ಗಂಗಾವತಿ,ಫೆ,,25 : ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಶಾಸಕ ಪರಣ್ಣ ಮುನವಳ್ಳಿ ಉದ್ಘಾಟಿಸಿದರು. ಗಂಗಾವತಿ ಪಟ್ಟಣದ ಶ್ರೀ ಚನ್ನಬಸವ ಸ್ವಾಮಿ ಕಲಾ ಮಂದಿರದಲ್ಲಿ ನಡೆದ ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶಾಸಕ ರಾದಿಯಾಗಿ ಗಣ್ಯರು ಅಶೋಕ ಕುಮಾರ್ ರಾಯಕರ್ ರಚಿತ ಅಂಜನಾದ್ರಿ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಅಶೋಕ ಕುಮಾರ್ ರಾಯ್ಕರ್, ಹಾಸ್ಯ ಸಾಹಿತಿ ಬೀ. ಚಿ ಪ್ರಾಣೇಶ್, ಸಮಾಜ ಸೇವಕ ದುರ್ಗಾ ದಾಸ್ ಬಂಡಾರ್ಕರ ಇನ್ನಿತರರು ಇದ್ದರು.