ಮೇಷ ರಾಶಿ: ದೂರದ ಬಂಧುಗಳಿಂದ ವಿವಾದಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ದೊರೆಯುತ್ತದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬವಾದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ.ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಅನುಕೂಲಕರವಾಗಿರುತ್ತದೆ. ಉದ್ಯೋಗದ ವಿಚಾರಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚೆಗಳು ಯಶಸ್ವಿಯಾಗುತ್ತವೆ ಮತ್ತು ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.
ವೃಷಭ ರಾಶಿ: ಇತರರೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ, ಕುಟುಂಬಸದಸ್ಯರು ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುತ್ತಾರೆ. ಮಕ್ಕಳ ಆರೋಗ್ಯಕ್ಕೆ ವೈದ್ಯಕೀಯ ಸಮಾಲೋಚನೆ ಅಗತ್ಯವಿರುತ್ತದೆ. ವೃತ್ತಿ ಉದ್ಯೋಗಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ.ವ್ಯಾಪಾರದಲ್ಲಿ ಬೆಲೆಬಾಳುವ ವಸ್ತುಗಳ ವಿಷಯದಲ್ಲಿ ಹೆಚ್ಚಿನ ಕಾಳಜಿ ಅಗತ್ಯ.ದೈವಿಕ ಚಿಂತನೆ ಹೆಚ್ಚಾಗುತ್ತದೆ.
ಮಿಥುನ ರಾಶಿ: ದೈಹಿಕ ,ಮಾನಸಿಕ ಅನಾರೋಗ್ಯ ಸಮಸ್ಯೆಗಳು ಬಾಧಿಸುತ್ತವೆ.ಮಾತೃ ವರ್ಗದ ಬಂಧುಗಳೊಂದಿಗೆ ವಿವಾದ ಉಂಟಾಗುತ್ತದೆ.ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲೂ ಅಡೆತಡೆಗಳು ಉಂಟಾಗುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಮಿಶ್ರಮ ಫಲಿತಾಂಶಗಳಿರುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.
ಕಟಕ ರಾಶಿ: ಹೊಸ ವಸ್ತ್ರ , ಆಭರಣಗಳನ್ನು ಖರೀದಿಸಲಾಗುತ್ತದೆ ಮತ್ತು ಎಲ್ಲಾ ಕಡೆಯಿಂದಲೂ ಅನುಕೂಲತೆ ಹೆಚ್ಚಾಗುತ್ತದೆ. ಕೌಟುಂಬಿಕ ವಿಚಾರದಲ್ಲಿ ನಿಮ್ಮ ನಿರ್ಧಾರಗಳು ಎಲ್ಲರಿಗೂ ಇಷ್ಟವಾಗುವಂತೆ ಇರುತ್ತವೆ.ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಒದಗಿಬರುತ್ತವೆ.ವೃತ್ತಿಪರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಸಹೋದರರೊಂದಿಗಿನ ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ.
ಸಿಂಹ ರಾಶಿ: ಆರಂಭಿಸಿದ ಕೆಲಸಗಳು ನಿಲ್ಲುತ್ತವೆ.ಆರ್ಥಿಕ ಸಮಸ್ಯೆಗಳಿರುತ್ತವೆ.ಮನೆಯ ಹೊರಗಿನ ದೀರ್ಘಕಾಲದ ಸಮಸ್ಯೆಗಳು ಕಿರಿಕಿರಿಯನ್ನುಂಟುಮಾಡುತ್ತವೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಸ್ವಂತ ಆಲೋಚನೆಗಳು ಕೂಡಿ ಬರುವುದಿಲ್ಲ. ದೈವಿಕ ಚಿಂತನೆ ಮೂಡುತ್ತದೆ.
ಕನ್ಯಾ ರಾಶಿ: ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಮನೆಯ ಹೊರಗಿನ ಸಮಸ್ಯೆಗಳನ್ನು ನಿಧಾನವಾಗಿ ಪರಿಹರಿಸಿಕೊಳ್ಳುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ನಷ್ಟವನ್ನು ನಿವಾರಿಸಿ ಲಾಭವನ್ನು ಗಳಿಸುತ್ತೀರಿ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು.ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ.

ತುಲಾ ರಾಶಿ: ಪ್ರಮುಖ ವ್ಯವಹಾರಗಳಲ್ಲಿ ಅನಿರೀಕ್ಷಿತ ತೊಂದರೆಗಳು ಉಂಟಾಗುತ್ತವೆ.ದೂರದೇಶಕ್ಕೆ ಪ್ರಯಾಣ ಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಖರ್ಚುಗಳು ಹೆಚ್ಚಾಗುತ್ತವೆ.ನಿರುದ್ಯೋಗಿಗಳ ಪ್ರಯತ್ನಗಳು ನಿರಾಸೆ ಉಂಟುಮಾಡುತ್ತವೆ. ಉದ್ಯೋಗಗಳಲ್ಲಿ ಆತುರದಲ್ಲಿ ಇತರರೊಂದಿಗೆ ಮಾತನಾಡುವುದು ಒಳ್ಳೆಯದಲ್ಲ. ವ್ಯಾಪಾರದಲ್ಲಿ ಸಣ್ಣಪುಟ್ಟ ನಷ್ಟಗಳಿರುತ್ತವೆ.
