ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

Kannada Nadu
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.

ವಿಧಾನಪರಿಷತ್ ನಲ್ಲಿ ನಿಯಮ 68ರ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿ-ಜೆಡಿಎಸ್ ಸದಸ್ಯರು ರಾಜ್ಯದಲ್ಲಿ ಅಪರಾಧಿಗಳಿಗೆ ಪೊಲೀಸರು, ಕಾನೂನಿನ ಭಯ ಇಲ್ಲದ ವಾತಾವರಣವಿದೆ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪೊಲೀಸರು ಅಸಹಾಯಕರಾಗಿದ್ದಾರೆ. ನಾಗರೀಕರಿಗೆ ಅಭದ್ರತೆ ಕಾಡುತ್ತಿದೆ ಎಂಬುದು ಸೇರಿದೆ ಅನೇಕ ಪ್ರಕರಣಗಳನ್ನು ಪ್ರಸ್ತಾಪಿಸಿ ಸರ್ಕಾರ ಸಮರ್ಪಕ ಉತ್ತರ ನೀಡಬೇಕೆಂದು ಆಗ್ರಹಿಸಿದರು.

ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೋಮವಾರ ಒಂದೂವರೆ ಗಂಟೆಗೂ ಹೆಚ್ಚು ಕಾಲ ಉತ್ತರಿಸಿದರು. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎಂದು ಸಮರ್ಥಿಸಿಕೊಂಡರು.ಚರ್ಚೆ ವೇಳೆ ಪರಮೇಶ್ವರ್ ಅವರು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳ ಅಪರಾಧ ಅಂಕಿಅಂಶಗಳನ್ನು ತಿಳಿಸಿ, 1990 ರಿಂದ ಗೃಹ ಸಚಿವರ ಆಳ್ವಿಕೆಯಲ್ಲಿ ನಡೆದ ಅಪರಾಧಗಳನ್ನು ಪಟ್ಟಿ ಮಾಡಿದರು.ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳಿಂದಾಗಿ ಕರ್ನಾಟಕದಲ್ಲಿ ಅಪರಾಧ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

2021ರಲ್ಲಿ 1,341 ಕೊಲೆ ಪ್ರಕರಣ, 556 ಅತ್ಯಾಚಾರ ಪ್ರಕರಣ, 3,977 ಗಲಭೆ ಪ್ರಕರಣ, 2022ರಲ್ಲಿ 1,368 ಕೊಲೆ ಪ್ರಕರಣ, 537 ಅತ್ಯಾಚಾರ ಪ್ರಕರಣ, 3,928 ಗಲಭೆ ಪ್ರಕರಣಗಳು ನಡೆದಿವೆ. 2023ರಲ್ಲಿ 1,296 ಕೊಲೆ ಪ್ರಕರಣ, 607 ಅತ್ಯಾಚಾರ ಪ್ರಕರಣ, 3,903 ಗಲಭೆ ಪ್ರಕರಣ, 2024ರಲ್ಲಿ 1,208 ಕೊಲೆ ಪ್ರಕರಣ, 629 ಅತ್ಯಾಚಾರ ಪ್ರಕರಣ, 3,447 ಗಲಭೆ ಪ್ರಕರಣಗಳು ನಡೆದಿವೆ. ಹಿಂದೂಧಾರ್ಮಿಕ ಆಚರಣೆಗಳ ವೇಳೆ 2022ರಲ್ಲಿ 9 ಗಲಭೆಗಳು ನಡೆದಿದ್ದು, 4 ಪ್ರಕರಣಗಳಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದೆ. 2023ರಲ್ಲಿ 2 ಗಲಭೆಗಳು, 2024ರಲ್ಲಿ 4 ಗಲಭೆಗಳು ನಡೆದಿವೆ. ಹಿಂದೂ ಧಾರ್ಮಿಕ ಆಚರಣೆಗಳ ವೇಳೆ ಐದು ವರ್ಷದಲ್ಲಿ 15 ಗಲಭೆ ಪ್ರಕರಣಗಳು ನಡೆದಿವೆ ಎಂದು ಹೇಳಿದರು.

