ಖೋಖೋ ವಿಶ್ವಕಪ್; ಎಂ.ಕೆ.ಗೌತಮ್, ಚೈತ್ರಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

Kannada Nadu
ಖೋಖೋ ವಿಶ್ವಕಪ್; ಎಂ.ಕೆ.ಗೌತಮ್, ಚೈತ್ರಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

ನವದೆಹಲಿ: 2025ರ ಪುರುಷರ ಹಾಗೂ ಮಹಿಳಾ ಖೋ-ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡವು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ ಕರ್ನಾಟಕದ ಎಂ.ಕೆ.ಗೌತಮ್ ಹಾಗೂ ಚೈತ್ರಾ ಅವರನ್ನು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸನ್ಮಾನಿಸಿ ಗೌರವಿಸಿದರು.

ನವದೆಹಲಿಯ ಬೃಹತ್ ಕೈಗಾರಿಕೆ ಸಚಿವಾಲಯಕ್ಕೆ ಆಟಗಾರರಾದ ಎಂ.ಕೆ.ಗೌತಮ್ ಹಾಗೂ ಚೈತ್ರಾಮತ್ತವರ ಕೋಚ್ಗಳಾದ ಸುಮಿತ್ ಭಾಟಿಯಾ ಹಾಗೂ ತಂಡದ ಮ್ಯಾನೇಜರ್ ರಾಜಕುಮಾರಿ ಅವರನ್ನು ಬರಮಾಡಿಕೊಂಡ ಸಚಿವರುಎಲ್ಲರನ್ನೂ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಗೌತಮ್ಚಿತ್ರಾ ಇಬ್ಬರಿಗೂ ಶುಭ ಕೋರಿದ ಸಚಿವರುಭಾರತದ ಪುರುಷರು ಮತ್ತು ಮಹಿಳೆಯರ ಖೋಖೋ ವಿಶ್ವಕಪ್‌ ತಂಡದಲ್ಲಿ ಅಮೋಘ ಆಟವನ್ನಾಡಿ ಭಾರತವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಿಮ್ಮಿಬ್ಬರಿಗೂ ನನ್ನ ಅಭಿನಂದನೆಗಳು. ಕರ್ನಾಟಕದ ಗರಿಮೆಯನ್ನು ನೀವು ಹೆಚ್ಚಿಸಿದ್ದೀರಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಿ ಎಂದು ಶುಭ ಹಾರೈಸಿದರು ಸಚಿವರು.ದೇಶೀಯ ಕ್ರೀಡೆ ಖೋಖೋದಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿರುವುದಕ್ಕೆ ನಿಮ್ಮ ಜೊತೆ  ತಂಡಸ್ಫೂರ್ತಿಯಿಂದ ಆಟವಾಡಿದ ಇತರೆ ಎಲ್ಲಾ ಆಟಗಾರರಿಗೂನಿಮ್ಮ ತರಬೇತುದಾರರಿಗೆ ಕೂಡ ನನ್ನ ಅಭಿನಂದನೆಗಳು ಎಂದು ಸಚಿವರು ಹೇಳಿದರು.

ಕನ್ನಡ ನೆಲದ ಗ್ರಾಮೀಣ ಮಕ್ಕಳಿಬ್ಬರೂ ಇಂದು ಭಾರತಾಂಬೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಮಾತ್ರವಲ್ಲದೆಕನ್ನಡಮ್ಮನ ಕೀರ್ತಿ ಕಿರೀಟಕ್ಕೆ ಮತ್ತಷ್ಟು ಗರಿಗಳನ್ನು ಪೇರಿಸಿ ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ. ಇಬ್ಬರಿಗೂ ಶುಭವಾಗಲಿಭವಿಷ್ಯದಲ್ಲಿ ಇಂತಹ ಅನೇಕ ಉನ್ನತ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮಕ್ಕಳಿಗೆ ಇವರ ಸಾಧನೆ ಸದಾ ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ ಹೇಳಿದರು.

ಎಂ.ಕೆ.ಗೌತಮ್ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಮಲ್ಲೀಗೆರೆ ಗ್ರಾಮದವರು ಹಾಗೂ ಚೈತ್ರಾ ಅವರು ಚಾಮರಾಜ ನಗರ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದವರು. ಗ್ರಾಮೀಣ ಮಕ್ಕಳು ಹೆಚ್ಚು ಪ್ರಮಾಣದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಬರಬೇಕು. ನಮ್ಮಿಂದ ಸಾಧ್ಯ ಆಗುವಷ್ಟು ಪ್ರೋತ್ಸಾಹ ನೀಡುತ್ತೇವೆ. ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕ್ರೀಡೆಗೆ ಬಹಳಷ್ಟು ಬೆಂಬಲಪ್ರೋತ್ಸಾಹ ನೀಡುತ್ತಿದೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗೌತಮ್ಚೈತ್ರಾ ಇಬ್ಬರೂಕರ್ನಾಟಕದವರೇ ಆಗಿರುವ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಕಚೇರಿಗೆ ಬರಮಾಡಿಕೊಂಡು ನಮ್ಮಿಬ್ಬರನ್ನು ಗೌರವಿಸಿದ್ದು ಬಹಳ ಸಂತೋಷ ಉಂಟು ಮಾಡಿದೆ. ನಮ್ಮ ಬದುಕಿನಲ್ಲಿ ಇದು ಅವಿಸ್ಮರಣೀಯ ಘಟನೆ ಆಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";