ಯುವಕನ ಕಾಲು ಮುರಿದ ರಕ್ಷಕ್ ಮೇಲೆ ಕಾನೂನು ಕ್ರಮ : ಎಫ್ ಐ ಆರ್ ದಾಖಲು !
ಗ್ರಹಚಾರ ಕೆಟ್ಟಾಗ ಕಷ್ಟ ಹೇಳೋಣ ಅಂದರೆ ಮನೆ ದೇವರು ಕೂಡ ಕಿವುಡನಂತೆ ನಾಟಕ ಮಾಡ್ತಾನೆ ಎನ್ನುವ ಮಾತು ಇದೆ. ಈ ಮಾತುಗಳಿಗೆ ಸದ್ಯ ಜ್ವಲಂತ ಉದಾಹರಣೆ ರಕ್ಷಕ್ ಬುಲೆಟ್. ಹೌದು. ತಮ್ಮ ಮಾತು..ಹಾವ..ಭಾವಗಳಿಂದ ಸದಾ ಚರ್ಚೆಗೀಡಾದವರು ರಕ್ಷಕ್ ಬುಲೆಟ್. ಹೆಚ್ಚೇನಿಲ್ಲ ಇನ್ನೊಂದ್ ಹತ್ತು ಮಾಸ್ ಡೈಲಾಗ್ ಬಿಟ್ರೆ ”ಕರ್ನಾಟಕನೇ ನಂದು” ಅಂತೇಳಿ….
”ಬಿಗ್ ಬಾಸ್” ನ ಹತ್ತನೇ ಮನೆಯಲ್ಲಿ ಹತ್ತಿಪ್ಪತ್ತು ದಿನ ಇದ್ದು ಬಂದ ರಕ್ಷಕ್ ಸದ್ಯ ಕರುನಾಡಿನೆಲ್ಲೆಡೆ ನಗೆಪಾಟಲಿಗೀಡಾಗಿದ್ದಾರೆ. ಪ್ರಥಮ್ ಪ್ರಹಸನದಿಂದ ಅಳಿದು ಉಳಿದಿದ್ದ ಇಮೇಜ್ ನ ತಾವೇ ಡ್ಯಾಮೇಜ್ ಮಾಡ್ಕೊಂಡಿದ್ದಾರೆ.
ಡ್ಯಾಮೇಜ್ ಆದ ಈ ಇಮೇಜ್ ಅದ್ಯಾವ ಕಾಲಕ್ಕೆ ರಕ್ಷಕ್ ಸರಿ ಮಾಡಿಕೊಳ್ತಾರೋ ಗೊತ್ತಿಲ್ಲ, ಆದರೆ..ಇದರ ನಡುವೆ ಸದ್ಯ ರಕ್ಷಕ್ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಬೇಕಾಬಿಟ್ಟಿ ತಮ್ಮ ”ಥಾರ್” ಕಾರು ಚಲಾಯಿಸಿ ಯುವಕನ ಬೈಕ್ ಗೆ ಹೋಗಿ ಗುದ್ದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ರಕ್ಷಕ್ ವಿರುದ್ದ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ”ಶಿಡ್ಲಘಟ್ಟ” ಮೂಲದ ”ವೇಣುಗೋಪಾಲ” ಅವರ ಬೈಕ್ ಗೆ ರಕ್ಷಕ್ ಅವರ ಥಾರ್ ಡಿಕ್ಕಿ ಹೊಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸದ್ಯ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.