ಮೈಕ್ರೋ ಪೈನಾನ್ಸ್‌ ಗೆ ಸಂಬಂಧಿಸಿ 2023ರಲ್ಲಿ 6 ಪ್ರಕರಣ ದಾಖಲಾಗಿದ್ದು, 5 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 2024ರಲ್ಲಿ 22 ಪ್ರಕರಣ ದಾಖಲಾಗಿದ್ದು, 7 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 2025ರಲ್ಲಿ 90 ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗಿದ್ದು, 15 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲಿನ ದಾಳಿ ಘಟನೆ ನಡೆದಾಗ ಠಾಣೆಯಲ್ಲಿ ಕೆಲವೇ ಪೊಲೀಸ್ ಸಿಬ್ಬಂದಿ ಇದ್ದರು, ಆದರೆ ಶೀಘ್ರದಲ್ಲೇ ಪೊಲೀಸರು ಪಡೆಗಳನ್ನು ಸಜ್ಜುಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು ಎಂದು ಹೇಳಿದರು.ಉದಯಗಿರಿ ಠಾಣೆಯ ವ್ಯಾಪ್ತಿಯಲ್ಲಿ 4.5 ಲಕ್ಷ ಜನಸಂಖ್ಯೆಯಿದ್ದು, ಇನ್ನೂ ಒಂದು ಪೊಲೀಸ್ ಠಾಣೆಯನ್ನು ರಚಿಸುವ ಪ್ರಸ್ತಾಪವಿದೆ ಎಂದು ಹೇಳಿದರು.

ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಹಲವು ಸೂಚನೆಗಳನ್ನು ನೀಡಲಾಗಿದೆ. ವಿದೇಶಿಯರ ಆಗಮನದ ಬಗ್ಗೆ ಆನ್‍ಲೈನ್‍ನಲ್ಲಿ ಫಾರಂ ಸಿ ಭರ್ತಿ, ಸುರಕ್ಷತೆ ದೃಷ್ಟಿಯಿಂದ ಗಂಗಾವತಿ, ಸಣಾಪುರ ಸೇರಿ ಪ್ರವಾಸಿ ತಾಣಗಳ ಸುತ್ತಮುತ್ತ ನಿರಂತರ ವಾಹನ ತಪಾಸಣೆ, ಭದ್ರತೆ ಉಸ್ತುವಾರಿಗಾಗಿ ಇನ್ಸ್‌ ಪೆಕ್ಟರ್ ದರ್ಜೆ ಅಧಿಕಾರಿಯನ್ನು ರಾತ್ರಿ ಗಸ್ತು ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.ಇತ್ತೀಚಿನ ವರ್ಷಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ವಾಗುತ್ತಿವೆ. 2022ರಲ್ಲಿ 10 ಸಾವಿರ ಕೇಸ್ ದಾಖಲಾದರೆ, 2024ರಲ್ಲಿ ವರ್ಷ 22 ಸಾವಿರ ಸೈಬರ್ ಪ್ರಕರಣಗಳಿಗೆ ಏರಿಕೆಯಾಗಿದೆ. ನಗರದಲ್ಲಿ ನಡೆಯುವ ಅಪರಾಧಗಳ ಪೈಕಿ ಶೇ.30ರಷ್ಟು ಸೈಬರ್ ಪ್ರಕರಣಗಳೇ ಆಗಿವೆ. ವೈಟ್‍ಫೀಲ್ಡ್ ಉಪವಿಭಾಗದಲ್ಲಿ ಶೇ.30ರಷ್ಟು ಸೈಬರ್ ವಂಚನೆ ಪ್ರಕರಣ ದಾಖಲಾಗಿವೆ ಎಂದು ಹೇಳಿದರು.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸೈಬರ್ ವಂಚನೆ ಜಾಲ ಅಧಿಕವಾಗುತ್ತಿವೆ. ಇದನ್ನು ತಹಬದಿ ತರಲು ದೇಶದಲ್ಲಿ ಮೊದಲ ಬಾರಿಗೆ ಸೈಬರ್ ವಿಭಾಗ ಸ್ಥಾಪಿಸಿ, ಡಿಜಿಪಿ ಮಟ್ಟದ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಪ್ರತಿಯೊಬ್ಬ ಪೆÇಲೀಸ್ ಕಾನ್ಸ್‍ಟೇಬಲ್‍ಗೂ ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ತಿಳಿಯಬೇಕು.ಹೀಗಾಗಿ, ಈಗಾಗಲೇ 40 ಸಾವಿರ ಮಂದಿಗೆ ತರಬೇತಿ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಪ್ರಸಾರ ಹಾಗೂ ಪ್ರಚೋದಕಕಾರಿ ವಿಡಿಯೋ ಪೆÇೀಸ್ಟ್ ತಡೆಯಲು ಪ್ರತಿ ಠಾಣೆಯಲ್ಲಿಯೂ ಸೋಷಿಯಲ್ ಮೀಡಿಯಾ ವಿಂಗ್ ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದೇ ವೇಳೆ ಪರಮೇಶ್ವರ್ ದುರ್ಬಲ ಗೃಹ ಸಚಿವರು ಎಂದು ಪ್ರತಿಪಕ್ಷಗಳು ಕಿಡಿಕಾರಿದ ಹಿನ್ನೆಲೆಯಲ್ಲಿ ನಾನು ಲಾಠಿ ಹಿಡಿದು ಸುತ್ತು ಹಾಕಬೇಕೇ? ಎಂದು ಪ್ರಶ್ನಿಸಿದರು.ಬಳಿಕ ಲವ್ ಜಿಹಾದ್ ಪ್ರಕರಣಗಳ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ಬಿಜೆಪಿ ಎಂಎಲ್’ಸಿ ಸಿಟಿ ರವಿ ಅವರು ಒತ್ತಾಯಿಸಿದರು.ಸರ್ಕಾರ ಆರೋಪಿಗಳ ಹೆಸರು, ಸಂತ್ರಸ್ತರು, ಕುಟುಂಬದ ಹಿನ್ನೆಲೆ ಮತ್ತು ಆರೋಪಿಗಳ ಉದ್ದೇಶದ ವಿವರಗಳೊಂದಿಗೆ ಶ್ವೇತಪತ್ರ ಹೊರಡಿಸಬೇಕು. ಇಲ್ಲದಿದ್ದರೆ, ಅಂತಹ ಘಟನೆಗಳನ್ನು ತಡೆಯಲು ಸಾಧ್ಯವಿಲ್ಲಎಂದು ಹೇಳಿದರು.

