ಯಾವ ರಾಶಿಯವರಿಗೆ ಗ್ರಹಬಲ ಹೇಗಿದೆ ಒಮ್ಮೆ ನೋಡಿಕೊಳ್ಳಿ

ಮೇಷ ರಾಶಿ :  (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ)

ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ.ಮಕ್ಕಳ ವಿದ್ಯಾಭ್ಯಾಸ ಮತ್ತು ಉದ್ಯೋಗ ವಿಷಯಗಳು ನಿರಾಶಾದಾಯಕವಾಗಿರುತ್ತವೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕು. ತಾಯಿ ವರ್ಗದ ಬಂಧುಗಳಿಂದ  ವಿವಾದ ಉಂಟಾಗುತ್ತದೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ.ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ.

ಅದೃಷ್ಟದ ದಿಕ್ಕು:ಪೂರ್ವ

ಅದೃಷ್ಟದ ಸಂಖ್ಯೆ:4

 ಅದೃಷ್ಟದ ಬಣ್ಣ:ಬೂದು

 ವೃಷಭ ರಾಶಿ :  (ಇ, ಓ, ಎ, ಒ, ವಾ, ವಿ, ವು, ವೆ, ವೊ)

ಉದ್ಯೋಗದ ವಾತಾವರಣವು ತೃಪ್ತಿಕರವಾಗಿರುತ್ತದೆ. ಬಂಧುಗಳಿಂದ ಶುಭ ವಾರ್ತೆ  ದೊರೆಯುತ್ತದೆ. ಎಲ್ಲಾ ಕ್ಷೇತ್ರಗಳಿಗೂ ಆದಾಯ ಉತ್ತಮವಾಗಿರುತ್ತದೆ. ಹೊಸ ವಸ್ತ್ರ ಮತ್ತು ಅಭರಣಗಳನ್ನು ಖರೀದಿಸುತ್ತೀರಿ. ಸಹೋದರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ವೃತ್ತಿಪರ ವ್ಯವಹಾರಗಳು ಅನುಕೂಲಕರವಾಗಿ ಸಾಗುತ್ತವೆ. ಹೊಸ ವಾಹನ ಯೋಗವಿದೆ.

ಅದೃಷ್ಟದ ದಿಕ್ಕು:ಉತ್ತರ

ಅದೃಷ್ಟದ ಸಂಖ್ಯೆ:6

 ಅದೃಷ್ಟದ ಬಣ್ಣ :ಬಿಳಿ

 ಮಿಥುನ ರಾಶಿ :  (ಕಾ, ಕೀ, ಕೂ, ಘ, ಛ, ಕೆ, ಕೊ, ಹ)

ಹಣದ ವಿಚಾರವಾಗಿ ಆತುರಪಟ್ಟು ಇತರರಿಗೆ ಮಾತು ಕೊಡುವುದು ಒಳ್ಳೆಯದಲ್ಲ.ಆದಾಯಕ್ಕೆ ಮೀರಿದ ಖರ್ಚುಗಳಿರುತ್ತವೆ. ಕುಟುಂಬದ ಸದಸ್ಯರ ವರ್ತನೆಯಿಂದ  ಮಾನಸಿಕವಾಗಿ ಸ್ಥಿರತೆ ಇರುವುದಿಲ್ಲ. ವೃತ್ತಿಪರ ವ್ಯವಹಾರದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.ಆಧ್ಯಾತ್ಮಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಹೊಸ ಸಾಲದ ಪ್ರಯತ್ನಗಳು ಕೂಡಿ ಬರುವುದಿಲ್ಲ.

ಅದೃಷ್ಟದ ದಿಕ್ಕು:ಪೂರ್ವ

ಅದೃಷ್ಟದ ಸಂಖ್ಯೆ:3

 ಅದೃಷ್ಟದ ಬಣ್ಣ:ಹಳದಿ

 ಕರ್ಕ ರಾಶಿ : (ಕಾ, ಕೀ, ಕೂ, ಘ, ಛ, ಕೆ, ಕೊ, ಹ)

ಆರ್ಥಿಕ ಪರಿಸ್ಥಿತಿಯು ನಿರೀಕ್ಷೆಯಂತೆ ಇರುತ್ತದೆ.ವೃತ್ತಿಪರ ವ್ಯವಹಾರಗಳಲ್ಲಿ  ಆತ್ಮಸ್ಥೈರ್ಯದಿಂದ ಮುನ್ನಡೆಯುತ್ತೀರಿ ಮತ್ತು ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ. ಕೈಗೊಂಡ ಕಾರ್ಯಗಳಲ್ಲಿ ಅಪ್ರಯತ್ನ ಕಾರ್ಯ ಸಿದ್ದತೆ ದೊರೆಯುತ್ತದೆ.ಕುಟುಂಬ ವ್ಯವಹಾರಗಳಲ್ಲಿ ಪ್ರಮುಖ ವಿಚಾರಗಳು ಕಾರ್ಯರೂಪಕ್ಕೆ ಬರುತ್ತವೆ. ಉದ್ಯೋಗದಲ್ಲಿ ಸ್ಥಾನ ಮಾನಗಳು ಹೆಚ್ಚಾಗುತ್ತವೆ.

