ಮೇಷ ರಾಶಿ: ಆದಾಯ ಮಾರ್ಗಗಳು ಹೆಚ್ಚಾಗುತ್ತವೆ.ದೀರ್ಘಾವಧಿಯ ಸಾಲದ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.ವೃತ್ತಿಪರ ವ್ಯವಹಾರಗಳನ್ನು ಪ್ರಾರಂಭಿಸುವಲ್ಲಿ ಅಡೆತಡೆಗಳು ನಿವಾರಣೆಯಾಗುತ್ತವೆ. ಆಧ್ಯಾತ್ಮಿಕ ಚಟುವಟಿಕೆಗಳನ್ನು ಪ್ರಾರಂಭಿಸುತ್ತೀರಿ. ಪ್ರಮುಖ ವಿಷಯಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು, ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತೀರಿ.ಹೊಸ ಉದ್ಯೋಗ ಯೋಗವಿದೆ.
ವೃಷಭ ರಾಶಿ: ಕೈಗೊಂಡ ವ್ಯವಹಾರಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಪ್ರಯಾಣದ ಸಮಯದಲ್ಲಿ ಹೊಸ ಪರಿಚಯಗಳು ಉಂಟಾಗುತ್ತವೆ, ಮಕ್ಕಳಿಗೆ ಉನ್ನತ ಶಿಕ್ಷಣದ ಅವಕಾಶಗಳು ದೊರೆಯುತ್ತವೆ. ದೂರದ ಬಂಧುಗಳಿಂದ ಶುಭಕಾರ್ಯಕ್ಕೆ ಆಹ್ವಾನಗಳು ಬರುತ್ತವೆ.ವೃತ್ತಿಪರ ಉದ್ಯೋಗಗಳಲ್ಲಿನ ಸಮಸ್ಯೆಗಳನ್ನು ಧೈರ್ಯದಿಂದ ನಿವಾರಿಸುತ್ತೀರಿ.
ಮಿಥುನ ರಾಶಿ: ಹಣಕಾಸಿನ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ.ಕೆಲವು ಕ್ಷೇತ್ರಗಳಿಗೆ ಅನುಕೂಲಕರ ವಾತಾವರಣವಿರುತ್ತದೆ.ಗೃಹ ನಿರ್ಮಾಣ ವಿಚಾರಗಳು ಕಾರ್ಯ ರೂಪಕ್ಕೆ ಬರುತ್ತವೆ. ಬಂಧು ಮಿತ್ರರಿಂದ ಪ್ರಮುಖ ಮಾಹಿತಿ ಸಂಗ್ರಹಿಸುತ್ತೀರಿ.ಮನೆಯಲ್ಲಿ ಕೆಲವರ ವರ್ತನೆ ಕಿರಿ ಕಿರಿಯನ್ನುಂಟು ಮಾಡುತ್ತವೆ.
ಕಟಕ ರಾಶಿ: ಮಿತ್ರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ.ಸ್ಥಿರಾಸ್ತಿ ಖರೀದಿಗೆ ಪ್ರಯತ್ನಗಳು ನಡೆಯುತ್ತವೆ.ಹಠಾತ್ ಪ್ರವಾಸಗಳು ಲಾಭದಾಯಕವಾಗಿ ಸಾಗುತ್ತವೆ.ಧೀರ್ಘ ಕಾಲದ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ಇತರರ ವಿಚಾರದಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ. ಕುಟುಂಬ ಸದಸ್ಯರೊಂದಿಗೆ ಭೋಜನಾ ಮನೋರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೀರಿ.
ಸಿಂಹ ರಾಶಿ: ಮನೆಯಲ್ಲಿ ಕುಟುಂಬಸದಸ್ಯರೊಂದಿಗೆ ಸಂತೋಷದಿಂದ ಕಳೆಯುತ್ತೀರ. ನಿರುದ್ಯೋಗಿಗಳಿಗೆ ಬಹುನಿರೀಕ್ಷಿತ ಅವಕಾಶಗಳು ದೊರೆಯುತ್ತವೆ. ಭೂಮಿ ಸಂಬಂಧಿತ ವಿವಾದಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಕೆಲವು ವ್ಯವಹಾರಗಳಲ್ಲಿ ಸಹೋದರರಿಂದ ನಿರೀಕ್ಷಿತ ಸಹಾಯ ದೊರೆಯುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಪ್ರಮುಖ ಮಾಹಿತಿ ದೊರೆಯುತ್ತದೆ.
ಕನ್ಯ ರಾಶಿ: ಸಮಾಜದಲ್ಲಿ ವಿಶೇಷ ಗೌರವಗಳು ಸಿಗುತ್ತವೆ. ಬಂಧು ಮಿತ್ರರ ಬೆಂಬಲ ಹೆಚ್ಚಾಗುತ್ತದೆ. ಕೈಗೊಳ್ಳುವ ಕೆಲಸದಲ್ಲಿ ವಿಳಂಬವಾದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ವ್ಯವಹಾರಗಳಲ್ಲಿ ಅಲ್ಪ ಲಾಭದ ಸೂಚನೆಗಳಿವೆ. ಉದ್ಯೋಗದ ಬಗ್ಗೆ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಂಡು ಲಾಭವನ್ನು ಪಡೆಯುತ್ತೀರಿ.
