ಶ್ರೀ ಮಂಜುನಾಥ ಶ್ರೀ ಶಕ್ತಿ ಸಂಘದಿಂದ ಸಾರ್ವಜನಿಕ ಸೇವಾ ಕೇಂದ್ರ

ಕಾರಟಗಿ : ಶ್ರೀ ಮಂಜುನಾಥ ಸ್ವಸಹಾಯ ಗುಂಪಿನ ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟ ಕಾಮನ್ ಸರ್ವಿಸ್ ಸೆಂಟರ್ ಮರ್ಲಾನಹಳ್ಳಿ ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯಿತಿ ಸದಸ್ಯ ಜಾವೀದ್ ಉದ್ಘಾಟಿಸಿದರು ಜ್ಞಾನವಿಕಾಸ ಸಮನ್ವಯ ಅಧಿಕಾರಿ ಲಕ್ಷ್ಮಿ ಮಾತನಾಡಿ ಸರ್ಕಾರದಿಂದ ಸರ್ವಜನಿಕರಿಗೆ ದೊರೆಯುವ ವಿವಿಧ ಸೌಲಭ್ಯಗಳ ಅರ್ಜಿಗಳನ್ನು ಶ್ರೀ ಮಂಜುನಾಥ ಶ್ರೀ ಶಕ್ತಿ ಸಂಘದ ನೂತನವಾಗಿ ಪ್ರಾರಂಭಿಸಲ್ಪಟ್ಟ ಸೇವಾಕೇಂದ್ರದಲ್ಲಿ ಅರ್ಜಿಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ವಿವಿಧ ಇಲಾಖೆಗಳಲ್ಲಿ ಸೌಲಭ್ಯಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ಇನ್ನು ಮುಂದೆ ನಮ್ಮ ಶ್ರೀ ಮಂಜುನಾಥ ಕಾಮನ್ ಸರ್ವಿಸ್ ಸೆಂಟರ್ ನಲ್ಲಿ ಸಲ್ಲಿಸಬಹುದಾಗಿದೆ .ಶ್ರೀ ಶಕ್ತಿ ಸಂಘಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವಿವಿಧ ಯೋಜನೆಗಳನ್ನು ಕೈಗೊಂಡಿದೆ ಅಂತ ಯೋಜನೆಗಳಲ್ಲಿ ಇದು ಕೂಡ ಒಂದು ಪ್ರತಿಯೊಂದು ಹಳ್ಳಿಯಲ್ಲಿ ಜನಸಾಮಾನ್ಯರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಪ್ರಥಮ ಹಂತದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಮ್ಮ ಸಂಸ್ಥೆಯಿಂದ ಕಾಮನ್ ಸರ್ವಿಸ್ ಸೆಂಟರ್ ಗಳನ್ನು ತೆರೆಯಲಾಗಿದೆ ಎಂದರು ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ಪ್ರೇಮಾವತಿ ಶಿವ ಪ್ರತಿನಿಧಿಗಳಾದ ಮಂಜುಳಾ ಮಧುಶ್ರೀ ಸುಧಾ ಒಕ್ಕೂಟದ ಸದಸ್ಯರಾದ ಭಾಗ್ಯಶ್ರೀ ಹಾಗೂ ಅಮರೇಗೌಡ ಹನುಮಂತಪ್ಪ ಇತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top