ಅದೃಷ್ಟದ ದಿಕ್ಕು:ದಕ್ಷಿಣ

ಅದೃಷ್ಟದ ಸಂಖ್ಯೆ:8

 ಅದೃಷ್ಟದ ಬಣ್ಣ:ನೀಲಿ

 ಸಿಂಹ ರಾಶಿ : (ಮಾ, ಮೀ, ಮೂ, ಮೊ, ಟಾ, ಟೀ, ಟೂ, ಟೆ)

ವೃತ್ತಿ ವ್ಯವಹಾರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ.ಕೈಗೊಂಡ ಕೆಲಸದಲ್ಲಿ ವಿಳಂಬ ಉಂಟಾಗುತ್ತದೆ.ಆರ್ಥಿಕ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಜಾಗ್ರತೆಯಿಂದ ವ್ಯವಹರಿಸಬೇಕು.ಮನೆಯ ಹೊರಗಿನ ಕೆಲವರ ವರ್ತನೆ ಅಚ್ಚರಿ ಮೂಡಿಸುತ್ತದೆ.ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುತ್ತೀರಿ.

ಅದೃಷ್ಟದ ದಿಕ್ಕು:ಪಶ್ಚಿಮ

ಅದೃಷ್ಟದ ಸಂಖ್ಯೆ:7

 ಅದೃಷ್ಟದ ಬಣ್ಣ:ಹಳದಿ

 ಕನ್ಯಾ ರಾಶಿ : (ಪಾ, ಪೀ, ಪೂ, ಷ, ಣ , ಪೆ , ಪೊ)

ಕುಟುಂಬ ಸದಸ್ಯರ ಸಹಕಾರದಿಂದ ಕೆಲವು ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿದ್ದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಆರ್ಥಿಕ  ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ .ಹೊಸ ಕಾರ್ಯಕ್ರಮಗಳನ್ನು ಕಾರ್ಯ ರೂಪಕ್ಕೆ ತರುತ್ತೀರಿ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ.

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಸಂಖ್ಯೆ:5

 

 ಅದೃಷ್ಟದ ಬಣ್ಣ:ಕೆಂಪು 

ತುಲಾ ರಾಶಿ : (ರಾ, ರೀ, ರೂ, ರೆ, ರೊ, ತಾ, ತೀ, ತೂ, ತೆ)

ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ. ದೂರ ಪ್ರಯಾಣದಲ್ಲಿ ಹೊಸ ಪರಿಚಯಗಳಾಗುತ್ತವೆ. ಬಾಲ್ಯದ ಗೆಳೆಯರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಳೆಯುತ್ತೀರಿ.ಕೈಗೊಂಡ ಕೆಲಸದಲ್ಲಿ ಅಡೆತಡೆಗಳನ್ನು ನಿವಾರಿಸಿಕೊಂಡು ಮುನ್ನಡೆಯುತ್ತೀರಿ.ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿ , ಹಳೆ ಸಾಲಗಳನ್ನು ಇತ್ಯರ್ಥಗೊಳಿಸುತ್ತೀರಿ.

ಅದೃಷ್ಟದ ದಿಕ್ಕು:ಪೂರ್ವ

ಅದೃಷ್ಟದ ಸಂಖ್ಯೆ:4

 ಅದೃಷ್ಟದ ಬಣ್ಣ:ನೀಲಿ

 ವೃಶ್ಚಿಕ ರಾಶಿ : (ತೊ, ನಾ, ನೀ, ತೊ, ನಾ, ನೀ, ನೆ, ನೊ, ಯಾ, ಯೀ, ಯೂ)

ಮಕ್ಕಳ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.ಕುಟುಂಬ ಸದಸ್ಯರೊಂದಿಗೆ ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಸಮಾಜದಲ್ಲಿ ಗೌರವ  ಹೆಚ್ಚಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ  ನಿರ್ಧಾರಗಳು ಕೂಡಿ ಬರುತ್ತವೆ. ವ್ಯಾಪಾರಗಳು  ಅನುಕೂಲಕರವಾಗಿರುತ್ತವೆ.ನಿರುದ್ಯೋಗಿಗಳ ಪ್ರಯತ್ನಗಳು ಫಲ ನೀಡುತ್ತವೆ.

