ಅಸ್ಪೃಶ್ಯತಾ ಆಚರಣೆಯ ನಿವಾರಣೆಯ ಬಗ್ಗೆ ತಿಳುವಳಿಕೆ ಹಾಗೂ ಅರಿವು

ಕುಷ್ಟಗಿ:- ತಾಲೂಕ ಆಡಳಿತ,ತಾಲೂಕ ಪಂಚಾಯತ್,ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಕುಷ್ಟಗಿ, ಇವರ ಸಹಯೋಗದಲ್ಲಿ ಇಂದು ಮಾಲಗಿತ್ತಿ ಗ್ರಾಮದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ(ದೌರ್ಜನ್ಯ ಪ್ರತಿಬಂಧ) ಅಧಿನಿಯಮ -1989ರಡಿ ಹಾಗೂ ತಿದ್ದುಪಡಿ ಅಧಿನಿಯಮ, 2015 ಮತ್ತು ತಿದ್ದುಪಡಿ ನಿಯಮಗಳು,2016ರ ಪ್ರಕಾರ ಅಸ್ಪೃಶ್ಯತಾ ನಿವಾರಣೆ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಮೂಲಕ ಗ್ರಾಮಸ್ತರಿಗೆ ಅಸ್ಪೃಶ್ಯತಾ ಆಚರಣೆಯ ನಿವಾರಣೆಯ ಬಗ್ಗೆ ತಿಳುವಳಿಕೆ ಹಾಗೂ ಅರಿವು ಮೂಡಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ಮಾನ್ಯ ತಹಶೀಲ್ದಾರರು,ತಾಲೂಕ ಕಾರ್ಯನಿರ್ವಾಹಣಾಧಿಕಾರಿಗಳು,ಆರಕ್ಷಕ ವೃತ್ತ ನಿರೀಕ್ಷಕರು,ಕ್ಷೇತ್ರ ಶಿಕ್ಷಣಾಧಿಕಾರಿಗಳು,ಸಮಾಜ ಕಲ್ಯಾಣಾಧಿಕಾರಿ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.

Leave a Comment

Your email address will not be published. Required fields are marked *

Translate »
Scroll to Top