ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸೋಮ ವಂಶ ಕ್ಷತ್ರಿಯ ಕುಲ ತಿಲಕ ಸಹಸ್ರ ಬಾಹು ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ

ಕುಷ್ಟಗಿ :ದಿನಾಂಕ ೧೧ ರಂದು ಕುಷ್ಟಗಿಯ ಎಸ್.ಎಸ್.ಕೆ.ಸಮಾಜದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸೋಮ ವಂಶ ಕ್ಷತ್ರಿಯ ಕುಲ ತಿಲಕ ಸಹಸ್ರ ಬಾಹು ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಯನ್ನು ಆಚರಿಸಲಾಗುತ್ತದೆ. ಅಡವಿರಾಯ ದೇವಸ್ಥಾನದ ಹಿಂದೆ ಇರುವ ಶ್ರೀಅಂಭಾ ಭವಾನಿ ದೇವಸ್ಥಾನದ ಪ್ಲಾಟನಲ್ಲಿ ಬೆಳಿಗ್ಗೆ ಸಮಾಜದ ಎಲ್ಲಾ ಮುಖಂಡರು ಸೇರಿ ನಗರದ ಪ್ರಮುಖ ರಸ್ತೆಗಳ ಮುಖಾಂತರ ಬೈಕ್ ರ್ಯಾಲಿ ನಡೆಸಿ ತಹಶಿಲ್ದಾರರ ಕಚೇರಿಗೆ‌ ತೆರಳಿ ತಹಶಿಲ್ದಾರರ ಮುಖಾಂತರ ಮಾನ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರುವ ವರ್ಷದಲ್ಲಿ ರಾಜ್ಯ ಸರಕಾರವು ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಆಚರಣೆಗೆ ಮುಂದಾಗಬೇಕು ಎಂದು ಮನವಿ ಸಲ್ಲಿಸಲಾಗುವದು.

ನಂತರ ಅಲ್ಲಿಂದ ತೆರಳಿ ಶ್ರೀಅಂಭಾ ಭವಾನಿ ದೇವಸ್ಥಾನದ ಪ್ಲಾಟನಲ್ಲಿ ಶ್ರೀ ಸಹಸ್ರಾರ್ಜುನ ಮಹಾರಾಜರ ಬಾವಚಿತ್ರಕ್ಕೆ ವಿಶೇಷ ಪೂಜೆ, ಸುಮಂಗಲಿಯರಿಂದ ಆರತಿ,ನೈವೇದ್ಯ, ನಂತರ ಮಹಾ ಪ್ರಸಾದ ಜರುಗಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಶ್ರೀ ಸಹಸ್ರಾರ್ಜುನ ಮಹಾರಾಜರ ಕುರಿತು ಉಪನ್ಯಾಸ, ನೆರವೇರಿಸಿದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕಾರಣ ಈ ಕಾರ್ಯಕ್ರಮಕ್ಕೆ ‌ಸಮಾಜದ ಬಂಧುಗಳು ಆಗಮಿಸಿ ಯಶಸ್ವಿ ಗೋಳಿಸಲು ಸಮಾಜದ ಅಧ್ಯಕ್ಷ ರವಿಂದ್ರ ಬಾಕಳೆ, ಉಪಾಧ್ಯಕ್ಷ ರಾಜಣಸಾ ಕಾಟವಾ.ಪರಶುರಾಮ ನಿರಂಜನ,ವೆಂಕಟೇಶ ಕಾಟವಾ, ಮನವಿ ಮಾಡಿದ್ದಾರೆ .

Leave a Comment

Your email address will not be published. Required fields are marked *

Translate »
Scroll to Top