ಇದನ್ನು ತಡೆಯಲು ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂದು ಬಿಜೆಪಿ ಎಂಎಲ್ಸಿ ಭಾರತಿ ಶೆಟ್ಟಿ ಹೇಳಿದರು.ಇದೇ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್ಸಿ ಸಿ.ಟಿ. ರವಿ ಅವರನ್ನು ಕೆಟ್ಟದಾಗಿ ನಡೆಸಿಕೊಂಡ ಪೊಲೀಸ್ ಅಧಿಕಾರಿಗಳ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ಗೃಹ ಸಚಿವರು ಸದನಕ್ಕೆ ತಿಳಿಸಬೇಕೆಂದು ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದರು.

ತಮ್ಮ ಪ್ರಕರಣವನ್ನು ವೈಯಕ್ತಿಕ ಪ್ರಕರಣವೆಂದು ಪರಿಗಣಿಸಬಾರದು ಎಂದು ರವಿ ಹೇಳಿದರು. ಇದು ನನ್ನ ಮೇಲಿನ ದಾಳಿಯಲ್ಲ, ಇದು ಕಾರ್ಯಾಂಗದಿಂದ ಶಾಸಕಾಂಗದ ಶೋಷಣೆಯ ಪ್ರಕರಣವಾಗಿದೆ ಎಂದು ಹೇಳಿದರು.ಬಳಿಕ ಬೆಂಗಳೂರಿನಲ್ಲಿ ಪೊಲೀಸ್ ಸಹಾಯಕ ಆಯುಕ್ತರ ಹುದ್ದೆಗೆ 2 ಕೋಟಿ ರೂ. ಲಂಚ ನೀಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ ಎಂದು ಬಿಜೆಪಿ ಎಂಎಲ್‌ಸಿ ಎ. ವಿಶ್ವನಾಥ್ ಹೇಳಿದರು. ಈ ಹಣವನ್ನು ಹೇಗೆ ವಸೂಲಿ ಮಾಡುತ್ತಾರೆ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ಅದರತ್ತ ಗಮನಹರಿಸಲು ಸಾಧ್ಯವಾಗದ ಕಾರಣ ಗುಪ್ತಚರ ವಿಭಾಗವನ್ನು ಗೃಹ ಸಚಿವರ ವ್ಯಾಪ್ತಿಗೆ ತರಬೇಕು ಎಂದು ಹೇಳಿದರು.ಬಳಿಕ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ, 2025 ಅನ್ನು ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";