ಬೆಂಗಳೂರು: ಕನ್ನಡ ಸೇರಿದಂತೆ ಭಾರತದ ದಕ್ಷಿಣದ ಭಾಷೆಗಳು ತಮ್ಮ ವೈವಿಧ್ಯತೆಗಳ ಮೂಲಕ ಜಗತ್ತಿನಲ್ಲಿಯೇ ವೈಶಿಷ್ಟ್ಯತೆ ಹೊಂದಿದ್ದು ಈ ಆಸ್ಮಿತೆ ಸದಾ ಉಳಿದು ಬೆಳೆಯುವಂತೆ ನಾವು ಪ್ರಯತ್ನಶೀಲರಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಚಿತ್ರಕಲಾ ಪರಿಷತ್ ಸಭಾಂಗಣದಲ್ಲಿ ಕಲ್ಲಚ್ಚು ಪ್ರಕಾಶನದ 15ನೇ ಆವೃತ್ತಿಯ 2024 ರ ಪ್ರತಿಷ್ಠಿತ ಕಲ್ಲಚ್ಚು ಪ್ರಶಸ್ತಿಯನ್ನು ಪತ್ರಕರ್ತ, ಸಾಹಿತಿ ಡಾ ನಾಗೇಶ್ ಪ್ರಭು ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು. ಸಮಾರಂಭ ಉದ್ಘಾಟಿಸಿದ KCP ಅಧ್ಯಕ್ಷ ಬಿ ಎಲ್ ಶಂಕರ್ ಕಲಾ ಪ್ರಕಾರಗಳ ಜತೆಗೆ ಚಿತ್ರಕಲಾ ಪರಿಷತ್ ಎಲ್ಲ ರೀತಿಯ ಸಮಾಜಮುಖಿ ಕಾರ್ಯಗಳಿಗೆ ಬದ್ದ ಎಂದು ತಿಳಿಸಿ ಕೃತಕ ಬುದ್ಧಿಮತ್ತೆಯ ಈ ದಿನಗಳಲ್ಲಿ ಸಾಹಿತ್ಯ ಒಂದು ಹೊಸ ಸವಾಲು ಎದುರಿಸುತಿದೆ ಎಂದರು . ಈ ಸಂದರ್ಭದಲ್ಲಿ ಕಲ್ಲಚ್ಚು ಪ್ರಕಾಶನ ಹೊರ ತಂದಿರುವ ಬೆಂಗಳೂರಿನ ಲೇಖಕ ಮೋಹನ್ ದಾಸ್ ಕೆ ಎಸ್ ಅವರ ಚಿದಂಬರ ಕವನ ಸಂಕಲನವನ್ನು ಕರ್ನಾಟಕ ವಿಶ್ವವಿದ್ಯಾಲಯದ ಹಂಪಿಯ ಕುಲಪತಿಗಳಾದ ಡಾ ಡಿ ವಿ ಪರಮಶಿವಮೂರ್ತಿ ಬಿಡುಗಡೆಗೊಳಿಸಿ ಇದೀಗ ಕನ್ನಡ ಕಾವ್ಯ ಲೋಕ ಹೆಚ್ಚು ಭಾವನ್ಮಾತಕವಾಗಿ ಮೂಡಿಬಂದಿದೆ ಎಂದರು. ಪ್ರಕಾಶನದ ಮುಖ್ಯಸ್ಥ ಸಾಹಿತಿ ಮಹೇಶ ಆರ್ ನಾಯಕ್ ಸ್ವಾಗತಿಸಿದರು ಮತ್ತು ಭಾರತೀ ಟಿ ಎಸ್ ವಂದಿಸಿದರು ಆಶ್ವಿನ್ ಬಿ ಎಂ. ಕವನ ವಾಚನಗೈದು, ನೂರ್ ಸಮದ್ ಅಬ್ಬಲಗೆರೆ ನಿರೂಪಿಸಿದರು.