ಕುಷ್ಟಗಿ,:- ತಾಲೂಕಿನ ಲಿಂಗದಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಮ್ನಿನಾಳ ಗ್ರಾಮದಲ್ಲಿ ಆರೋಗ್ಯ ಅಬೃತ ಅಭಿಯಾನ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಲಿಂಗದಳ್ಳಿ, ಹಾಗೂ ಕೆ.ಎಚ್.ಪಿ.ಟಿ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿಗಳಾದ ಆನಂದ ಅಗಸಿಮುಂದಿನ, ಸಿ.ಎಚ್.ಓ ಸೌಭಾಗ್ಯ, ಶ್ವೇತ, ಶಿಕ್ಷಕಿಯರಾದ ವಿಜಯಲಕ್ಷ್ಮಿ, ಕೆ.ಎಚ್.ಪಿ.ಟಿ ತಾಲೂಕು ಸಂಯೋಜಕ ಲಕ್ಷ್ಮಣ್, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಸಹಾಯಕಿಯರು, ಮಹಿಳಾ ಪ್ರತಿನಿಧಿಗಳು, ಊರಿನ ಪ್ರಮುಖ .ಮುಖಂಡರು ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತಪಾಸಣೆಯಲ್ಲಿ ಭಾಗವಹಿಸಿದ ಗ್ರಾಮಸ್ಥರಿಗೆ ರಕ್ತ ತಪಾಸಣೆ, ಬಿ.ಪಿ, ಸುಗರ್ ಚಕ್ ಮಾಡಿ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.