ವೃಶ್ಚಿಕ ರಾಶಿ: ಆದಾಯದ ಮೂಲಗಳು ಹೆಚ್ಚಾಗುತ್ತವೆ.ಇತರರ ಸಹಾಯದಿಂದ ಕೆಲವು ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ದೀರ್ಘಕಾಲದ ಸಾಲಗಳನ್ನು ತೀರಿಸುತ್ತೀರಿ. ಮಕ್ಕಳಿಗೆ ಹೊಸ ಶೈಕ್ಷಣಿಕ ಉದ್ಯೋಗಾವಕಾಶಗಳು ದೊರೆಯುತ್ತವೆ.ದೈಹಿಕ ಮತ್ತು ಮಾನಸಿಕ ಪ್ರಶಾಂತತೆ ದೊರೆಯುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳು ಬೆಂಬಲ ತೋರುತ್ತಾರೆ.
ಧನುಸ್ಸು ರಾಶಿ: ನೆರೆ ಹೊರೆಯವರೊಂದಿಗೆ ಸ್ಥಿರಾಸ್ತಿ ವಿವಾದಗಳು ಉಂಟಾಗುತ್ತವೆ.ಉದ್ಯೋಗಿಗಳು ಉನ್ನತ ಸ್ಥಾನಗಳನ್ನು ಪಡೆಯುತ್ತಾರೆ. ಕೆಲವು ವ್ಯವಹಾರಗಳಲ್ಲಿ ಆತ್ಮಸ್ಥೈರ್ಯದಿಂದ ದೃಢ ನಿರ್ಧಾರಗಳನ್ನು ತೆಗೆದುಕೊಂಡು ಲಾಭವನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮನೆಯ ಹೊರಗೆ ಗೌರವ,ಕೀರ್ತಿ, ಪ್ರತಿಷ್ಠೆ ಹೆಚ್ಚಾಗುತ್ತದೆ ಹೆಚ್ಚಾಗುತ್ತದೆ.
ಮಕರ ರಾಶಿ: ಸಮಾಜದಲ್ಲಿ ಕೀರ್ತಿ, ಪ್ರತಿಷ್ಠೆ ಹೆಚ್ಚಾಗುತ್ತದೆ.ಗೃಹ ನಿರ್ಮಾಣ ಕೆಲಸಗಳನ್ನು ಕಾರ್ಯಗತಗೊಳಿಸುತ್ತೀರಿ. ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಮಕ್ಕಳ ವಿವಾಹ ಉದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ. ಆರ್ಥಿಕ ವಾತಾವರಣ ಅನುಕೂಲಕರವಾಗಿ ಇರುತ್ತದೆ. ಮಕ್ಕ ಆರೋಗ್ಯದ ಬಗ್ಗೆ ಶುಭ ಸುದ್ದಿ ಸಿಗುತ್ತದೆ.
ಕುಂಭ ರಾಶಿ: ನಿರೀಕ್ಷಿತ ಸಮಯದಲ್ಲಿ ನಿರೀಕ್ಷಿತ ರೀತಿಯಲ್ಲಿ ಸೌಲಭ್ಯಗಳು ಸಿಗದೇ ತೊಂದರೆ ಅನುಭವಿಸುತ್ತೀರಿ.ದೂರದ ಪ್ರಯಾಣಗಳು ಮುಂದೂಡಲ್ಪಡುತ್ತವೆ. ಹಣದ ವಿಚಾರದಲ್ಲಿ ಇತರರಿಗೆ ಮಾತು ಕೊಡುವುದು ಒಳ್ಳೆಯದಲ್ಲ.ವೃತ್ತಿಪರ ಉದ್ಯೋಗಗಳಲ್ಲಿ ಸ್ಥಿರತೆಯ ಕೊರತೆ ಇರುತ್ತದೆ. ಕೆಲವರ ವರ್ತನೆ ಕಿರಿ ಕಿರಿ ಗೊಳಿಸುತ್ತದೆ.
ಮೀನ ರಾಶಿ: ಕುಟುಂಬದ ಸದಸ್ಯರಿಂದ ಶುಭ ಸುದ್ದಿ ದೊರೆಯುತ್ತದೆ.ಹೊಸ ವಾಹನ ಖರೀದಿಸುತ್ತೀರಿ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ.ಮನೆಗೆ ಬಂಧುಗಳ ಆಗಮನ ಸಂತಸ ತರುತ್ತದೆ.ವೃತ್ತಿಪರ ಉದ್ಯೋಗಗಳಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕೆಲವು ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ.