ಕೊಪ್ಪಳ,: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಗವಿಮಠದ ಶ್ರೀಗವಿಸಿದ್ದೇಶ್ವರ ಮಹಾರಥೋತ್ಸವ
ಅತ್ಯಂತ ಸರಳವಾಗಿ ಜರುಗಿತು.

ಕೋವಿಡ್ ಹಾಗೂ ಓಮಿಕ್ರಾನ್ ಹರಡುವಿಕೆಯ ಭೀತಿ ಹಿನ್ನೆಲೆ ಕೊಪ್ಪಳದ ಗವಿಮಠ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹಾರಥೋತ್ಸವ ಬುಧವಾರ ಬೆಳಗಿನ ಜಾವ ಸರಳವಾಗಿ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಮಹಾರಥೋತ್ಸವನ್ನು ನೆರವೇರಿಸಲಾಯಿತು. ಕೋವಿಡ್ ನಿಯಮಗಳ ಪ್ರಕಾರ ಅತ್ಯಂತ ಸರಳವಾಗಿ ಮಹಾರಥೋತ್ಸವ ಆಚರಣೆ ಮಾಡಲಾಗಿದೆ. ಕೊಪ್ಪಳ ಶ್ರೀಗವಿಮಠದ ಇತಿಹಾಸದಲ್ಲಿಯೇ ಸರಳವಾಗಿ ನಡೆದ ರಥೋತ್ಸವ ಇದಾಗಿದ್ದು, ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ರಥೋತ್ಸವ ನೆರವೇರಿಸಲಾಯಿತು.