ಅದೃಷ್ಟದ ದಿಕ್ಕು:ಉತ್ತರ

ಅದೃಷ್ಟದ ಸಂಖ್ಯೆ:6

 ಅದೃಷ್ಟದ ಬಣ್ಣ:ಬಿಳಿ

 ಧನು ರಾಶಿ : (ಥೆ, ಯೊ, ಭಾ, ಭೀ, ಭೂ, ಧಾ, ಫಾ, ಢಾ, ಭೆ)

ಇತರರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವುದು ಒಳ್ಳೆಯದು. ನಿಗದಿತ ಸಮಯಕ್ಕೆ ಸರಿಯಾಗಿ ಕೆಲಸಗಳು ಪೂರ್ಣಗೊಳ್ಳುವುದಿಲ್ಲ.ಮನೆಯ ಹೊರಗೆ ಕಿರಿಕಿರಿ  ಹೆಚ್ಚಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ನೋವುಂಟು ಮಡುತ್ತವೆ.  ಬಂಧು ಮಿತ್ರರೊಂದಿಗೆ ವಾಗ್ವಾದಗಳು ನಡೆಯುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಶ್ರಮ ವ್ಯರ್ಥವಾಗುತ್ತದೆ.

ಅದೃಷ್ಟದ ದಿಕ್ಕು:ಪೂರ್ವ

 ಅದೃಷ್ಟದ ಸಂಖ್ಯೆ : 3

 ಅದೃಷ್ಟದ ಬಣ್ಣ:ಕಿತ್ತಳೆ ಬಣ್ಣ

 

 ಮಕರ ರಾಶಿ : (ಭೊ, ಜಾ, ಜೀ, ಖೀ, ಖೂ, ಖೆ, ಖೊ, ಗಾ, ಗೀ)

ಬೆಮನೆಗೆ ಬಂಧುಗಳ ಆಗಮನ ಸಂತಸ ತರುತ್ತದೆ.ಉದ್ಯೋಗಗಳಲ್ಲಿ ವಹಿಸಿದ ಜವಾಬ್ದಾರಿಗಳು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ. ಹೊಸ ವಸ್ತು ,ವಾಹನಗಳನ್ನು ಖರೀದಿಸಲಾಗುತ್ತದೆ. ಹಣಕಾಸಿನ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ. ದೂರ  ಪ್ರಯಾಣದ ಸೂಚನೆಗಳಿವೆ. ವೃತ್ತಿಪರ ವ್ಯವಹಾರದಲ್ಲಿ ಹೊಸ ಲಾಭವನ್ನು ಪಡೆಯುತ್ತೀರಿ.

ಅದೃಷ್ಟದ ದಿಕ್ಕು:ದಕ್ಷಿಣ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ಬಣ್ಣ: ಹಳದಿ

 ಕುಂಭ ರಾಶಿ :  (ಗೂ, ಗೆ, ಗೊ, ಸಾ, ಸೀ, ಸೂ, ಸೊ, ದಾ)

ಪ್ರಮುಖ ವಿಷಯಗಳಲ್ಲಿ ಕುಟುಂಬದ ಹಿರಿಯರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಶುಭ ಸುದ್ದಿಯನ್ನು ಸ್ವೀಕರಿಸುತ್ತೀರಿ.ಮನೆಯ ಹೊರಗೆ ನಿಮ್ಮ ಮಾತುಗಳಿಗೆ ಬೆಲೆ ಹೆಚ್ಚಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಅಡೆತಡೆಗಳಿದ್ದರೂ , ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಉದ್ಯೋಗದ ವಾತಾವರಣವು ಶಾಂತಿಯುತವಾಗಿರುತ್ತದೆ.

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಸಂಖ್ಯೆ:4

 ಅದೃಷ್ಟದ ಬಣ್ಣ:ಕಂದು

 ಮೀನ ರಾಶಿ : (ದೀ, ದೂ, ಥ, ಝ, ದೆ, ದೊ, ಚಾ, ಚೀ)

ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಣಕಾಸಿನ ವಿಷಯದಲ್ಲಿ ಆತುರಪಟ್ಟು, ಇತರರಿಗೆ ಮಾತು ಕೊಡುವುದು ಒಳ್ಳೆಯದಲ್ಲ. ವೃತ್ತಿ ವ್ಯವಹಾರಗಳಲ್ಲಿ ಶ್ರಮಶೀಲತೆ ಹೆಚ್ಚಾಗುತ್ತದೆ.ಪ್ರಾರಂಭಿಸಿದ ಕೆಲಸಗಳನ್ನು ಸ್ವಲ್ಪ ನಿಧಾನವಾಗಿ ಪೂರ್ಣಗೊಳಿಸುತ್ತೀರಿ.ಸಹೋದ್ಯೋಗಿಗಳ ವರ್ತನೆಯಿಂದ ಮಾನಸಿಕ ಸಮಸ್ಯೆಗಳು ಇರುತ್ತವೆ.ವಾಹನ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು.

ಅದೃಷ್ಟದ ದಿಕ್ಕು:ಪಶ್ಚಿಮ

ಅದೃಷ್ಟದ ಸಂಖ್ಯೆ:5

 

 ಅದೃಷ್ಟದ ಬಣ್ಣ:ಉತ್ತರ

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top