ಟ್ರೋಫಿ ಕನಸಿನೊಂದಿಗೆ ಬಂದು ಕಣ್ಣೀರಲ್ಲೇ ಕಳೆದ ಕಾವ್ಯ ಮಾರನ್

IPL 2024: ಐಪಿಎಲ್ ಸೀಸನ್ 16 ರಲ್ಲಿ ಕೊನೆಯ ಸ್ಥಾನ ಪಡೆದಿದ್ದ ಸನ್ರೈರ‍್ಸ್ ಹೈದರಾಬಾದ್ ತಂಡವು ಈ ಬಾರಿ ಭರ್ಜರಿ ಪ್ರರ್ದಶನ ನೀಡಿದೆ. ‍ಟೂರ್ನಿಯ ಆರಂಭದಿಂದಲೇ ತನ್ನ ಬ್ಯಾಟಿಂಗ್ ಶಕ್ತಿ ‍ಪ್ರರ್ದಶಿಸಿದ್ದ ಎಸ್ಆರ್ಹೆಚ್ ನಿರೀಕ್ಷೆಯಂತೆ ಪ್ಯಾಟ್ ಕಮಿನ್ಸ್ ಮುಂದಾಳತ್ವದಲ್ಲಿ ಫೈನಲ್ಗೆ ಪ್ರವೇಶಿಸಿತ್ತು.

ಅಲ್ಲದೆ ಫೈನಲ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದರಿಂದ ಬಹುತೇಕರು ಕಪ್ ಸನ್ರೈರ‍್ಸ್ ಹೈದರಾಬಾದ್ ತಂಡದ ಪಾಲಾಗಲಿದೆ ಎಂದು ಭಾವಿಸಿದ್ದರು. ಇದೇ ವಿಶ್ವಾಸದಲ್ಲಿ ಎಸ್ಆರ್ಹೆಚ್ ತಂಡ ಮಾಲಕಿ ಕಾವ್ಯ ಮಾರನ್ ಕೂಡ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.

ಆದರೆ ಪಂದ್ಯದ ಆರಂಭದಲ್ಲೇ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು. ಮೊದಲ ಓವರ್ನಲ್ಲೇ ಅಭಿಷೇಕ್ ರ‍್ಮಾ ವಿಕೆಟ್ ಕಳೆದುಕೊಂಡು ಸನ್ರೈರ‍್ಸ್ ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ಸಂಕಷ್ಟದಿಂದ ಪಾರಾಗುವ ಮುನ್ನವೇ ಕೆಕೆಆರ್ ಬೌಲರ್ಗಳು ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಅತ್ತ ಫೈನಲ್ನಲ್ಲಿ ತಮ್ಮ ತಂಡದಿಂದ ರ‍್ಜರಿ ಪ್ರರ‍್ಶನ ನಿರೀಕ್ಷಿಸಿದ್ದ ಕಾವ್ಯ ಮಾರನ್ ಕೂಡ ಹತಾಶಾಭಾವದೊಂದಿಗೆ ಕಾಣಿಸಿಕೊಂಡರು.

ಪಂದ್ಯದ ಆರಂಭದಲ್ಲಿ ಹತಾಶರಾದ ಕಾವ್ಯ ಮಾರನ್ ಅವರ ನಿರೀಕ್ಷೆಗಳು ಒಂದೊಂದೇ ಓವರ್ಗಳ ಮುಕ್ತಾಯದೊಂದಿಗೆ ಹುಸಿಯಾಗುತ್ತಿತ್ತು. ಇದಾಗ್ಯೂ ತಮ್ಮ ನೋವನ್ನೆಲ್ಲಾ ಎಸ್ಆರ್ಹೆಚ್ ಮಾಲಕಿ ಅದುಮಿಟ್ಟುಕೊಂಡಿದ್ದರು. ಯಾವಾಗ ಎಸ್ಆರ್ಹೆಚ್ ತಂಡ ೧೧೩ ರನ್ಗಳಿಗೆ ಆಲೌಟ್ ಆಯಿತೋ, ಆಗಲೇ ಕಾವ್ಯ ಮಾರನ್ ಕೂಡ ಗ್ಯಾಲರಿಯಲ್ಲಿ ಕೂಡ ಮ್ಯಾಚ್ ಮುಗಿದೇ ಹೋಯ್ತು ಎಂಬಂತೆ ಮುಖಭಾವ ‍ಪ್ರರ್ದಶಿಸಿದ್ದರು.

ಇನ್ನು ಎಸ್ಆರ್ಹೆಚ್ ನೀಡಿದ ೧೧೪ ರನ್ಗಳ ಗುರಿಯನ್ನು ಕೊಲ್ಕತ್ತಾ ನೈಟ್ ರೈರ‍್ಸ್ ತಂಡವು ಕೇವಲ ೧೦.೩ ಓವರ್ಗಳಲ್ಲಿ ಚೇಸ್ ಮಾಡಿತು. ಅಲ್ಲದೆ ೮ ವಿಕೆಟ್ಗಳ ಜಯದೊಂದಿಗೆ ಮೈದಾನದಲ್ಲಿ ಸಂಭ್ರಮಿಸುತ್ತಿದ್ದರೆ, ಅತ್ತ ಕಾವ್ಯ ಮಾರನ್ ಕಣ್ಣೀರು ಹಾಕಲಾರಂಭಿಸಿದರು.

 

ಆದರೆ ಇತ್ತ ಕ್ಯಾಮೆರಾಮ್ಯಾನ್ ತನ್ನತ್ತ ಕ್ಯಾಮೆರಾ ತಿರುಗಿಸಿದ್ದಾರೆ ಎಂಬುದು ಗೊತ್ತಾಗುತ್ತಿದಂತೆ ಹಿಂತಿರುಗಿ ನಿಂತು ಅಳಲಾರಂಭಿಸಿದರು. ಇದೀಗ ಕಾವ್ಯ ಮಾರನ್ ಅವರ ಭಾವನಾತ್ಮಕ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ನೋವಿನ ನಡುವೆಯು ಸನ್ರೈರ‍್ಸ್ ಹೈದರಾಬಾದ್ ತಂಡದ ಮಾಲಕಿಗೆ ಎಸ್ಆರ್ಹೆಚ್ ಅಭಿಮಾನಿಗಳು ಸಮಾಧಾನ ಮಾಡಿದ್ದು, ಮುಂದಿನ ಸಲ ಇನ್ನೂ ಉತ್ತಮ ತಂಡ ಕಟ್ಟಬೇಕೆಂದು ದರ‍್ಯ ತುಂಬಿದ್ದಾರೆ. ಅಲ್ಲದೆ ಐಪಿಎಲ್ ೨೦೨೫ ರಲ್ಲಿ ಆರೆಂಜ್ ರ‍್ಮಿ ಟ್ರೋಫಿಯೊಂದಿಗೆ ಸಂಭ್ರಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top