ಬಿಜೆಪಿ ಮುಖಂಡರಾದ ಮಾಜಿ ಉಪಮೇಯರ್ ಎಲ್ ಶ್ರೀನಿವಾಸ್, ಪಾಲಿಕೆ ಮಾಜಿ ಸದಸ್ಯರಾದ ಶೋಭಾ ಅಂಜಿನಪ್ಪ, ಎಚ್ ನಾರಾಯಣ್, ಎಚ್ ಸುರೇಶ್, ವೆಂಕಟಸ್ವಾಮಿ ನಾಯ್ಡು, ಎಲ್ ಗೋವಿಂದರಾಜು, ಬಾಲಕೃಷ್ಣ, ಸುಗುಣ ಬಾಲಕೃಷ್ಣ, ನರಸಿಂಹ ನಾಯಕ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಂಜಿನಪ್ಪ, ಜೆಡಿಎಸ್ ಮುಖಂಡ ಪ್ರಸಾದ್ ಬಾಬು (ಕಬಡ್ಡಿ ಬಾಬು) ಚಿತ್ರ ನಟ ರವಿಕಿರಣ್, ಅಕ್ಬರ್ ಅಲಿಖಾನ್ ಮತ್ತಿತರ ಬಿಜೆಪಿ ಹಾಗೂ ಜೆ ಡಿ ಎಸ್ ಮುಖಂಡರು ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಚಿವ ರಾಮಲಿಂಗಾರೆಡ್ಡಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾರ್ಯಧ್ಯಕ್ಷ ಚಂದ್ರಪ್ಪ, ಎಂಎಲ್ಸಿ ಎಸ್ ರವಿ, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಮಾಜಿ ಮೇಯರ್ ಜೆ ಹುಚ್ಚಪ್ಪ ಉಪಸ್ಥಿತರಿದ್ದರು.




Facebook
Twitter
LinkedIn
WhatsApp
Telegram
Email
Tumblr