ನಿಮ್ಮ ದ್ವೇಷ ನನ್ನೊಂದಿಗೆ, ನನ್ನ ಹೆತ್ತವರನ್ನು ಬಿಟ್ಟುಬಿಡಿ; ಪ್ರಧಾನಿ ಮೋದಿಗೆ ಅರವಿಂದ್ ಕೇಜ್ರಿವಾಲ್ ಸಂದೇಶ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (ಂಡಿviಟಿಜ ಏeರಿಡಿiತಿಚಿಟ) ಅವರ ತಂದೆ-ತಾಯಿಯನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದರು. ಅದಕ್ಕೆ ಸಮಯಾವಕಾಶವನ್ನೂ ಕೇಳಿದ್ದರು. ಆದರೆ, ವಯಸ್ಸಾದ ತಂದೆ-ತಾಯಿಯನ್ನು ಪೊಲೀಸ್ ವಿಚಾರಣೆಗೆ ಒಳಪಡಿಸುವುದರ ಬಗ್ಗೆ ಕೇಜ್ರಿವಾಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ (Pಒ ಓಚಿಡಿeಟಿಜಡಿಚಿ ಒoಜi) ಮನವಿ ಮಾಡಿರುವ ಅರವಿಂದ್ ಕೇಜ್ರಿವಾಲ್, ನಿಮ್ಮ ದ್ವೇಷವೇನಿದ್ದರೂ ನನ್ನ ಮೇಲೆ. ನಮ್ಮಿಬ್ಬರ ನಡುವಿನ ಹೋರಾಟದಲ್ಲಿ ನನ್ನ ಪೋಷಕರನ್ನು ಎಳೆಯಬೇಡಿ ಎಂದಿದ್ದಾರೆ.

ನಿಮ್ಮ ಹೋರಾಟವೇನಿದ್ದರೂ ನನ್ನೊಂದಿಗೆ ಇರುವುದು. ನನ್ನ ತಂದೆ-ತಾಯಿ ಅಸ್ವಸ್ಥರಾಗಿದ್ದು, ಅವರಿಗೆ ಕಿರುಕುಳ ನೀಡಬೇಡಿ. ದೇವರು ಎಲ್ಲವನ್ನೂ ನೋಡುತ್ತಿದ್ದಾನೆ ಎಂದು ಅರವಿಂದ್ ಕೇಜ್ರಿವಾಲ್ ಮೋದಿಗೆ ಮನವಿ ಮಾಡಿದ್ದಾರೆ.

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೇಜ್ರಿವಾಲ್ ಅವರ ಪೋಷಕರನ್ನು ವಿಚಾರಣೆಗೆ ಒಳಪಡಿಸಲು ನರ‍್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಮೋದಿಗೆ ಈ ಸಂದೇಶ ರವಾನಿಸಿದ್ದಾರೆ. ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಎಎಪಿ ಸಂಸದರ ಮೇಲೆ ಹಲ್ಲೆ ನಡೆಸಿದಾಗ ಕೇಜ್ರಿವಾಲ್ ಅವರ ಪೋಷಕರು ಉಪಸ್ಥಿತರಿದ್ದರು. ಈ ಹಿನ್ನೆಲೆಯಲ್ಲಿ ಈ ವಿಚಾರಣೆಯನ್ನು ನಡೆಸಲು ಪೊಲೀಸರು ಮುಂದಾಗಿದ್ದು, ಅವರ ವಿಚಾರಣೆಯನ್ನು ಮುಂದೂಡಲಾಯಿತು.

ವರದಿಗಳ ಪ್ರಕಾರ, ಪೊಲೀಸರು ಮುಂದಿನ ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಪೋಷಕರ ಹೇಳಿಕೆಯನ್ನು ದಾಖಲಿಸಲಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರಿಗೆ ಇದು ನನ್ನ ಮನವಿ. ಪ್ರಧಾನಮಂತ್ರಿಯವರೇ, ನೀವು ನನ್ನನ್ನು ಕೆಳಗೆ ಎಳೆಯಲು ಹಲವಾರು ಪ್ರಯತ್ನಗಳನ್ನು ಮಾಡಿದ್ದೀರಿ. ನೀವು ನನ್ನನ್ನು ಬಂಧಿಸಿದ್ದೀರಿ; ತಿಹಾರ್‌ ಜೈಲಿನಲ್ಲಿ ನನಗೆ ಹಲವಾರು ರೀತಿಯಲ್ಲಿ ಕಿರುಕುಳ ನೀಡಿದ್ದೀರಿ. ಆದರೆ, ನಾನು ಅದ್ಯಾವುದಕ್ಕೂ ಮಣಿಯಲಿಲ್ಲ. ಇಂದು ನೀವು ಎಲ್ಲ ಮಿತಿಗಳನ್ನು ದಾಟಿದ್ದೀರಿ. ನೀನು ನನ್ನನ್ನು ಬಂಧಿಸಿದ ದಿನದಿಂದ ನನ್ನ ತಾಯಿಯು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನನ್ನ ತಂದೆಗೆ ೮೫ ರ‍್ಷ ವಯಸ್ಸಾಗಿದೆ. ಪೊಲೀಸರು ಅವರನ್ನು ವಿಚಾರಣೆ ನಡೆಸುವುದು ಸರಿಯಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

 

ಮೇ ೧೩ರಂದು ಸಿಎಂ ನಿವಾಸಕ್ಕೆ ಹೋದಾಗ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬದ ಸದಸ್ಯರು ಬೆಳಗಿನ ತಿಂಡಿ ಸೇವಿಸುತ್ತಿದ್ದರು ಎಂದು ಸ್ವಾತಿ ಮಲಿವಾಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ಕೇಜ್ರಿವಾಲ್ ಅವರ ಪೋಷಕರಿಗೆ ನಮಸ್ಕರಿಸಿ ನಂತರ ಡ್ರಾಯಿಂಗ್ ರೂಮ್‌ನಲ್ಲಿ ಕೇಜ್ರಿವಾಲ್‌ಗಾಗಿ ಕಾಯುತ್ತಿದ್ದರು. ಆದರೆ ಸಿಎಂ ಸಹಾಯಕ ಬಿಭವ್ ಕುಮಾರ್ ಆಕೆಯ ಹಿಂದೆಯೇ ಬಂದು ಡ್ರಾಯಿಂಗ್ ರೂಮಿನಲ್ಲಿ ಅವಳ ಮೇಲೆ ಹಲ್ಲೆ ಮಾಡಿದನು. ನಂತರ ಆಕೆಗೆ ಹೊಡೆದು, ಒದ್ದು ಹಿಂಸೆ ನೀಡಿದನು ಎಂದು ಆಕೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ ವೇಳೆ ಮನೆಯಲ್ಲಿದ್ದ ಕೇಜ್ರಿವಾಲ್ ಅವರ ತಂದೆ-ತಾಯಿಯ ವಿಚಾರಣೆ ನಡೆಸಲು ಪೊಲೀಸರು ನರ‍್ಧರಿಸಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top