ತುಲಾ ರಾಶಿ: ಮನೆಯ ಹೊರಗಿನ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ. ಕುಟುಂಬ ಸದಸ್ಯರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ದೂರ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ದೂರದ ಸಂಬಂಧಿಕರಿಂದ ಒಳ್ಳೆಯ ಸುದ್ದಿ ದೊರೆಯುತ್ತದೆ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗಾಗಿ ನೀವು ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ.
ವೃಶ್ಚಿಕ ರಾಶಿ: ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ. ಆರ್ಥಿಕ ಪರಿಸ್ಥಿತಿ ಹೆಚ್ಚು ಉತ್ಸಾಹದಾಯಕವಾಗಿರುತ್ತದೆ. ಕೈಗೆತ್ತಿಕೊಂಡ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ.ಸಹೋದರರೊಂದಿಗೆ ಹಳೆಯ ವಿಷಯಗಳನ್ನು ಚರ್ಚಿಸುತ್ತೀರಿ.ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ.ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ.
ಧನುಸ್ಸು ರಾಶಿ: ಸ್ನೇಹಿತರೊಂದಿಗೆ ವ್ಯಾಪಾರ ವಿಷಯಗಳ ಕುರಿತು ಚರ್ಚಿಸುತ್ತೀರಿ. ಕುಟುಂಬ ಸದಸ್ಯರಿಗೆ ಅಗತ್ಯಕ್ಕೆ ಆರ್ಥಿಕ ಸಹಾಯ ದೊರೆಯುತ್ತದೆ.ದೂರದ ಬಂಧುಗಳಿಂದ ಆಹ್ವಾನಗಳು ದೊರೆಯುತ್ತವೆ.ಕುಟುಂಬದ ವಾತಾವರಣ ಶಾಂತವಾಗಿರುತ್ತದೆ. ಅಧಿಕಾರಿಗಳ ಬೆಂಬಲದಿಂದ ಕೆಲವು ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಲಾಭ ದೊರೆಯುತ್ತದೆ.
ಮಕರ ರಾಶಿ: ಇತರರೊಂದಿಗಿನ ವಿವಾದಗಳನ್ನು ಸ್ನೇಹಿತರ ಸಹಾಯದಿಂದ ರಾಜಿ ಮಾಡಿಕೊಳ್ಳುತ್ತೀರಿ. ದೈವಿಕ ಸೇವೆಗಳಲ್ಲಿ ಪಾಲ್ಗೊಳ್ಳುತ್ತೀರಿ. ವ್ಯಾಪಾರದ ವಿಷಯದಲ್ಲಿ, ಹೊಸ ಅವಕಾಶಗಳನ್ನು ಕೈ ಜಾರದಂತೆ ನೋಡಿಕೊಳ್ಳಬೇಕು. ಹೊಸ ವಸ್ತು ಮತ್ತು ವಾಹನ ಲಾಭಗಳನ್ನು ಪಡೆಯುತ್ತೀರಿ.ಉದ್ಯೋಗದಲ್ಲಿ ಸ್ವಂತ ಆಲೋಚನೆಗಳೊಂದಿಗೆ ಮುನ್ನಡೆಯುವುದು ಒಳ್ಳೆಯದು.
ಕುಂಭ ರಾಶಿ: ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಪ್ರೋತ್ಸಾಹ ದೊರೆಯುತ್ತದೆ.ಮುಖ್ಯ ವ್ಯವಹಾರಗಳಲ್ಲಿ ದಿಢೀರ್ ಯಶಸ್ಸು ಸಿಗುತ್ತದೆ.ಕುಟುಂಬ ಸದಸ್ಯರೊಂದಿಗೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ.ಹೊಸ ಮನೆ ಖರೀದಿಯ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಕೆಲಸಗಳಲ್ಲಿ ದೈಹಿಕ ಶ್ರಮ ಇರುತ್ತದೆ.
ಮೀನ ರಾಶಿ: ಸ್ನೇಹಿತರಿಂದ ವಿವಾದಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ಸಂಗ್ರಹಿಸುತ್ತೀರಿ. ಪ್ರೀತಿಪಾತ್ರರಿಂದ ಅನಿರೀಕ್ಷಿತ ಆಹ್ವಾನಗಳು ದೊರೆಯುತ್ತವೆ. ಮಾರಾಟಗಳು ಲಾಭದಾಯಕವಾಗಿರುತ್ತವೆ .ಆರ್ಥಿಕ ವಾತಾವರಣವು ಅನುಕೂಲಕರವಾಗಿರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆಗೆ ಮನ್ನಣೆ ಸಿಗುತ್ತದೆ.ದೂರದ ಪ್ರಯಾಣಗಳು ಅನುಕೂಲಕರವಾಗಿರುತ್ತವ.