಕಾಶ್ ವಿ ಸುವರ್ಣ, ರಾಜು ಚಂದ್ರಶೇಖರ್ ಪ್ರಮಾಣವಚನ ಬೋಧಿಸಿದರು.
ಅಂತರಾಷ್ಟ್ರೀಯ ಮಾಜಿ ನಿರ್ದೇಶಕರಾದ ಕೆ ವಂಶಿಧರ್ ಬಾಬು, ವಿ. ವಿ ಕೃಷ್ಣಾರೆಡ್ಡಿ, ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ 317ರ ಡಾ: ಎಸ್ ಕೃಷ್ಣಗೌಡ, ಜಿಲ್ಲಾ ಗವರ್ನರ್ ಸಿ.ಎಂ. ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ ವೇತನ, ಲ್ಯಾಪ್ ಟಾಪ್ ವಿತರಣೆ. ಹಸಿವು ನಿವಾರಣೆ ಕಾರ್ಯಕ್ರಮದ ಅಂಗವಾಗಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಒಂದು ವರ್ಷ ಉಚಿತ ಊಟದ ವ್ಯವಸ್ಥೆ, 51,108 ರೈನ್ ಕೋಟ್ ವಿತರಣೆ, ಪರಿಸರ ಸಂರಕ್ಷಣೆ, ಬಾಲಾವಸ್ಥೆ ಕ್ಯಾನ್ಸರ್ ತಡೆಗಟ್ಟಲು ನೆರವು, ದೃಷ್ಟಿ ದೋಷ ನಿವಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಮಾಧ್ಯಮ ಸಂಯೋಜಕರಾದ ಲಯನ್ ಸಿಂಹ ಶಾಸ್ತ್ರಿ ತಿಳಿಸಿದ್ದಾರೆ.