ಕೊಪ್ಪಳ : ಸ. ಕಿ. ಪ್ರಾಥಮಿಕ ಶಾಲೆ ಸಿದ್ದಲಿಂಗ ನಗರ ಕಾರಟಗಿ ಶಾಲಾ ಪ್ರಾರಂಭೋತ್ಸವ ವಿಶೇಷ ಹಾಗೂ ವಿಶಿಷ್ಟ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು.ಇದೆ ಸಂದರ್ಭದಲ್ಲಿ ಶ್ರೀ ಹನುಮಂತಪ್ಪ ವಾಲಿಕಾರ ಸಾ: ಪನ್ನಾಪುರ ರವರು ಶಾಲಾ ಮಕ್ಕಳಿಗೆ ಗುರುತಿನ ಚೀಟಿ, ಬೆಲ್ಟ್, ಟೈ, ಮಾಸ್ಕ್, ಉಪಹಾರ ಉಪ್ಪಿಟ್ಟು, ಕೇಸರಿ ಬಾತ್ ಹಾಗೂ ಈ ಭಾಗದ ಅತ್ಯಂತ ಪ್ರಾಮಾಣಿಕವಾಗಿ ಕೋವಿಡ್ ವಾರಿಯರ್ ಅಮೋಘ ಸೇವೆಯನ್ನು ಗುರುತಿಸಿ ಶ್ರೀ ಮತಿ ಸಾವಿತ್ರಿ ಆರೋಗ್ಯ ಕಾರ್ಯಕರ್ತರು, ಶ್ರೀ ಮತಿ ಮಂಜುಳಾ ಆಶಾ ಕಾರ್ಯಕರ್ತೆಯರು,
ಶ್ರೀ ಮತಿ ರಾಜೇಶ್ವರಿ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಿದರು.ಶಾಲಾ ಪರವಾಗಿ ದಾನಿಗಳಾದ ಶ್ರೀ ಹನುಮಂತಪ್ಪ ವಾಲಿಕಾರ ವರನ್ನು ಸನ್ಮಾನಿಸಿ ಗೌರವಿಸಲಾಯಿತು.ಶ್ರೀ ತಿಮ್ಮಣ್ಣ ನಾಯಕ ಸಿ ಆರ್ ಪಿ ರವರು ಕಾರ್ಯಕ್ರಮ ಕುರಿತು ಸಮುದಾಯದ ಸಹಭಾಗಿತ್ವ ಮತ್ತು ಸಹಕಾರ ದೊಂದಿಗೆ ಶಾಲಾ ಅಭಿವೃದ್ದಿ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ನಿಮ್ಮಂತಹ ಸಹೃದಯಿ ದಾನಿಗಳಿಂದ ಸಾಧ್ಯ ಎಂದು ಹೇಳಿದರು.
ಶ್ರೀ ಹನುಮಂತಪ್ಪ ವಾಲಿಕಾರ ಸರ್ಕಾರದ ಶಾಲೆಗಳ ಸಭಲಿಕರಣ ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಹಾಗೂ ಜವಾಬ್ದಾರಿ ಕೂಡ ಎಂದು ಹೇಳಿದರು.ಶ್ರೀ ರಾಮರಾವ್ ಮಾತನಾಡಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಬಾರದು ಎಂದು ಹೇಳಿದರು.ಶ್ರೀ ಶರಣಪ್ಪ ಪರಕಿ ಮಾತನಾಡಿ ದಾನಿಗಳ ನೆರವಿನಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.ನಗರದ ಪ್ರಮುಖರಾದ ಶ್ರೀ ಬಸವರಾಜ ಪಗಡದಿನ್ನಿ ,ಮಲ್ಲಪ್ಪ ಕುಂಬಾರ, ಭಾಗ್ಯಲಕ್ಷ್ಮಿ, ಪೋಷಕರು ಹಾಗೂ ಪಾಲಕರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ತೋಟಯ್ಯ ಅಂಗಡಿ ನಿರ್ವಹಿಸಿದರು.ವಂದನಾರ್ಪಣೆಯನ್ನು ಹೇಮಂತ ಕುಮಾರ್ ನೆರವೇರಿಸಿದರು.